ಬೆಂಗಳೂರು: ಲಾಕ್ ಡೌನ್ ನಿಂದಾಗಿ ಎಣ್ಣೆ ಇಲ್ಲದೆ 42 ದಿನಗಳನ್ನು ಮುಗಿಸಿದ ಮದ್ಯಪ್ರಿಯರಿಗೆ ಇಂದು ಬಿಗ್ ಶಾಕ್ ಸುದ್ದಿಯೊಂದು ಸಿಗುವ ಸಾಧ್ಯತೆಗಳಿವೆ. ಈಗಾಗಲೇ ಶೇ.6 ರಷ್ಟು ಅಬಕಾರಿ ಸುಂಕ ಹೆಚ್ಚಳದ ಬಿಸಿ ಅನುಭವಿಸಿದ್ದ ಮದ್ಯಪ್ರಿಯರಿಗೆ ಈಗ ಕೊರೊನಾ ಶಾಕ್ ಫಿಕ್ಸ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
Advertisement
ಹೌದು. ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆಯೆಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಅಬಕಾರಿ ಸುಂಕದ ಜೊತೆಗೆ ಮದ್ಯದ ಮೇಲಿನ ತೆರಿಗೆಯನ್ನೂ ಹೆಚ್ಚಿಸಲು ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತು ಇಂದು ಸಂಜೆಯೊಳಗಾಗಿ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಈಗಾಗಲೇ ದೆಹಲಿ ಹಾಗೂ ಆಂಧ್ರದಲ್ಲಿ ಮದ್ಯದ ಮೇಲೆ ಕೊರೊನಾ ತೆರಿಗೆ ಹಾಕಲಾಗಿದೆ. ಈ ರಾಜ್ಯಗಳ ಹಾದಿಯಲ್ಲೇ ನಮ್ಮ ರಾಜ್ಯದಲ್ಲೂ ತೆರಿಗೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.
Advertisement
Advertisement
ದೆಹಲಿಯಲ್ಲಿ ಮಧ್ಯದ ಮೇಲೆ ಶೇ.70ರಷ್ಟು ತೆರಿಗೆ ವಿಧಿಸಲಾಗಿದೆ. ಅದೇ ರೀತಿ ಆಂಧ್ರದಲ್ಲಿ ಶೇ.25 ರಷ್ಟು ತೆರಿಗೆ ವಿಧಿಸಲಾಗಿದೆ. ಇದೇ ರೀತಿ ರಾಜ್ಯ ಸರ್ಕಾರ ಕೂಡ ಅಂದಾಜು ಶೇ.17 ರಷ್ಟು ತೆರಿಗೆ ಹೆಚ್ಚಳ ಮಾಡಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸೋಮವಾರ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ
Advertisement
ಹೊಸ ದರದ ಲೇಬಲ್ ಗಳಿರುವ ಮದ್ಯದ ಸ್ಟಾಕ್ ಮುಂದಿನ ವಾರದಿಂದ ಸಪ್ಲೈ ಆಗಲಿವೆ. ಬಹಳಷ್ಟು ಮದ್ಯದ ಅಂಗಡಿಗಳು ಎಣ್ಣೆ ಮೇಲೆ ಶೇ. 6 ರಷ್ಟು ಅಬಕಾರಿ ಸುಂಕದ ಆಧಾರದಲ್ಲಿ ಈಗಾಗಲೇ ದರ ಹೆಚ್ಚಿಸಿವೆ. ಆ ಮೂಲಕ ಪ್ರತಿ ಬಾಟಲಿಗಳ ಮೇಲೂ ನಿರ್ದಿಷ್ಟ ಸ್ಲ್ಯಾಬ್ ಆಧಾರದಲ್ಲಿ ದರ ಹೆಚ್ಚಳವಾಗಿದೆ. ಲೇಬಲ್ ಅಂಟಿಸದೇ, ಹಳೆಯ ಎಂಆರ್ ಪಿ ದರದ ಮೇಲೆ ಸುಂಕ ಲೆಕ್ಕ ಹಾಕಿ ದರ ಹೆಚ್ಚಳ ಮಾಡಲಾಗಿದೆ.
ಸದ್ಯ ಹಳೆಯ ಸ್ಟಾಕ್ ಗಳಿರುವ ಹಿನ್ನೆಲೆಯಲ್ಲಿ ಹಳೆಯ ಲೇಬಲ್ ಇದೆ. ಹಾಗಾಗಿ ಈ ಹಳೆ ಎಂಆರ್ ಪಿ ದರದ ಮೇಲೆ ಹೊಸ ಸುಂಕ ಲೆಕ್ಕ ಹಾಕಿ ಮದ್ಯ ಮಾರಾಟ ನಡೆಯುತ್ತಿದೆ. ಆದರೆ ಹಲವು ಮದ್ಯದಂಗಡಿಗಳು ಹಳೆಯ ಎಂಆರ್ ಪಿ ದರದಲ್ಲೇ ಮದ್ಯ ಮಾರಾಟ ಮಾಡುತ್ತಿವೆ. ಇದನ್ನೂ ಓದಿ: ರಾಜ್ಯಕ್ಕೆ ಮದ್ಯ ಎಷ್ಟು ಮುಖ್ಯ? ಕರ್ನಾಟಕದ ಆದಾಯದಲ್ಲಿ ಎಣ್ಣೆ ಪಾಲು ಎಷ್ಟಿದೆ? ಈಗ ಎಷ್ಟು ಏರಿಕೆಯಾಗಿದೆ?
ಮುಂದಿನ ವಾರದಿಂದ ಪೂರ್ಣ ಪ್ರಮಾಣದಲ್ಲಿ ಹೊಸ ಲೇಬಲ್, ಹೊಸ ಎಂಆರ್ ಪಿ ದರ ನಿಗದಿಯಾಗಲಿದ್ದು, ಮದ್ಯದ ಅಂಗಡಿಗಳಿಗೆ ಹೊಸ ಸ್ಟಾಕ್ ಗಳು ಪೂರೈಕೆಯಾಗಲಿದೆ. ಮುಂದಿನ ವಾರದಿಂದ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಕೊರೊನಾ ತೆರಿಗೆ ಆಧರಿಸಿ ಪರಿಷ್ಕೃತ ದರದೊಂದಿಗೆ ಹೊಸ ಸ್ಟಾಕ್ ಮಾರಾಟವಾಗಲಿದೆ ಎಂಬುದಾಗಿ ತಿಳಿದುಬಂದಿದೆ.