ಬೆಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ, ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿಯೂ ಪ್ರತಿಭಟನೆಯ ಕಿಚ್ಚು ಹೊತ್ತಿ ಕೊಂಡಿದೆ. ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇರುವ ನಗರ ಸಿವಿಲ್ ನ್ಯಾಯಾಲಯದ ಮುಂದೆ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ನಿಂದ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ 50ಕ್ಕೂ ಹೆಚ್ಚು ವಕೀಲರು ಭಾಗವಹಿಸಿದ್ರು. ಈ ವೇಳೆ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಸ್ಟೇಟ್ ಅಧ್ಯಕ್ಷ ಶಂಕರಪ್ಪ ಮಾತನಾಡಿ, ಮಾನವ ಹಕ್ಕು ತಡೆ ಹಿಡಿಯಲು 144 ಸೆಕ್ಷನ್ ಜಾರಿ ಮಾಡ್ತಾರೆ. 144 ಸೆಕ್ಷನ್ ಜಾರಿ ಮಾಡೋ ಅಗತ್ಯವೇ ಇರಲಿಲ್ಲ. ಸಂವಿಧಾನ ರಚನೆ ತಕ್ಷಣ ಜನರ ಡಿವಿಷನ್ ಆಯ್ತು. ಕೇವಲ 8% ಮಾತ್ರ ಮೂಲ ವಾಸಿಗರು, ಮಿಕ್ಕವರು ವಲಸಿಗರೇ, ಅವರ ಗತಿ ಏನು ಎಂದು ಪ್ರಶ್ನಿಸಿದರು.
ಜೊತೆಗೆ ಎನ್‍ಡಿಎ ಅವರನ್ನು ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಇದರ ಬಗ್ಗೆ ಉಲ್ಲೇಖಿಸಿದ್ದಾರೆ. ಸಂವಿಧಾನದಕ್ಕೆ ಮೋಸ ಆಗುವ ಕಾನೂನು ಜಾರಿ ಆದರೆ ನಾವು ಬಿಡೋದಿಲ್ಲವೆಂದು ಎಚ್ಚರಿಸಿದರು.