ಬೆಂಗಳೂರು: ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಖಡಕ್ ಲುಕ್ ಹಾಗೂ ಬೇರ್ ಬಾಡಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸುದೀಪ್ ಅವರು ಪೈಲ್ವಾನ್ ಸಿನಿಮಾದ ಸಮಯದಲ್ಲಿ ತಮ್ಮ ದೇಹವನ್ನು ದಂಡಿಸಿ ಖಡಕ್ ಬಾಡಿ ಮಾಡಿದ್ದರು. ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿವೆ.
ಕಿಚ್ಚನ ಖಡಕ್ ಲುಕ್ ಇರುವ ಈ ಫೋಟೋಗಳನ್ನು ಹಂಚಿಕೊಂಡಿರುವ ನಿರ್ದೇಶಕ ಪವನ್ ಒಡೆಯರ್, ಬಹಳ ಚೆನ್ನಾಗಿದೆ ಹಾಗೂ ಸ್ಫೂರ್ತಿದಾಯಕವಾಗಿದೆ. ಕಿಚ್ಚ ಸುದೀಪ್ ಸರ್ ನಿಮ್ಮ ಈ ಉತ್ಸಾಹ ನಮಗೆ ಪ್ರೇರಣೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಅವರು ಕೂಡ ರೀಪ್ಲೈ ಮಾಡಿದ್ದು, ನಾನು ಇನ್ನೊಬ್ಬರಿಗೆ ಸ್ಫೂರ್ತಿ ಆಗುತ್ತೇನೆ ಎಂದರೆ ನನಗೂ ಖುಷಿಯಾಗುತ್ತದೆ. ಲವ್ ಯೂ ಸ್ನೇಹಿತ ಎಂದು ಬರೆದುಕೊಂಡಿದ್ದಾರೆ.
I'm glad I could be of some inspiration my friend @PavanWadeyar . Mch luv to u always. https://t.co/1EMa1goKJC
— Kichcha Sudeepa (@KicchaSudeep) May 6, 2020
ಕಿಚ್ಚನ ಈ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಈ ಫೋಟೋಗೆ ಅಸ್ಸಾಂ ರಾಜ್ಯದ ಕಿಚ್ಚ ಸುದೀಪ್ ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದು, ನಾನು ನಿಮ್ಮ ದೊಡ್ಡ ಅಭಿಮಾನಿ ಸರ್, ಅಸ್ಸಾಂನಿಂದ ನಿಮಗೆ ತುಂಬು ಹೃದಯದ ಪ್ರೀತಿ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ನೀವು ಯಾವ ಹಾಲಿವುಡ್ ಹೀರೋಗೂ ಕಮ್ಮಿ ಇಲ್ಲ ಸರ್ ಎಂದು ಕಮೆಂಟ್ ಮಾಡಿದ್ದಾರೆ.
@KicchaSudeep lots of love from assam sir????❣️ big fan of yu sir frm Assam????????
— Rohan Choudhury(Singing) (@RohanSinging) May 6, 2020
ಕಳೆದ ವರ್ಷ ಸೆಪ್ಟಂಬರ್ ನಲ್ಲಿ ತೆರೆಕಂಡ ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಅವರು ತನ್ನ ದೇಹವನ್ನು ದಂಡಿಸಿದ್ದರು. ಈ ಸಿನಿಮಾದಲ್ಲಿ ಕಿಚ್ಚ ಕುಸ್ತಿಪಟು ಮತ್ತು ಬಾಕ್ಸರ್ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಇದೇ ಸಮಯದಲ್ಲಿ ಅವರು ಬಾಲಿವುಡ್‍ನಲ್ಲಿ ಸಲ್ಮಾನ್ ಖಾನ್ ಅವರು ಜೊತೆ ದಬಾಂಗ್-3 ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಕಿಚ್ಚ ಬೇರ್ ಬಾಡಿಯಲ್ಲಿ ಸಲ್ಲು ಜೊತೆ ಫೈಟ್ ಮಾಡಿ ಸೈ ಎನಿಸಿಕೊಂಡಿದ್ದರು.
ಸದಾ ಸಾಮಾಜಿಕ ಜಾಲತಾಣಲದಲ್ಲಿ ಸಕ್ರಿಯವಾಗಿ ಇರುವ ಕಿಚ್ಚ ಸುದೀಪ್ ಅವರು, ನೆನ್ನೆ ಅವರ ಅಪ್ಪ-ಅಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು. ಜೊತೆಗೆ ಅವರ ಫ್ಯಾನ್ಸ್‍ಗಳ ಹುಟ್ಟುಹಬ್ಬಕ್ಕೆ ಕೂಡ ವಿಶ್ ಮಾಡುತ್ತಾರೆ. ಕಿಚ್ಚನ ಅಭಿಮಾನಿ ಬಳಗದಿಂದ ಲಾಕ್‍ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡುತ್ತಿರುವವರಿಗೆ ಟ್ವಿಟ್ಟರ್ ಮೂಲಕವೇ ಹುರಿದುಂಬಿಸುವ ಕೆಲಸ ಮಾಡುತ್ತಾರೆ.
ಸದ್ಯ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಆದರೆ ಕೊರೊನಾ ಲಾಕ್‍ಡೌನ್ ಆದ ಕಾರಣ ಚಿತ್ರದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಇದರಲ್ಲಿ ಕಿಚ್ಚನಿಗೆ ಜೋಡಿಯಾಗಿ ಮಡೋನಾ ಸೆಬಾಸ್ಟಿಯನ್ ನಟಿಸಿದ್ದಾರೆ. ಈ ಸಿನಿಮಾದ ನಂತರ ಕಿಚ್ಚ ಅನೂಪ್ ಬಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ.