ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಮತ್ತೊಂದು ವಿಕೆಟ್ ಪತನಗೊಂಡಿದ್ದು, ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರಕಲಗೂಡು ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ರಾಜೀನಾಮೆ ನೀಡಿದ್ದಾರೆ.
ರಾಮಸ್ವಾಮಿ ಅವರು ಈಗಾಗಲೇ ತನ್ನ ರಾಜೀನಾಮೆ ಪತ್ರವನ್ನು ಸ್ಪೀಕರ್ ಮತ್ತು ಮುಖ್ಯಮಂತ್ರಿಗೆ ರವಾನಿಸಿದ್ದಾರೆ. ಈ ಮೂಲಕ ಶಾಸಕರ ರಾಜೀನಾಮೆಯ ಹಿಂದೆ ಸರ್ಕಾರ ಭೂಗಳ್ಳರ ರಕ್ಷಣೆಗೆ ಮುಂದಾಗಿದೆಯಾ ಅನ್ನೋ ಅನುಮಾನವೊಂದು ಮೂಡಿದೆ.
Advertisement
Advertisement
ಕೆಂಗೇರಿ ಸಮೀಪದ ಬಿಎಂ ಕಾವಲು ಪ್ರದೇಶದಲ್ಲಿ 305 ಎಕರೆ ಭೂಗಳ್ಳರ ಪಾಲಾಗಿದೆ. ಭೂಗಳ್ಳರಿಂದ ಸರ್ಕಾರಿ ಭೂಮಿ ವಶಕ್ಕೆ ಪಡೆಯಲು ಮೈತ್ರಿ ಸರ್ಕಾರ ಹಿಂದೆ ಸರಿದಿದೆ. ಅಲ್ಲದೆ 300 ಎಕರೆಗೂ ಹೆಚ್ಚು ಭೂಮಿ ತೆರವಿಗೆ ಸರ್ಕಾರ ಮುಂದಾಗಲಿಲ್ಲ. ಇದರಿಂದ ಬೇಸರಗೊಂಡು ರಾಮಸ್ವಾಮಿ ಅವರು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ – ಎಚ್ ವಿಶ್ವನಾಥ್ ಹೇಳಿದ್ದು ಹೀಗೆ
Advertisement
ಭೂಗಳ್ಳತನದ ವಿಚಾರವನ್ನು ಶಾಸಕರು ಕಳೆದ ಬೆಳಗಾವಿ ಅಧಿವೇಶನದಲ್ಲೂ ಸರ್ಕಾರದ ಗಮನಕ್ಕೆ ತಂದಿದ್ದರು. ಆ ಸಂದರ್ಭದಲ್ಲಿ ಲ್ಯಾಂಡ್ ಮಾಫಿಯಾಕ್ಕೆ ಸರ್ಕಾರ ಮಣಿದಿತ್ತು. ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್ ವಿಶ್ವನಾಥ್ ಅವರು ರಾಜೀನಾಮೆ ನೀಡಿದ್ದರು.