– ಸಿಎಂ ಮೇಲೆ ಸುಧಾಕರ್, ಎಸ್.ಟಿ ಸೋಮಶೇಖರ್ ಬೇಸರ
– ಜಾನಪದ ಜಾತ್ರೆಗೆ ಎತ್ತಿನಗಾಡಿಯಲ್ಲಿ ಆಗಮಿಸಿದ ಬಿಎಸ್ವೈ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಡಬಲ್ ಟೆನ್ಷನ್ ಶುರುವಾಗಿದೆ. ಸಚಿವ ಸ್ಥಾನಕ್ಕಾಗಿ ಒಂದು ಕಡೆ ಸ್ವಾಮೀಜಿಗಳ ಒತ್ತಡ, ಮತ್ತೊಂದು ಕಡೆ ಮಿತ್ರಮಂಡಳಿಯ ಅಸಮಾಧಾನದ ಬಿಸಿದ ತಟ್ಟಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜಾನಪದ ಜಾತ್ರೆಗೆ ಅದ್ದೂರಿ ತೆರೆಬಿದ್ದಿದೆ. ಈ ಕಾರ್ಯಕ್ರದಲ್ಲಿ ಸಿಎಂ ಯಡಿಯೂರಪ್ಪ ಅವರ ಮೇಲೆ ಶಾಸಕ ಸುಧಾಕರ್ ಹಾಗೂ ಎಸ್.ಟಿ.ಸೋಮಶೇಖರ್ ಅವರು ಹಂಚಿಕೊಳ್ಳದೆ ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕರ ಈ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ.
Advertisement
Advertisement
ಎತ್ತಿನ ಗಾಡಿಯಲ್ಲಿ ಜಾನಪದ ಜಾತ್ರೆಗೆ ಆಗಮಿಸಿದ ಸಿಎಂ ಯಡಿಯೂರಪ್ಪ ಅವರನ್ನು ಸಚಿವ ಆರ್.ಅಶೋಕ್ ಬರಮಾಡಿಕೊಂಡರು. ಎರಡು ದಿನಗಳ ಕಾಲ ನಡೆದ ಜಾನಪದ ಜಾತ್ರೆ ಸಮಾರೋಪ ಸಮಾರಂಭದಲ್ಲಿ ಜಾನಪದ ಕಲಾ ತಂಡಗಳ ನೃತ್ಯ ಪ್ರದರ್ಶನವನ್ನ ಸಿಎಂ ಯಡಿಯೂರಪ್ಪ ಕಣ್ಣು ತುಂಬಿಕೊಂಡಿದ್ದಾರೆ.
Advertisement
ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್, ಪ್ರೀತಂ ಗೌಡ, ಎ.ಕೃಷ್ಣಪ್ಪ, ಶಾಸಕರಾದ ಡಾ.ಕೆ.ಸುಧಾಕರ್ ಮತ್ತು ಎಸ್.ಟಿ ಸೋಮಶೇಖರ್ ಸೇರಿದಂತೆ ಸ್ಥಳೀಯ ಪಾಲಿಕೆ ಸದಸ್ಯರು ಮತ್ತು ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು. ರಿಲ್ಯಾಕ್ಸ್ ಮೂಡ್ನಲ್ಲಿದ್ದ ಸಿಎಂ ಯಡಿಯೂರಪ್ಪ ಅವರು ಜಾನಪದ ತಂಡಗಳ ನೃತ್ಯ ಪ್ರದರ್ಶನ ವೀಕ್ಷಿಸಿದರು.
Advertisement
ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಕರ್ನಾಟಕ ಜಾನಪದ ಕಲೆಗಳ ಪ್ರಪಂಚ. ಕರ್ನಾಟಕದಲ್ಲಿ ಹಲವಾರು ಕಲೆಗಳ ತವರಾರು ಇವೆ. ಅವುಗಳನ್ನು ಉಳಿಸಿ ಬೆಳಸುವಂತ ಕೆಲಸ ಮಾಡುತ್ತಿದ್ದೇವೆ. ಡೊಳ್ಳು ಕುಣಿತ ಕಂಸಾಳೆ, ನಂದಿ ಧ್ವಜ ನೃತ್ಯ, ಕೋಲಾಟ ಎಲ್ಲಾ ರೀತಿಯ ನೃತ್ಯಗಳು ನಡೆದಿದೆ. ಜಾನಪದ ಕಲಾವಿದರ ಬದುಕಿಗೆ ನೆರವು ಮತ್ತು ಜಾನಪದ ಕಲಾವಿದರಿಗೆ ಮಾಸಾಶನ ನೀಡಲಾಗುತ್ತದೆ ಎಂದು ಹೇಳಿದರು.