– ಎಚ್‍ಡಿಡಿ ರಾಜಕೀಯ ಚದುರಂಗದಾಟ ಯಾರಿಗೂ ಗೊತ್ತಾಗಲ್ಲ
– ಪಕ್ಷ ಸಂಘಟನೆಯ ಮೂರು ತಂತ್ರ ತಿಳಿಸಿದ ದತ್ತಾ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪಕ್ಷಕ್ಕೆ ಜನರು ಮೂರು ನಾಮ ಹಚ್ಚಿದರು ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತಾ, ಲೋಕಸಭಾ ಫಲಿತಾಂಶ ನೆನೆದು ಕಿಡಿಕಾರಿದ್ದಾರೆ.
ನಗರದ ಅರಮನೆ ಮೈದಾನದ ಶಿಷಾ ಮಹಲ್‍ನಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವಿದ್ದರೂ ಸಿಎಂ ಜನರ ಸೇವೆ ಮಾಡುತ್ತಿದ್ದಾರೆ. ಅವರು ಸೋಲುತ ಗೆಲ್ಲುವ ತಂತ್ರ ಅನುಸರಿಸುತ್ತಿದ್ದಾರೆ. ಈ ಮೂಲಕ ರೈತರ ಸಾಲಮನ್ನಾ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮೈತ್ರಿ ಪಕ್ಷದ ನಾಯಕರ ವಿಶ್ವಾಸ ಪಡೆಯುತ್ತಿದ್ದಾರೆ ಎಂದು ಹೇಳಿದರು.
Advertisement
Advertisement
ವಿಪಕ್ಷ ನಾಯಕರು ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಗ್ರಾಮ ವಾಸ್ತವ್ಯ, ಜನತಾ ದರ್ಶನ ಎಂಬ ವಿಶಿಷ್ಟ ಕಾರ್ಯಕ್ರಮ ಪ್ರಾರಂಭ ಮಾಡಿದ್ದು ನಮ್ಮ ಪಕ್ಷ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಇದಕ್ಕೂ ಕೆಲವರು ಕೊಂಕು ಆಡುತ್ತಿದ್ದಾರೆ. ಮುಸ್ಲಿಂಮರಿಗೆ ಮೀಸಲಾತಿ ಕೊಟ್ಟವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಅಹಿಂದ ಎನ್ನುವ ಕಲ್ಪನೆ ತಂದಿದ್ದು ಅವರೇ. ಆದರೆ ಯಾರ್ ಯಾರೋ ಅಹಿಂದಾ ಅಹಿಂದ ಅಂತ ಮಾತನಾಡುತ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement
ದೇವೇಗೌಡರ ಕ್ಯಾರಂಬೋರ್ಡ್ ಆಟ ವಿರೋಧ ಪಕ್ಷದವರಿಗೆ ಗೊತ್ತೇ ಆಗದ ರೀತಿ ಇರುತ್ತದೆ. ಅವರು ಯಾವತ್ತೂ ಸೋತು ಮನೆಯಲ್ಲಿ ಕುಳಿತುಕೊಂಡಿಲ್ಲ. ಪಕ್ಷ ಸೋತರೂ ಕಾರ್ಯಕರ್ತರನ್ನು ಜೊತೆ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಜೆಡಿಎಸ್ ಮುಗಿದೇ ಹೋಯಿತು ಎನ್ನುವ ಸಮಯದಲ್ಲೂ ಇಬ್ಬರು ಶಾಸಕರನ್ನು ಇಟ್ಟುಕೊಂಡು ಪಕ್ಷ ಕಟ್ಟಿದರು. ಎಲ್ಲಿ ಕಳೆದುಕೊಳ್ಳುತ್ತೇವೋ ಅಲ್ಲಿಯೇ ಪಡೆಯಬೇಕು ಎನ್ನುವುದು ದೇವೇಗೌಡರ ಹಠ ಎಂದು ವೈಎಸ್‍ವಿ ದತ್ತಾ ತಿಳಿಸಿದರು.
Advertisement
ನಿಮ್ಮ ಪಕ್ಷಕ್ಕೆ ಸೇರುತ್ತೇವೆ ಎಂದು ಬಿಜೆಪಿಯ ಅನೇಕ ಪದಾಧಿಕಾರಿಗಳು ನಿತ್ಯವೂ ಕರೆ ಮಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಪ್ರಬಲವಾಗಿ ಬೆಳೆಯಬೇಕು. ನಾಡಿನ ವಿಚಾರದ ಬಗ್ಗೆ ಹೋರಾಟ ಮಾಡುವುದಕ್ಕೆ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಎನ್ನುವುದು ಅವರ ವಿಚಾರವಾಗಿದೆ. ಹೀಗಾಗಿ ಬಿಜೆಪಿ ಬಿಟ್ಟು ಜೆಡಿಎಸ್‍ಗೆ ಬರುತ್ತೇವೆ ಎನ್ನುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಮೂರು ತಂತ್ರದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂದು ವೈಎಸ್‍ವಿ ದತ್ತಾ ಅವರು ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಅವುಗಳಲ್ಲಿ ಮೊದಲನೇಯ ತಂತ್ರ ಭಾವ ಸ್ಪರ್ಶಿ. ಸಾಮಾಜಿಕ ಜಾಲತಾಣವನ್ನು ಮತ್ತಷ್ಟು ಬಲ ಪಡಿಸಿ ಪಕ್ಷ ಸಂಘಟನೆ ಮಾಡುವುದು. ತಲಸ್ಪರ್ಶಿ ತಂತ್ರ: ಪಕ್ಷದ ಚರಿತ್ರೆ, ಸರ್ಕಾರದ ಇತಿಹಾಸ, ಸಾಧನೆ ಬಗ್ಗೆ ಜನರಿಗೆ ತಲುಪಿಸಿ ಪಕ್ಷ ಸಂಘಟನೆ ಮಾಡುವುದು. ಬಹು ಸ್ಪರ್ಶಿ ತಂತ್ರ: ಪಕ್ಷ ಸಂಘಟನೆಗೆ ಪಾದಯಾತ್ರೆ ಮಾಡುವುದು ಎಂದು ತಿಳಿಸಿದರು.
ಸಭೆಯ ನೇತೃತ್ವವನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಹಿಸಿಕೊಂಡಿದ್ದರು. ಶಾಸಕ ಗೋಪಾಲಯ್ಯ, ಪರಿಷತ್ ಸದಸ್ಯ ಶರವಣ ಸೇರಿದಂತೆ ಹಲವು ಮಾಜಿ ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]