ಬೆಂಗಳೂರು: ಒಂದೇ ತಿಂಗಳಿಗೆ 3 ಜೀವಂತ ಹೃದಯಗಳ ರವಾನೆಗೆ ಬೆಂಗಳೂರು ಸಾಕ್ಷಿಯಾಗಿದೆ.
ಇಂದು ನಗರದಲ್ಲಿ 2 ಜೀವಂತ ಹೃದಯಗಳು ರವಾನೆಯಗಿದ್ದು, ಜೀವಂತ ಹೃದಯದ ರವಾನೆ ವೇಳೆ ಗ್ರೀನ್ ಕಾರಿಡರ್ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ಒಂದು ನಾರಾಯಣ ಇನ್ಸಿಟ್ಯೂಟ್ ಗೆ ತಲುಪಿದರೆ, ಒಂದು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಹಾಗೂ ಮತ್ತೊಂದು ಯಶವಂತಪುರದಲ್ಲಿರೋ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಿಂದ ನಾರಾಯಣ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
Advertisement
Advertisement
ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ 6 ವರ್ಷದ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಳು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೆದುಳು ನಿಷ್ಕ್ರಿಯವಾಗಿ ಸಾವನ್ನಪ್ಪಿದ್ದಳು. ಆ ಹೃದಯವನ್ನು ಮಾರ್ಚ್ 8ರಂದು ಎಂಎಸ್ ಆಸ್ಪತ್ರೆಯಲ್ಲಿರುವ ನಾರಾಯಣ ಹಾರ್ಟ್ ಸೆಂಟರ್ ಗೆ ರವಾನೆ ಮಾಡಲಾಗಿತ್ತು.
Advertisement
ಒಂದೇ ತಿಂಗಳಲ್ಲಿ ಮೂರು ಜೀವಂತ ಹೃದಯ ರವಾನೆಗೆ ಬೆಂಗಳೂರು ಸಾಕ್ಷಿಯಾಗಿದೆ.