ಕೊರೊನಾ ಎರಡನೇ ಅಲೆ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರರಂಗದಲ್ಲೂ ಸಿನಿಮಾ ಕೆಲಸಗಳು ಗರಿಗೆದರಿದ್ದವು. ಒಂದಾದ ಮೇಲೆ ಒಂದು ಸಿನಿಮಾ ತಂಡಗಳು ತಮ್ಮ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸೋಕೆ ಶುರುವಿಟ್ವು. ಆದರೆ ಚಿತ್ರಮಂದಿರದಲ್ಲಿ ಮಾತ್ರ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶವಿತ್ತು. ಇದರಿಂದಾಗಿ ಕೆಲ ಸಿನಿಮಾ ತಂಡಗಳು ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಿದವು. ಆದರೆ ಆಗಿದ್ದಾಗಲಿ ನಮ್ಮ ಸಿನಿಮಾ ಕಂಟೆಂಟ್ ಚೆನ್ನಾಗಿದೆ, ಸಿನಿಮಾ ಬಿಡುಗಡೆ ಮಾಡೋದೇ ಎಂದು ಮುಂದೆ ಬಂದಿದ್ದು ಗ್ರೂಫಿ ಚಿತ್ರತಂಡ. ಇದನ್ನೂ ಓದಿ: ಪ್ರಕೃತಿ ಮಡಿಲಲ್ಲಿ ಸ್ನೇಹಿತರ ಪಯಣಕ್ಕೆ ಸೆಲ್ಫೀ ನೀಡಿತು ರೋಚಕ ಟ್ವಿಸ್ಟ್
‘ಗ್ರೂಫಿ’ ಹೊಸತಂಡ, ಹೊಸ ಪ್ರತಿಭೆಗಳನ್ನೊಳಗೊಂಡ ಚಿತ್ರ. ಒಂದ್ಕಡೆ ಚಿತ್ರಮಂದಿರದಲ್ಲಿ 50ರಷ್ಟು ಪ್ರೇಕ್ಷಕರಿಗೆ ಅನುಮತಿ, ಇನ್ನೊಂದು ಕಡೆ ಮೂರನೇ ಅಲೆಯ ಆತಂಕ. ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಎಂಟು ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧ. ಈ ಎಲ್ಲಾ ಆತಂಕವನ್ನು ಜೋಳಿಗೆಯಲ್ಲಿಟ್ಟುಕೊಂಡು ಸಿನಿಮಾ ಮೇಲಿನ ಕಾನ್ಫಿಡೆನ್ಸ್ ನಿಂದ ಆಗಸ್ಟ್ 20 ರಂದು ಸಿನಿಮಾ ಬಿಡುಗಡೆ ಮಾಡಿತ್ತು ಚಿತ್ರತಂಡ. ನಿರೀಕ್ಷೆಯಂತೆ ಮೊದಲ ದಿನ ಚಿತ್ರಕ್ಕೆ ಉತ್ತಮ ಓಪನಿಂಗ್ ಕೂಡ ಸಿಕ್ಕಿತ್ತು. ದಿನದಿಂದ ದಿನಕ್ಕೆ ಸಿನಿಮಾ ಮೇಲೆ ಪ್ರೇಕ್ಷಕರ ಆರ್ಶೀವಾದವೂ ಹೆಚ್ಚಾಯಿತು. ಇದೀಗ ‘ಗ್ರೂಫಿ’ ಇದ್ದ ಎಲ್ಲಾ ಅಡೆತಡೆಗಳನ್ನು ದಾಟಿ 25 ದಿನದ ಸಂಭ್ರಮಕ್ಕೆ ಕಾಲಿಟ್ಟಿದೆ. ಹೊಸಬರ ಚಿತ್ರಕ್ಕೆ ಸಿಕ್ಕ ಪ್ರೋತ್ಸಾಹ, ಪ್ರೀತಿ ಕಂಡು ಚಿತ್ರತಂಡ ಕೂಡ ಥ್ರಿಲ್ ಆಗಿದೆ. ಇದನ್ನೂ ಓದಿ: ‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್
ನಿರ್ಮಾಪಕ ಕೆ.ಜಿ ಸ್ವಾಮಿ ಅವರಿಗೆ ಇದು ಮೊದಲ ಸಿನಿಮಾ. ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿದ್ದ ಅಡೆತಡೆಗಳು ಅವರಲ್ಲೂ ಆತಂಕ ಉಂಟು ಮಾಡಿತ್ತು. ಎಲ್ಲಾ ಇತಿಮಿತಿಗಳ ನಡುವ ಒಂದಿಷ್ಟು ಸೆಂಟರ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಆದ್ರೀಗ ಎಲ್ಲಾ ಅಡೆತಡೆ ದಾಟಿ ಚಿತ್ರ ಸಕ್ಸಸ್ ಫುಲ್ ಪ್ರದರ್ಶನ ಕಾಣುತ್ತಿರೋದು ನಿರ್ಮಾಪಕರ ಮೊಗದಲ್ಲೂ ಸಂತಸ ತಂದಿದೆ. ಡಿ.ರವಿ ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬಂದ ಚೊಚ್ಚಲ ಚಿತ್ರ ‘ಗ್ರೂಫಿ’. ಸಸ್ಪೆನ್ಸ್, ಥ್ರಿಲ್ಲರ್, ಹಾರಾರ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಆರ್ಯನ್, ಪದ್ಮಶ್ರೀ ಜೈನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ಹಾಗೂ ಲಕ್ಷೀಕಾಂತ್ ಛಾಯಾಗ್ರಹಣವಿದೆ. ಇದನ್ನೂ ಓದಿ: ‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಕೆ.ಜಿ.ಸ್ವಾಮಿ