ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಕಳ್ಳಾಟ ಬಲು ಜೋರಾಗಿದೆ. ಬೇಡ ಬೇಡ ಅಂತ ಹೇಳಿದರೂ ಕದ್ದು ಮುಚ್ಚಿ ಮಾಡ್ತಾನೆ ಇರುತ್ತಾರೆ. ಲಾಲ್‍ಬಾಗ್‍ನಲ್ಲಿ ನಿಷೇಧ ಗೊತ್ತಿದ್ದರೂ ಫೋಟೋಶೂಟ್ ಮಾಡಿಸಿಕೊಳ್ಳುವವರು ಯಾವುದೇ ಕಾರಣಕ್ಕೆ ಸುಮ್ಮನೆ ಇರಲ್ಲ.
ಹೌದು. ಲಾಲ್‍ಬಾಗ್‍ನಲ್ಲಿ ಕಳೆದ 6 ತಿಂಗಳಿಂದ ಚಿತ್ರೀಕರಣವನ್ನ ನಿಷೇಧಿಸಲಾಗಿದೆ. ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೊಟೋಶೂಟ್ ಬ್ಯಾನ್ ಮಾಡಲಾಗಿದೆ. ಅದರಲ್ಲೂ ಜನರು ಮಾತ್ರ ಬಿಡಲ್ಲ. ಕದ್ದು ಮುಚ್ಚಿ ನೀ ಹಿಂಗೆ ನಿಂತ್ಕೋ, ಈ ಜಾಗದಲ್ಲಿ ಈ ಫೋಟೋ ಓಕೆ, ಮತ್ತೆ ಬ್ಯಾಗ್ರೌಂಡ್‍ಗೆ ತಕ್ಕಂತೆ ಡ್ರೆಸ್ ಚೇಂಜ್ ಮಾಡು ಅಂತ ಫೋಟೋಶೂಟ್ ಕಳ್ಳಾಟ ನಿತ್ಯ ನಡೆಯುತ್ತಿದೆ. ಇದು ತೋಟಗಾರಿಕೆ ಇಲಾಖೆ ಪ್ರಕಾರ ನಿಯಮ ಬಾಹಿರವಾಗಿದೆ.
Advertisement
Advertisement
ಸ್ಲೋ ಲೈಫು ಬೋರ್ ಆಗಿದೆ ಅನ್ನುವಂತೆ ಎಲ್ಲರೂ ಸಿನಿಮೀಯ ಮಾದರಿಗೆ ಮೊರೆ ಹೋಗ್ತಾ ಇದ್ದಾರೆ. ಮಕ್ಕಳನ್ನ ಮರದ ಮೇಲೆ ಹತ್ತಿಸುವುದು. ಮತ್ತೆ ಅಪ್ಪ-ಅಮ್ಮನ ಮೇಲೆ ಪ್ರೀತಿಯಿಂದ ಎಗರುವುದು. ಹೀಗೆ ಮಂಗಾಟದ ಫೋಟೋ ಶೂಟ್‍ಗೆ ಮುಗಿ ಬೀಳ್ತಾ ಇದ್ದಾರೆ. ಈ ಹಿಂದೆ 2016ರಲ್ಲಿ 6 ವರ್ಷದ ವಿಕ್ರಮ್ ಎಂಬ ಬಾಲಕ ಸೆಲ್ಫಿ ತೆಗೆಸಿಕೊಳ್ಳುವಾಗ ಕಲ್ಲು ಬಿದ್ದು ಸಾವನ್ನಪ್ಪಿದ ಪ್ರಕರಣ ಈಗಲೂ ಪೋಷಕರ ಎದೆನಡುಗಿಸುತ್ತದೆ. ಈ ಹಿನ್ನೆಲೆಯಲ್ಲಿ ಕೆಲ ಕಡೆ ಸೆಲ್ಫಿ ನಿಷೇಧವಿದೆ. ಅದಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
Advertisement
Advertisement
ನಾನು ಕಾಡಿಗೆ ಹೋಗಿದ್ದೆ, ಟ್ರಕ್ಕಿಂಗ್ ಮಾಡಿದ್ದೆ. ಹೀಗೆ ಬಡಾಯಿ ಕೊಚ್ಚಿಕೊಳ್ಳಲು ಕೆಲ ಪಡ್ಡೆ ಯುವಪಡೆ ತಂಡ ಲಾಲ್‍ಬಾಗ್‍ಗೆ ಬಂದು ಬಿಡುತ್ತೆ. ಕಾಡಿನ ಸೀನ್‍ಗೆ ಮ್ಯಾಚ್ ಆಗುವಂತೆ ಇಲ್ಲೂ ಮರಗಳ ರೆಂಬೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ತಾ ಇದ್ದಾರೆ. 250 ಎಕರೆಯ ಲಾಲ್‍ಬಾಗ್‍ನಲ್ಲಿ ನೂರಾರು ಕುರ್ಚಿಗಳಿವೆ. ಅದರಲ್ಲಿ ಕುಳಿತುಕೊಳ್ಳುವ ಬದಲು ಜನರು ಹುಲ್ಲಿನ ಕುಳಿತುಕೊಳ್ತಾರೆ. ಇದರಿಂದ ಸುತ್ತಮುತ್ತಲಿನವರೆಗೆ ಮುಜುಗರ. ಅದರಲ್ಲಿ ಫೋಟೋಶೂಟ್ ಬೇರೆ ಮಾಡ್ತಾರೆ. ಇದೆಲ್ಲ ತಪ್ಪು ಅಂತ ಭದ್ರತಾ ಸಿಬ್ಬಂದಿ ವಾರ್ನಿಂಗ್ ಕೊಟ್ಟರೂ ಡೋಂಟ್ ಕೇರ್ ಅಂತಾರೆ.
ಲಾಲ್‍ಬಾಗ್ ಜನರ ಆರ್ಕಷಣೆ ಮಾಡುವ ಕೇಂದ್ರವಾಗಿದ್ದು, ಲಕ್ಷಾಂತರ, ಸಾವಿರಾರು ಜನರು ಭೇಟಿ ಕೊಡುತ್ತಾ ಇರುವ ಜಾಗವಾಗಿದೆ. ಹೀಗಿರೊವಾಗ ಲಾಲ್‍ಬಾಗ್‍ನಲ್ಲಿ ಈ ಫೋಟೋಶೂಟ್ ಅದಕ್ಕಾಗಿ ಬಟ್ಟೆ ಬದಲಾಯಿಸುವುದು ಸಾಕಷ್ಟು ಮುಜುಗರ ತಂದಿದೆ. ಹೀಗಾಗಿ ಸಂಪೂರ್ಣವಾಗಿ ಲಾಲ್‍ಬಾಗ್‍ನಲ್ಲಿ ಫೋಟೋಶೂಟ್ ಬ್ಯಾನ್ ಮಾಡಿದ್ದಾರೆ. ಆದರೂ ಕಳ್ಳಾಟ ಮಾಡಿ ಫೋಟೋ ಕ್ಲಿಕ್ಕಿಸೋರ ಸಂಖ್ಯೆನೇ ಜಾಸ್ತಿ. ಫೋಟೋಶೂಟ್ ನಿಷೇಧದ ನಡುವೆ ಫೋಟೋ ತೆಗೆದ್ರೆ, ಡೇಂಜರ್ ಅಂತ ಬರೆದಿರುವ ಕಡೆ ಫೋಟೊ ತೆಗೆಯುವುದು, ಅಶ್ಲೀಲವಾಗಿ ಕೂತು ಫೋಟೋ ತೆಗೆಯೋದು ಮಾಡಿದರೆ ಭದ್ರತೆ ಸಿಬ್ಬಂದಿ ವಾರ್ನಿಂಗ್ ಕೊಡ್ತಾರೆ. ಬಗ್ಗದಿದ್ರೆ ಠಾಣೆ ಮೆಟ್ಟಿಲು ಹತ್ತಬೇಕಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ಆಯುಕ್ತ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.