ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡರು ಅವಧೂತ ವಿನಯ್ ಗುರೂಜಿ ಮೊರೆ ಹೋಗಿದ್ದಾರೆ.
ಜೆಡಿಎಸ್ ಸಂಕಷ್ಟಕ್ಕೆ ಯಾವಾಗ ಪರಿಹಾರ, ಎಲ್ಲಾ ಗೊಂದಲಗಳಿಗೆ ಯಾವಾಗ ಮುಕ್ತಿ ಅಂತ ತಮ್ಮ ಪಕ್ಷದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗುರೂಜಿ ಬಳಿ ತೆರಳಿದಾಗ, ಸಮಸ್ಯೆಗಳ ಪರಿಹಾರಕ್ಕೆ ನಿಮ್ಮ ಕೈಯಲ್ಲಾದ ಪ್ರಯತ್ನ ಮಾಡಿ. ಕೆಲವರು ಹೋಗಬಹುದು ಮತ್ತೆ ಕೆಲವರು ಉಳಿಯಬಹುದು. ಹೀಗಾಗಿ ಉತ್ತರಾಯಣದವರೆಗೆ ಕಾಯಿರಿ ಎಂದು ಗುರೂಜಿ ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಸಹಜವಾಗಿಯೇ ಕೆಲವು ಸಮಸ್ಯೆಗಳು ಆಗಿಯೇ ಆಗುತ್ತವೆ. ಆದರೆ ಪಕ್ಷದ ಮುಂದಿನ ಬೆಳವಣಿಗೆ ಬಗ್ಗೆ ತಿಳಿಯಲು ಉತ್ತರಾಯಣದವರೆಗೆ ಕಾಯಲೇಬೇಕು ಎಂದಿದ್ದಾರೆ. ಉತ್ತರಾಯಣದ ನಂತರ ಮುಂದಿನ ಹಾದಿಯ ಬಗ್ಗೆ ನಾನು ಹೇಳುತ್ತೇನೆ ಎಂದು ಗುರೂಜಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಕ್ಷದ ನಾಯಕರಿಗೇ ಸವಾಲೆಸೆದು ರೆಸಾರ್ಟಿನತ್ತ 15ಕ್ಕೂ ಹೆಚ್ಚು ಶಾಸಕರು?
Advertisement
ಶಾಸಕರ ಬಂಡಾಯ ಮುಖಂಡರ ಅಸಮಾಧಾನ ಎಲ್ಲದರಿಂದ ಕಂಗೆಟ್ಟ ಜೆಡಿಎಸ್ ನಾಯಕರಿಗೆ ಜೆಡಿಎಸ್ ಪಕ್ಷದ ಭವಿಷ್ಯದ ಚಿಂತೆಯಾಗಿದೆ. ಆದರೆ ಪಕ್ಷದ ಮುಂದಿನ ಭವಿಷ್ಯದ ಸ್ಪಷ್ಟ ಚಿತ್ರಣ ಸಿಗಬೇಕಾದರೆ ಉತ್ತರಾಯಣದವರೆಗೆ ಕಾಯಲೇಬೇಕಿರುವುದು ಅನಿವಾರ್ಯವಾಗಿದೆ.