ಬೆಂಗಳೂರು: 11 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ (Bengaluru Karaga Festival) ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ಏಪ್ರಿಲ್ 1 ರಂದು ಕರಗ ಉತ್ಸವ ನಡೆಸಲು ಮುಜರಾಯಿ ಇಲಾಖೆಯು, ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನಿರ್ಧರಿಸಿದೆ.

ಈ ಬಾರಿಯ ಬೆಂಗಳೂರು ಕರಗ ಏಪ್ರಿಲ್ -1 ರಂದು ನಡೆಯಲಿದೆ. 11 ದಿನಗಳ ಕಾಲ ನಡೆಯುವ ಕರಗ ಅದ್ಧೂರಿ ಉತ್ಸವಕ್ಕೆ ಮಾರ್ಚ್ 24 ರಂದು ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗುತ್ತದೆ. ಮಾರ್ಚ್ 30 ರಂದು ಹಸಿ ಕರಗ ನಡೆಯಲಿದೆ. ಅದ್ರಲ್ಲೂ ಈ ಬಾರಿ ಮೈಸೂರು ದಸರಾ ಮಾದರಿಯಲ್ಲೇ ಕರಗ ಮಹೋತ್ಸವಕ್ಕೆ ಪ್ಲ್ಯಾನ್ ರೂಪಿಸುತ್ತಿದ್ದೇವೆ ಅಂತಾ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ. ಇದನ್ನೂ ಓದಿ: 2028 ಕ್ಕೂ ಕಾಂಗ್ರೆಸ್ ಬರಬೇಕು, ಅದಕ್ಕಾಗಿ ಹೈಕಮಾಂಡ್ ಕುರ್ಚಿ ಗೊಂದಲ ಬಗೆಹರಿಸಬೇಕು: ಗಣಿಗ ರವಿಕುಮಾರ್

ಇನ್ನು ಕರಗ ಕಮೀಷನ್ ವಿಚಾರ ಪಬ್ಲಿಕ್ ಟಿವಿಯಲ್ಲಿ (PUBLiC TV) ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಇಲಾಖೆ ಈ ಬಾರಿ ಅನುದಾನದ ಬಳಕೆ ರಿಲೀಸ್ ಟೆಂಡರ್ ಜವಾಬ್ದಾರಿಯನ್ನ ಜಿಬಿಎ ಹೆಗಲಿಗೆ ವಹಿಸಲಿದೆ. ದೇಗುಲದ ಒಳಗಿನ ಸಿದ್ಧತೆ ಮಾತ್ರ ಮುಜರಾಯಿ ನೋಡಿಕೊಳ್ಳಲಿದೆ ಅಂತಾ ಸಚಿವರು ಹೇಳಿದ್ರು. ಇನ್ನು ದೇವಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕಾತಿಯೂ ನಡೆದಿದ್ದು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಚಿಂತನೆ ನಡೆದಿದೆಯಂತೆ. ಈ ಬಾರಿ ವಿಶೇಷ ಕರಗ ನಡೆಸುತ್ತೇವೆ ಅಂತಾ ವ್ಯವಸ್ಥಾಪನಾ ಸಮಿತಿ ಹೇಳಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ಹೊಸ ರೂಲ್ಸ್

16ನೇ ಬಾರಿಗೆ ಕರಗ ಹೊರಲಿದ್ದಾರೆ ಜ್ಞಾನೇಂದ್ರ ಸ್ವಾಮಿ
ಏಪ್ರಿಲ್ 1 ರಂದು ನಡೆಯಲಿರುವ ಶಕ್ತ್ಯೋತ್ಸವದಲ್ಲಿ ಎ. ಜ್ಞಾನೇಂದ್ರ ಸ್ವಾಮಿ ಕರಗ ಹೊರಲಿದ್ದಾರೆ. ಕಳೆದ ವರ್ಷ 15ನೇ ಬಾರಿ ಯಶಸ್ವಿಯಾಗಿ ಕರಗ ಹೊತ್ತಿದ್ದ ಜ್ಞಾನೇಂದ್ರ ಸ್ವಾಮಿ, ಈ ಸಲ 16ನೇ ಬಾರಿಗೆ ಕರಗ ಹೊರಲಿದ್ದಾರೆ. ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸುವಂತೆ ಮನವಿ – ಪ್ರಧಾನಿ ಮೋದಿ, ರಾಜ್ಯಪಾಲರಿಗೆ ಪತ್ರ ಬರೆದ ಅರವಿಂದ ಬೆಲ್ಲದ್

