ಬೆಂಗಳೂರು: ಕೊರೊನಾ ತಡೆ ಸಲುವಾಗಿ ಬೆಂಗಳೂರಲ್ಲಿ ನೆಲೆಸಿರುವ ಮಂದಿ ಊರಿಗೆ ಹೋಗಬೇಡಿ ಅಂತ ಸಿಎಂ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದರು. ಆದರೆ ಸಿಎಂ ಮನವಿಗೆ ಕ್ಯಾರೆ ಅನ್ನದ ಜನ ಯುಗಾದಿ ಹಬ್ಬಕ್ಕೆ ಅಂತ ತಮ್ಮ ತಮ್ಮ ಸ್ವಂತ ವಾಹನಗಳಲ್ಲಿ, ಖಾಸಗಿ ಬಸ್‍ಗಳಲ್ಲಿ ಊರಿಗೆ ಹೋಗಿದ್ದಾರೆ.
ಬಸ್, ತೂಫಾನ್ ಗಾಡಿಗಳ ಟಾಪ್‍ನಲ್ಲಿ ಕುಳಿತು ಜನ ಪ್ರಯಾಣಿಸಿದ್ದಾರೆ. ಕೆಲವರು ಬೈಕ್‍ನಲ್ಲೇ ಊರಿನತ್ತ ಸಾಗಿದ್ದಾರೆ. ಇದರಿಂದಾಗಿ ನೆಲಮಂಗಲ ಟೋಲ್‍ನಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸೋಮವಾರ ಒಂದೇ ದಿನ ಲಕ್ಷಾಂತರ ಮಂದಿ ಬೆಂಗಳೂರು ತೊರೆದಿದ್ದಾರೆ.
Advertisement
ರಾಜ್ಯ ಸರ್ಕಾರದಿಂದ ಮಾರ್ಚ್ 31ರವರೆಗೆ ಕರ್ನಾಟಕ ಲಾಕ್‍ಡೌನ್ ಆದೇಶ ಬಿದ್ದ ಬೆನ್ನಲ್ಲೇ ಅನೇಕರು ಬೆಂಗಳೂರು ತೊರೆದಿದ್ದಾರೆ. ಕೆಎಸ್ಆರ್‌ಟಿಸಿ ಬಸ್ ಇಲ್ಲದೇ ಪ್ರಯಾಣಿಕರು ಪರದಾಡಿದರೆ, ಬೆಂಗಳೂರು-ತುಮಕೂರು ಮಾರ್ಗವಾಗಿ ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಚಿತ್ರದುರ್ಗ ನಾನಾ ಜಿಲ್ಲೆಗೆ ಪ್ರಯಾಣ ಬೆಳೆಸಿದ ಸಿಕ್ಕ-ಸಿಕ್ಕ ವಾಹನ ಏರಿ ಊರಿಗೆ ತೆರಳಿದರು.
Advertisement
ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್‍ನಲ್ಲಿ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಇಲ್ಲದಿದ್ರೂ ಪ್ರಯಾಣಿಕರು ಊರಿನತ್ತ ಮುಖ ಮಾಡಿದ್ದರು. ಖಾಸಗಿ ಬಸ್‍ಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ್ದ ಪ್ರಯಾಣಿಕರಿಗೆ ಅನುಕೂಲವಾದರೆ, ಕರ್ಫ್ಯೂ ನಡುವೆ ಕೆಎಸ್ಆರ್‌ಟಿಸಿ ಬಸ್ ನಂಬಿಕೊಂಡು ಬಂದ ಪ್ರಯಾಣಿಕರು ಊರಿಗೆ ಹೋಗಲು ಪರದಾಡಿದರು.