– ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಬ್ಬರ ವಿರುದ್ಧ ಜಾರ್ಜ್ ಶೀಟ್
ಬೆಂಗಳೂರು: ಐಸಿಸ್ ಮಾಡ್ಯೂಲ್ ಕೇಸ್‌ನಲ್ಲಿ ಇಲ್ಲಿನ ಗುರಪ್ಪನಪಾಳ್ಯದಲ್ಲಿ ಅರೆಸ್ಟ್ ಆಗಿದ್ದ ಇಬ್ಬರು ಉಗ್ರರ ವಿರುದ್ಧ NIA ಚಾರ್ಜ್‌ಶೀಟ್ (NIA Chargesheet) ಸಲ್ಲಿಕೆ ಮಾಡಿದೆ.
ಆರೋಪಿಗಳಾದ ಅಬ್ದುಲ್ ಮತೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಇಬ್ಬರು ಕರ್ನಾಟಕದ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಗಳು. ಇದನ್ನೂ ಓದಿ: ಮೊಘಲ್ ದೊರೆ ಹುಮಾಯೂನ್-ರಾಣಿ ಕರ್ಣಾವತಿಯಿಂದ ಬಂತಾ ‘ರಾಖಿ ಹಬ್ಬ’; ಚರ್ಚೆ ಹುಟ್ಟುಹಾಕಿದ ಸಂಸದೆ ಸುಧಾಮೂರ್ತಿ ಪೋಸ್ಟ್
Advertisement
Advertisement
ISISನ ಭಯೋತ್ಪಾದನೆ ಸಂಚಿನಲ್ಲಿ ಭಾಗಿಯಾಗಿದ್ದಲ್ಲದೇ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ (Rameshwaram Cafe Blast Case) ಕೋಲ್ಕತ್ತಾದಲ್ಲಿ ಆರೋಪಿಗಳು ಅರೆಸ್ಟ್ ಆಗಿದ್ರು. 2020ರ ಜನವರಿ 23 ರಂದು ಬೆಂಗಳೂರು ನಗರ ಪೊಲೀಸರಿಂದ ಎನ್‌ಐಎಗೆ ಪ್ರಕರಣ ವರ್ಗಾವಣೆಯಾಗಿತ್ತು. ಇದುವರೆಗೆ ಒಟ್ಟು 18 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.
Advertisement
ಅಬ್ದುಲ್ ಮತೀನ್ ತಾಹಾ ಮುಸಾವೀರ್ ಹುಸೇನ್‌ಗೆ ಮನಃಪರಿವರ್ತನೆ ಮಾಡಿದ್ದ. ಆನ್‌ಲೈನ್ ನಲ್ಲಿ ಹ್ಯಾಂಡ್ಲರ್ ಭಾಯಿ @ ಲ್ಯಾಪ್‌ಟಾಪ್ ಭಾಯ್ ಎಂದು ಪರಿಚಯ ಮಾಡಿಕೊಂಡು ಗುರಪ್ಪನಪಾಳ್ಯದಲ್ಲಿ ಕುಟುಂಬ ಸದಸ್ಯರ ಸಹಯೋಗದೊಂದಿಗೆ ಅಲ್-ಹಿಂದ್ ಟ್ರಸ್ಟ್ ಅನ್ನು ರಚಿಸಿದ್ದ ಮೆಹಬೂಬ್ ಪಾಷಾ, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅಲ್ ಹಿಂದ್ ಟ್ರಸ್ಟ್ ರಚನೆ ಮಾಡಿದ್ದ ಆರೋಪದಡಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದನ್ನೂ ಓದಿ: ಹೆತ್ತ ಮಗನ ಮುಂದೆಯೇ ತಾಯಿಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ ದುರುಳರು!