Bengaluru CityDistrictsKarnatakaLatest
ಲ್ಯಾಂಬೋರ್ಗಿನಿ ಕಾರು ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರು: ಫನ್ ವರ್ಲ್ಡ್ ಮಾಲೀಕನ ಪುತ್ರ ಸನ್ನಿ ಸಬರ್ ವಾಲ್ ರೇಸ್ ಮಾಡಿ, ಲ್ಯಾಂಬೋರ್ಗಿನಿ ಕಾರನ್ನು ಪೊಲೀಸ್ ಚೌಕಿಗೆ ಗುದ್ದಿಸಿದ್ದು ದೊಡ್ಡ ಸುದ್ದಿಯಾಗಿತ್ತು.
ಸಿಟಿಒ ಜಂಕ್ಷನ್ ನಲ್ಲಿರುವ ಪೊಲೀಸ್ ಚೌಕಿಗೆ ಸನ್ನಿ ಸಬರ್ ವಾಲ್ ತನ್ನ ಲ್ಯಾಂಬೋರ್ಗಿನಿ ಕಾರು ಗುದ್ದಿಸಿದ್ದ. ಆ ಬಳಿಕ ಸ್ಥಳದಲ್ಲೇ ಕ್ಯಾಮೆರಾಗೆ ಪೋಸ್ ಕೂಡ ಕೊಟ್ಟಿದ್ದ ಸನ್ನಿ ಸಬರ್ ವಾಲ್‍ನನ್ನು ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಅರೆಸ್ಟ್ ಮಾಡಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದರು. ಇದೀಗ ಅವತ್ತು ಅಪಘಾತ ಮಾಡಿದಾಗಿನ ವಿಡಿಯೋ ಲಭ್ಯವಾಗಿದೆ.
ಮೂರು ಐಷಾರಾಮಿ ಕಾರುಗಳು ಸಿಗ್ನಲ್‍ನಲ್ಲಿ ಒಂದರ ಪಕ್ಕದಲ್ಲಿ ಒಂದರಂತೆ ಬಂದು ನಿಂತಿವೆ. ಆಗ ಜೋರಾಗಿ ಹೋಗಿ ಕಾರ್ ಯೂಟರ್ನ್ ಮಾಡಿರುವ ಸನ್ನಿ ಸಬರ್ ವಾಲ್, ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಎಲ್ಲಾ ದೃಶ್ಯಗಳು ಮತ್ತೊಂದು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.