ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು ಕರ್ನಾಟಕದಲ್ಲಿ ಅಘೋಷಿತ ಬಂದ್ ವಾತಾವರಣ ಇದೆ. ಜನರಿಗೆ ಭಯ ಆವರಿಸಿರುವ ಕೊರೊನಾ ಭೀತಿ ಜೈಲುಗಳಿಗೂ ತಲುಪಿದೆ.
ಜೈಲಿನಲ್ಲಿ ಇರುವ ಕೈದಿಗಳನ್ನು ಯಾರೂ ಭೇಟಿ ಮಾಡದಂತೆ ಸೂಚನೆ ನೀಡಲಾಗಿದೆ. ಕುಟುಂಬಸ್ಥರು ಕೂಡ ಭೇಟಿ ಮಾಡುವಂತೆ ಇಲ್ಲ ಎಂದು ಹೇಳಲಾಗಿದ್ದು, ಯಾವೊಬ್ಬ ಕೈದಿಯೂ ತನ್ನ ಕುಟುಂಬಸ್ಥರನ್ನು ಭೇಟಿ ಮಾಡುವಂತೆ ಇಲ್ಲ. 15 ದಿನಗಳ ಕಾಲ ಈ ಆದೇಶ ಜಾರಿಯಲ್ಲಿ ಇರುತ್ತೆ. ಪರಿಸ್ಥಿತಿ ನೋಡಿಕೊಂಡು ಆದೇಶ ಮುಂದುವರಿಸಲಾಗುತ್ತದೆ.
ಹೊಸದಾಗಿ ಜೈಲಿಗೆ ಹೋಗುವ ಕೈದಿಗಳಿಗೂ ವಿಶೇಷ ವಾರ್ಡ್ ಮಾಡಿದ್ದು, 14 ದಿನಗಳ ಕಾಲ ಐಸೋಲೇಷನ್ ಅಲ್ಲಿ ಇಡಲು ಸೂಚನೆ ನೀಡಲಾಗಿದೆ. ಹೀಗೆ ಜೈಲುಗಳಲ್ಲೂ ಐಸೋಲೇಷನ್ ವಾರ್ಡ್ ಮಾಡಲಾಗಿದ್ದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.