ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಮೊದಲ ಬಾರಿ ಕಂಬಳ (Kambala) ಆಯೋಜನೆ ಮಾಡಿದ್ದು, ಈ ನಡುವೆ ಬೃಹತ್ ಬೆಂಗಳೂರು ಮಹಾಮನಗರ ಪಾಲಿಕೆ (BBMP) ಆಯೋಜಕರಿಗೆ ಶಾಕ್ ನೀಡಿದೆ.
ಇತಿಹಾಸ ಪ್ರಸಿದ್ಧ ಕರಾವಳಿ ಕಂಬಳ ಉತ್ಸವಕ್ಕೆ ಶುಭ ಕೋರಿ ಅರಮನೆ ಮೈದಾನದ (Palace Ground) ಮುಂದೆ ಹಾಗೂ ಬಳ್ಳಾರಿ ರಸ್ತೆಯ ಪಕ್ಕದಲ್ಲಿ ಫ್ಲೆಕ್ಸ್ ಹಾಕಲಾಗಿತ್ತು. ಈ ಸಂಬಂಧ ಬಿಬಿಎಂಪಿಯು ಸದಾಶಿವನಗರ ಠಾಣೆಗೆ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅರಮನೆ ಮೈದಾನದ ಸುತ್ತಮುತ್ತ ಹಾಕಿರುವ ಬ್ಯಾನರ್ ತೆರವುಗೊಳಿಸಲಾಗಿದೆ. ಅಲ್ಲದೆ ಬಿಬಿಎಂಪಿಯು ಆಯೋಜಕರಿಗೆ 50 ಸಾವಿರ ದಂಡ ವಿಧಿಸಲಿದೆ.
ಇದೇ ಮೊದಲ ಬಾರಿಗೆ ಕರಾವಳಿ ಕಂಬಳಕ್ಕೆ ಬೆಂಗಳೂರು ಸಾಕ್ಷಿಯಾಗಿದೆ. ಎರಡು ದಿನಗಳ ನಡೆಯಲಿರುವ ಕಂಬಳ ಉತ್ಸವದಲ್ಲಿ 200 ಜೋಡಿ ಕೋಣಗಳು ಕಮಾಲ್ ಮಾಡಲಿವೆ. ಶನಿವಾರ ಹಾಗೂ ಭಾನುವಾರ ನಡೆಯುತ್ತಿದ್ದರಿಂದ ಹಾಗೂ ಕಂಬಳ ವೀಕ್ಷಿಸಲು ಪ್ರವೇಶ ಉಚಿತವಾಗಿದೆ. ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ಕಂಬಳ : ಮೊದಲ ಕೆರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜಕುಮಾರ್