ಬೆಂಗಳೂರು: ನಗರದ ಕೆ.ಆರ್.ಮಾರ್ಕೆಟ್ ನಲ್ಲಿ ಅಂಗಡಿ ಇಡುವ ವಿಚಾರಕ್ಕೆ ಮಹಿಳಾ ವ್ಯಾಪಾರಿಗಳ ನಡುವೆ ಘರ್ಷಣೆ ನಡೆದಿದ್ದು, ರಸ್ತೆಬದಿ ಅಂಗಡಿ ಇಡದಂತೆ ಮಹಿಳಾ ಗ್ಯಾಂಗೊಂದು ಬಡಪಾಯಿ ಮೇಲೆ ಹಲ್ಲೆ ನಡೆಸಿದೆ.
ಘಟನೆಯಲ್ಲಿ ಸೆಲ್ವಿ ಎಂಬವರು ಗಾಯಗೊಂಡಿದ್ದು, ಕಸ್ತೂರಿ ಎಂಬ ಮಹಿಳೆ ತನ್ನ ಗ್ಯಾಂಗ್ ನೊಂದಿಗೆ ಬಂದು ಹಲ್ಲೆ ನಡೆಸಿ ಮನಬಂದಂತೆ ಥಳಿಸಿದ್ದಾರೆ. ಅಂದಹಾಗೆ ಕಳೆದ ಮೂವತ್ತು ವರ್ಷಗಳಿಂದ ಕೆ.ಆರ್.ಮಾರ್ಕೆಟ್ ನ ರಸ್ತೆಬದಿಯಲ್ಲಿ ಸೆಲ್ವಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಈ ಜಾಗ ತನಗೆ ಬೇಕು ಎಂದು ಕಸ್ತೂರಿ ಧಮ್ಕಿ ಹಾಕಿದ್ದಾಳಂತೆ.
Advertisement
Advertisement
ಮಹಿಳೆಯ ಬೆದರಿಕೆಗೆ ಸೆಲ್ವಿ ಹೆದರದ ಕಾರಣ ನವೆಂಬರ್ 22ರಂದು ಕಸ್ತೂರಿ ಸೇರಿ ಸುಮಾರು ಏಳು ಮಂದಿ ಸೆಲ್ವಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಸೆಲ್ವಿಯವರ ಎಡಗೈ ಮೂಳೆಗೆ ಪೆಟ್ಟಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆದರೆ ಇದುವರೆಗೂ ಪೊಲೀಸರು ಕಸ್ತೂರಿಯನ್ನ ವಿಚಾರಣೆಗೆ ಒಳಪಡಿಸಿಲ್ಲ ಎನ್ನಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv