ಬೆಂಗಳೂರು: ವಿಕ್ರಮ್ ಸಂಪರ್ಕ ಕಡಿತಕ್ಕೆ ಎಕ್ಸ್ಟ್ರಾ ಬ್ರೇಕ್ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಆರ್ಬಿಟರ್ನಿಂದ ಸಾಫ್ಟ್ ಲ್ಯಾಂಡಿಂಗ್ ಮಾಡುವಾಗ ಎಕ್ಸ್ಟ್ರಾ ಹಾರ್ಡ್ ಥ್ರಸ್ಟರ್ ನಿಂದ ಒತ್ತಡ ಹೆಚ್ಚಾಗಿದೆ. ಹಾಗಾಗಿ, ಸಂಪರ್ಕ ಕಡಿತವಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆರಂಭದಲ್ಲಿ ಥ್ರಸ್ಟರ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಿಜ್ಞಾನಿಗಳು ಭಾವಿಸಿದ್ದರು. ಆದರೀಗ, ಡೇಟಾ ಪರಿಶೀಲನೆಯಲ್ಲಿ ಥ್ರಸ್ಟರ್ ಒತ್ತಡ ತಂದಿದೆ ಎನ್ನಲಾಗ್ತಿದೆ. ಚಂದ್ರಯಾನ 2 ಲ್ಯಾಂಡರ್ ಜೊತೆ ಮತ್ತೆ ಸಂಪರ್ಕ ಸಾಧಿಸಲು ಮುಂದಿನ 14 ದಿನಗಳ ಕಾಲ ನಿರಂತರ ಪ್ರಯತ್ನ ಮಾಡುವುದಾಗಿ ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
Advertisement
Advertisement
ಚಂದ್ರನನ್ನು ಸುತ್ತುತ್ತಿರುವ ಆರ್ಬಿಟರ್ 7 ವರ್ಷಗಳ ಕಾಲ ತನ್ನ ಕೆಲಸ ಮಾಡಲಿದೆ. ಯೋಜನೆ ಶೇ.90 ರಿಂದ 95ರಷ್ಟು ಯಶಸ್ವಿಯಾಗಿದೆ ಅಂತ ಇಸ್ರೋ ಹೇಳಿದೆ. ಇದನ್ನೂ ಓದಿ: ರೈತನ ಮಗ ಇಸ್ರೋ ರಾಕೆಟ್ ಮ್ಯಾನ್ ಆದ ಕಥೆ ಓದಿ
Advertisement
ಈ ಮಧ್ಯೆ, ಇಸ್ರೋಗೆ ಅಮೆರಿಕದ ನಾಸಾ ಧೈರ್ಯ ತುಂಬಿದೆ. ಬಾಹ್ಯಾಕಾಶ ಭಾರೀ ಕಷ್ಟಕರ. ಆದರೂ, ಭಾರತದ ಸಾಧನೆ ಏನೂ ಕಡಿಮೆಯಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಯತ್ನವನ್ನು ನಾವು ಶ್ಲಾಘಿಸುತ್ತೇವೆ. ನಿಮ್ಮ ಕಾರ್ಯದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಒಟ್ಟಾಗಿ ಶ್ರಮಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ನಾಸಾ ಟ್ವೀಟ್ ಮಾಡಿದೆ. ಇದನ್ನೂ ಓದಿ: ಮತ್ತೆ ಲ್ಯಾಂಡರ್ ಜೊತೆ ಸಂಪರ್ಕ – ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ
Advertisement
Space is hard. We commend @ISRO’s attempt to land their #Chandrayaan2 mission on the Moon’s South Pole. You have inspired us with your journey and look forward to future opportunities to explore our solar system together. https://t.co/pKzzo9FDLL
— NASA (@NASA) September 7, 2019