ಬೆಂಗಳೂರು: ಪಬ್ಲಿಕ್ ಟಿವಿಯ ವರದಿಯಿಂದ ಖತರ್ನಾಕ್ ಅಪಹರಣ ಗ್ಯಾಂಗ್ ಖಾಕಿ ಖೆಡ್ಡಾಗೆ ಬಿದ್ದಿದೆ. ಮನೆ ಡೋರ್ ಬಡಿದು ಮಹಿಳೆಯನ್ನು ಅಪಹರಣ ಮಾಡಿದ್ದ ಖತರ್ನಾಕ್ ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಂಕರ್, ರಾಮಕೃಷ್ಣ, ರಾಜೇಶ್, ರಾಹುಲ್ ಎಂದು ಗುರುತಿಸಲಾಗಿದೆ. ಯಲಹಂಕದ ಬೆಸ್ತರ ಬೀದಿಯಲ್ಲಿ ಫೆಬ್ರುವರಿ 10ರಂದು 6 ಜನರ ತಂಡ, ಗೃಹಿಣಿ ಅನಿತಾ ಅವರನ್ನು ಕಿಡ್ನ್ಯಾಪ್ ಮಾಡಿದ್ದರು. ಈ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಫೆಬ್ರವರಿ 23ರಂದು ಪಬ್ಲಿಕ್ ಟಿವಿ ದಂಗು ಬಡಿಸುವ ಸಿಸಿಟಿವಿ ಸಮೇತ ಪೂರ್ತಿ ವರದಿಯನ್ನು ಪ್ರಸಾರ ಮಾಡಿತ್ತು.
ಈ ವರದಿ ಪ್ರಸಾರ ಬೆನ್ನಲ್ಲೇ ಯಲಹಂಕ ಪೊಲೀಸರು ಮತ್ತಷ್ಟು ಅಲರ್ಟ್ ಆಗಿ ಆರೋಪಿಗಳಿಗಾಗಿ ಶೋಧ ನಡೆಸಿದ್ದರು. ಕಳೆದ ಮೂರು ದಿನಗಳ ಹಿಂದೆ ಚಿಕ್ಕಬಳ್ಳಾಪುರದ ಅಜ್ಞಾತ ಸ್ಥಳದಲ್ಲಿದ್ದ ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದಾರೆ. ಅನಿತಾ ಅವರ ಅಪಹರಣಕ್ಕೆ ಬಳಸಿದ್ದ ಕೆಎ 53, ಎಂ 8424 ನಂಬರಿನ ಓಮಿನಿ ವ್ಯಾನ್ ಅನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.