ಬೆಂಗಳೂರು: ಕೋಗಿಲು ಲೇಔಟ್ ಅಕ್ರಮ ಒತ್ತುವರಿ (Kogilu Layout Demolition) ವಿವಾದದಲ್ಲಿ ರಾಜ್ಯ ಸರ್ಕಾರ (Karnataka Government) ತಾನೇ ಚಾಟಿ ಕೊಟ್ಟು ಪೆಟ್ಟು ತಿನ್ನುತ್ತಿದೆ.
ಹೌದು. ಒಂದು ಕಡೆ ಅಕ್ರಮ ನಿವಾಸಿಗಳಿಂದ ಹಸಿ ಹಸಿ ಸುಳ್ಳು ಹೇಳುತ್ತಿದ್ದರೆ ಮತ್ತೊಂದು ಕಡೆ ನಾವು ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಮನೆಕೊಟ್ಟಿಲ್ಲ ಫಲಾನುಭವಿಗಳು ದೂರುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ರಾಜ್ಯ ಸರ್ಕಾರ ಮಾತ್ರ ಹೈಕಮಾಂಡ್ (Congress High Command) ಒತ್ತಡದಿಂದ ಶಾಸಕರ ಕೋಟಾದಡಿ ತರಾತುರಿಯಲ್ಲಿ ನಿವೇಶನ ನೀಡಲು ಮುಂದಾಗಿದೆ.
ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸೇರಿದ ಸರ್ಕಾರಿ ಜಾಗ 2021ರಲ್ಲಿ ಖಾಲಿ ಖಾಲಿ ಇತ್ತು. ಆದರೆ 2023ಕ್ಕೆ ಮನೆಗಳು ಪ್ರತ್ಯಕ್ಷವಾಗಿವೆ. ಇದನ್ನು ಮನಗಂಡೇ ಅಕ್ರಮವಾಸಿಗಳ ಮನೆಗಳನ್ನು ಸರ್ಕಾರ ಮನೆಗಳನ್ನು ಕೆಡವಿದೆ. ಆದರೆ ಹೈಕಮಾಂಡ್ ಒತ್ತಡಕ್ಕೆ ಮಣಿದು ಅಕ್ರಮ ನಿವಾಸಿಗಳಿಗೆ ಶಾಸಕರ ಕೋಟಾದಡಿ ರಾಜೀವ್ ಗಾಂಧಿ ವಸತಿ ಸಮುಚ್ಚಯದಲ್ಲಿ ಮನೆ ನೀಡಲು ಮುಂದಾಗಿದೆ. ಇತ್ತ ಸುಳ್ಳುಗಳನ್ನ ಹೆಣೆದು ಮನೆ ಪಡೆಯಲು ಇದ್ದಕ್ಕಿದ್ದಂತೆ ಮನೆ ಕಟ್ಟಿ ನಮ್ಮದೇ ಜಾಗ ಎಂಬ ವರಸೆ ಆರಂಭಿಸಿದ್ದಾರೆ.
ಮೊದಲಿನಿಂದಲೂ ವಾಸ ಎಂಬ ಬುರುಡೆ
2020ರಲ್ಲಿ ಗೂಗಲ್ ಮ್ಯಾಪ್‌ನಲ್ಲಿ ಕಲ್ಲಿನ ಕ್ವಾರಿ, ನೀರು ಎಲ್ಲವೂ ಕಾಣುತ್ತಿದೆ. ಆದರೆ 2023ರ ಮ್ಯಾಪ್‌ನಲ್ಲಿ ಇದ್ದಕ್ಕಿದ್ದಂತೆ ಶೆಡ್‌ಗಳು ತಲೆ ಎತ್ತಿವೆ. ಏಕಾಏಕಿ ಬಂದು ಶೆಡ್ ಹಾಕಿಕೊಂಡು ಅಕ್ರಮ ವಾಸ ಮಾಡಿದ್ದಾರೆ. ಎರಡು ವರ್ಷದ ಅಕ್ರಮವಾಗಿ ನೆಲೆಸಿ ಸ್ಥಳೀಯರೆಂದು ಸುಳ್ಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಮುಂಗಡ ಹಣ ಪಾವತಿಸಿದವರಿಗೆ ಇಲ್ಲ, ಅಕ್ರಮ ಜಾಗದಲ್ಲಿ ನೆಲೆಸಿದವರಿಗೆ ಫಟಾಫಟ್ ಮನೆ!
ಸ್ಥಳೀಯ ದಾಖಲೆಗಳು ಇವೆ ಎಂದು ಸುಳ್ಳು
ಕೋಗಿಲು ಲೇಔಟ್ ಅಕ್ರಮ ವಾಸಿಗಳ ದಾಖಲೆಯೇ ಗೊಂದಲದ ಗೂಡಾಗಿದೆ. ಹಲವರ ಬಳಿ ಕರ್ನಾಟಕದ ದಾಖಲೆಗಳೇ ಸಿಗುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದವರು ಎಂಬ ಮಾಹಿತಿ ಸಿಕ್ಕಿದೆ. ಅಗತ್ಯ ದಾಖಲೆಗಳು ಸಿಗದೇ ಅಧಿಕಾರಿಗಳೇ ಈಗ ಗೊಂದಲದಲ್ಲಿದ್ದಾರೆ.
ಶೆಡ್‌ನಲ್ಲಿ ಇಲ್ಲದವರಿಂದಲೂ ಮನೆಗೆ ಬೇಡಿಕೆ
ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ 164 ಶೆಡ್‌ಗಳನ್ನು ತೆರವು ಮಾಡಲಾಗಿದೆ. ಆದರೆ ಈಗ ಉಚಿತ ಮನೆ ಸಿಗುತ್ತಿದೆ ಎಂಬ ಕಾರಣಕ್ಕೆ 200ಕ್ಕೂ ಹೆಚ್ಚು ಕುಟುಂಬದಿಂದ ಮನೆಗೆ ಅರ್ಜಿ ಸಲ್ಲಿಕೆಯಾಗಿದೆ. ಅಕ್ರಮ ವಾಸಿಗಳ ಜೊತೆ ಇನ್ನಷ್ಟು ಅಕ್ರಮದಾದರರು ಲಗ್ಗೆ ಇಟ್ಟಿದ್ದು ಹಲವರು ಹೊರಗಿನವರಾದ್ರೂ ನಾವು ಬೆಂಗಳೂರು ಎಂದು ಬುರುಡೆ ಬಿಡುತ್ತಿದ್ದಾರೆ.
ಅರ್ಹರಿಗಷ್ಠೆ ಸೂರು ಎಂದು ಸರ್ಕಾರದ ಬುರುಡೆ
ಹಾಲಿ ಇರುವ ನಿಯಮಾವಳಿಗಳಲ್ಲಿ ಮನೆಯನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಈಗಾಗಲೇ ಹಲವು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದರೂ ಅವರಿಗೆ ಬೇರೆ ಬೇರೆ ಕಾರಣ ನೀಡಿ ಮನೆಗಳನ್ನು ಹಂಚಿಕೆ ಮಾಡಿಲ್ಲ. ಹೀಗಿರುವಾಗ ತರಾತುರಿಯಲ್ಲಿ ಸರ್ಕಾರ ಅರ್ಹರನ್ನು ಹುಡಿಕು ಹಂಚಿಕೆ ಮಾಡಲು ಮುಂದಾಗಿದೆ.

