ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಈ ಮಧ್ಯೆ ಸರಳ ವಿವಾಹವೊಂದು ನಡೆದಿದೆ.
ಹೌದು. ನಗರದ ಅಣ್ಣಮ್ಮ ದೇವಾಲಯದಲ್ಲಿ ಜೋಡಿಯೊಂದು ನವ ಜೀವನಕ್ಕೆ ಕಾಲಿಟ್ಟಿದೆ. ಸಮಸ್ಯೆ ಎಂದು ಹೇಳಿ ಕಡಿಮೆ ಜನರೊಂದಿಗೆ ಮದುವೆ ಕಾರ್ಯ ಮುಗಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಕಡಿಮೆ ಜನ ಮದುವೆಗೆ ಬಂದಿದ್ದೀವಿ. ಕಷ್ಟದಲ್ಲಿ ನಾವು ಈಗ ಮದುವೆಗೆ ಮುಂದಾಗಿದ್ದೆವು. ನಾವು ಶೇಷಾದ್ರಿಪುರಂ ನಿವಾಸಿಗಳು ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ಕರೆ ಕೊಟ್ಟ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ಬಸ್ ನಿಲ್ದಾಣ ಜನರಿಲ್ಲದೆ ಭಣಗುಡುತ್ತಿದೆ. ಫ್ಲಾಟ್ ಫಾರಂ 1 ರಿಂದ 34 ರ ರವರೆಗೂ ಜನವೇ ಇಲ್ಲದೇ ಖಾಲಿ ಹೊಡೆಯುತ್ತಿದ್ದು, ಈ ಮೂಲಕ ಜನತಾ ಕರ್ಫ್ಯೂಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ಮೆಜೆಸ್ಟಿಕ್ ಕಪಾಲಿ ಚಿತ್ರಮಂದಿರ ರಸ್ತೆಯಲ್ಲಿ ಹಾಲು ಮಾರಾಟ ಮಾತ್ರ ನಡೆಯುತ್ತಿದ್ದು, ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ನಮ್ಮ ಮೆಟ್ರೋ ಸೇವೆ ಬಂದ್ ಆಗಿದೆ.