– ಬೆಂಗ್ಳೂರಲ್ಲಿ ತಯಾರಾಗಿದೆ 1051 ಕೆಜಿಯ ಕಾಜೂ
– 106 ಕೆಜಿಯ ವೆಜ್ ಪಫ್ ಕೂಡ ರೆಡಿ
ಬೆಂಗಳೂರು: ಸಂಕ್ರಾಂತಿ ಸಂಭ್ರಮದ ಹೆಸರಲ್ಲಿ ಬೆಂಗಳೂರಲ್ಲಿ 1051 ಕೆಜಿಯ ಕಾಜೂ ಬರ್ಫಿಯನ್ನ ತಯಾರು ಮಾಡಲಾಗಿದೆ. 9 ಇಂಚಿನಷ್ಟು ದಪ್ಪ 11.1 ಅಡಿಯಷ್ಟು ಉದ್ದ, 7.2 ರಷ್ಟು ಅಗಲದ ಕಾಜೂ ಬರ್ಫಿ ಇದಾಗಿದೆ. ಇನ್ನೊಂದು ವಿಶೇಷ ಅಂದರೆ ಸಿಹಿ ತಿನಿಸುಗಳ ಪ್ರಸಿದ್ಧ ಬಾಣಸಿಗರು, ಇಷ್ಟು ದೊಡ್ಡ ಕಾಜೂ ಬರ್ಫಿಯನ್ನ ಯಾವುದೇ ಯಂತ್ರದ ಸಹಾಯವಿಲ್ಲದೆ ಕೈಗಳಲ್ಲಿ ತಯಾರು ಮಾಡಿದ್ದಾರೆ. ಕಾಂತಿ ಸ್ವೀಟ್ಸ್ ಅವರ ಮೂಲಕ ತಯಾರಾಗಿರುವ ಈ ರೆಕಾರ್ಡ್ ಕಾಜೂ ಬರ್ಫಿ ಇನ್ನು ಕೆಲವೇ ದಿನಗಳಲ್ಲಿ ಲಿಮ್ಕಾ ವರ್ಲ್ಡ್ ರೆಕಾರ್ಡ್ ಅಲ್ಲಿ ಸ್ಥಾನ ಪಡೆಯುವ ವಿಶ್ವಾಸ ತಯಾರಕರದ್ದಾಗಿದೆ.
Advertisement
ಈ ಕಾಜೂ ಬರ್ಫಿ ಜೊತೆಗೆ ಅತೀ ದೊಡ್ಡದಾದ ವೆಜ್ ಪಫ್ ಕೂಡ ತಯಾರು ಮಾಡಲಾಗಿದೆ. ಈ ಪಫ್ 106 ಕೆಜಿ ತೂಗಿದೆ. 4 ಅಡಿ ಉದ್ದದ ಪಫ್ ಅನ್ನ ಸಹ ತಯಾರು ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದರು. ಇವೆರಡನ್ನೂ ಒಂದೇ ಬಾರಿ ತಯಾರು ಮಾಡಿ ವರ್ಲ್ಡ್ ರೆಕಾರ್ಡ್ ಕದ ತಟ್ಟಿದ್ದಾರೆ. ಈ ಕಾಜೂ ಹಾಗೂ ಪಫ್ ತಯಾರಿಕೆ ಸಂದರ್ಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಪ್ರಮುಖರು ಪಾಲ್ಗೊಂಡು ಸ್ವತಃ ವೀಕ್ಷಣೆ ಮಾಡಿ ಪ್ರಶಸ್ತಿ ಪತ್ರವನ್ನ ಸಹ ತಯಾರಕರಿಗೆ ನೀಡಿದರು. ಸಂಕ್ರಾಂತಿಯಂದು ಈ ರೇಕಾರ್ಡ್ ಸೇರಿದ ತಯಾರಕರು ಖುಷಿಯಲ್ಲಿದ್ದರು. ಇನ್ನು ಈ ತಯಾರಕರ ಜೊತೆಗೆ ಸಾಕಷ್ಟು ಮಂದಿ ಬೆಂಗಳೂರಿಗರು ಈ ಬೃಹತ್ ಗಾತ್ರದ ಕಾಜೂ ಬರ್ಫಿಯನ್ನ ಹಾಗೂ ಪಫ್ ನೋಡಿ ಬೆರಗಾದರು.