ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ ಆಶ್ರಯದಲ್ಲಿ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 3 ರಿಂದ ಮಾ.10ವರೆಗೆ ಏಳು ದಿನಗಳ ಕಾಲ ಬೆಂಗಳೂರಿನ ನಡೆಯಲಿದೆ. ಸಿನಿಮಾ ಪ್ರದರ್ಶನದ ಜತೆಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ಕೂಡ ನಡೆಯಲಿದ್ದು, ಈ ಸ್ಪರ್ಧೆಗಾಗಿ ಆಯ್ಕೆಯಾದ ಕನ್ನಡ ಚಿತ್ರಗಳಿವು.
Advertisement
2020ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ‘ಕನ್ನಡ ಸಿನಿಮಾ ಕಾಂಪಿಟೇಶನ್’ ವಿಭಾಗದಲ್ಲಿ ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ದಾರಿ ಯಾವುದಯ್ಯ ವೈಕುಂಠಕ್ಕೆ’, ವಿಶಾಲ್ ರಾಜ್ ನಿರ್ದೇಶನದ ‘ದಂತಪೂರ್ಣ’, ಆಕಾಶ್ ಗುಬ್ಬಿ ನಿರ್ದೇಶನದ ‘ಗವಿಸಿದ್ಧ’, ರಾಮ್ ಪ್ರಸಾದ್ ನಾಯ್ಡು ನಿರ್ದೇಶನದ ‘ಗಿಳಿಯು ಪಂಜರದೊಳಿಲ್ಲ’, ಸಿತೇಶ್ ಗೋವಿಂದ್ ನಿರ್ದೇಶನದ ‘ಇದು ಎಂತಹ ಲೋಕವಯ್ಯ’, ಶಿವಾನಂದ್.ಬಿ ನಿರ್ದೇಶನದ ‘ಜಿಹಾದ್’, ಸಮರ್ಥ ನಿರ್ದೇಶನದ ‘ಕಾಡುಮಲೆ’, ರಶ್ಮಿ ಮತ್ತು ಪೂರ್ಣಶ್ರೀ.ಆರ್ ನಿರ್ದೇಶನದ ‘ಮನೆ’, ಅಮರ್ ನಿರ್ದೇಶನದ ‘ಮಸಣದ ಹೂವು’, ಸುರೇಶ್ ಶೆಟ್ಟಿ ನಿರ್ದೇಶನದ ‘ಮುನ್ನುಡಿ’, ಶ್ರೀಧರ್ ಸಿಯಾ ನಿರ್ದೇಶನದ ‘ಓ ನನ್ನ ಚೇತನ’, ಪೃಥ್ವಿ ಕೊನಾನೂರು ನಿರ್ದೇಶನದ ‘ಪಿಂಕಿ ಎಲ್ಲಿ?’, ಆರ್ನ ಸಾಧ್ಯ ನಿರ್ದೇಶನದ “ಸಾರ ವಜ್ರ’ ಚಿತ್ರಗಳು ಆಯ್ಕೆಯಾಗಿವೆ. ಇದನ್ನೂ ಓದಿ: ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ
Advertisement
ಕನ್ನಡ ಸಿನಿಮಾ ಪಾಪ್ಯುಲರ್ ಎಂಟರ್ ಟೈನ್ಮೆಂಟ್ ಕಾಂಪಿಟೇಷನ್ ವಿಭಾಗ 2020ರಲ್ಲಿ ಆಯ್ಕೆಯಾದ ಚಿತ್ರಗಳು : ಮಂಸೋರೆ ನಿರ್ದೇಶನದ ‘ಆಕ್ಟ್ 1978’, ಅಶೋಕ್ ಕೆ.ಎಸ್ ನಿರ್ದೇಶನದ ‘ದಿಯಾ’, ಜಗದೀಶ್ ಕುಮಾರ್ ಹಂಪಿ ನಿರ್ದೇಶನದ ‘ಜಂಟಲ್ ಮೆನ್’, ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೈಲ್’, ದುನಿಯಾ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’, ಆಕಾಶ್ ಶ್ರೀವತ್ಸ ನಿರ್ದೇಶನದ ‘ಶಿವರಾಜಿ ಸುರತ್ಕಲ್’, ಎನ್.ಎನ್. ಪ್ರಭು ನಿರ್ದೇಶನದ ‘5 ಅಡಿ 7 ಅಂಗುಲ’, ನವೀನ್ ಶೆಟ್ಟಿ ನಿರ್ದೇಶನದ ‘ಗಂಜಾಲ್’ ಚಿತ್ರಗಳು ಆಯ್ಕೆಯಾಗಿವೆ. ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು
Advertisement
Advertisement
2021ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ‘ಕನ್ನಡ ಸಿನಿಮಾ ಕಾಂಪಿಟೇಶನ್’ ವಿಭಾಗದಲ್ಲಿ ಕಿಶೋರ್ ಮೂಡಬಿದರಿ ನಿರ್ದೇಶನದ ‘ಕೇಕ್’, ವಿಶಾಲ್ ರಾಜ್ ನಿರ್ದೇಶನದ ‘ದಂಡಿ’, ಅಮರ್.ಎಲ್ ನಿರ್ದೇಶನದ ‘ದೇವರ ಕಾಡು’, ರಘು ಕೆ.ಎಂ ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’, ಅಭಿಷೇಕ್ ಶೆಟ್ಟಿ ನಿರ್ದೇಶನದ ‘ಗಜಾನನ ಅಂಡ್ ಗ್ಯಾಂಗ್’, ಡೆವಿಡ್ ನಿರ್ದೇಶನದ ‘ಮಾನ’, ಮಂಜು ಪಾಂಡವಪುರ ನಿರ್ದೇಶನದ ‘ಮಾತಂಗಿ ದೇವಟಿಗೆ’, ನಂಜುಂಡೇ ಗೌಡ ಎನ್.ಆರ್ ನಿರ್ದೇಶನದ ‘ನಮ್ಮ ಚಿಲ್ಡ್ರನ್ಸ್ ಇಂಡಿಯಾ.ಕಾಮ್’, ಸುಮುಖ.ಎಸ್ ನಿರ್ದೇಶನದ ‘ಫಿಸಿಕ್ಸ್ ಟೀಚರ್’, ರಬಿ ನಿರ್ದೇಶನದ ‘ರಕ್ತ ಗುಲಾಬಿ’, ರೋಹಿತ್ ಪದವಿ ನಿರ್ದೇಶನದ ‘ರತ್ನನ್ ಪ್ರಪಂಚ’, ಸುನೀಲ್ ಭಾರದ್ವಾಜ್ ನಿರ್ದೇಶನದ ‘ರುಗ್ನ’, ಎಸ್. ದಿನೇಶ್ ನಿರ್ದೇಶನದ ‘ಸಾವಿತ್ರಿ’, ಮಧುಸೂದನ್ ಹವಾಲ್ದಾರ್ ನಿರ್ದೇಶನದ ‘ಶ್ರೀ ಜಗನ್ನಾಥ ದಾಸರು’ ಆಯ್ಕೆಯಾಗಿವೆ.
ಕನ್ನಡ ಸಿನಿಮಾ ಪಾಪ್ಯುಲರ್ ಎಂಟರ್ ಟೈನ್ಮೆಂಟ್ ಕಾಂಪಿಟೇಷನ್ ವಿಭಾಗ 2021ರಲ್ಲಿ ಆಯ್ಕೆಯಾದ ಚಿತ್ರಗಳು : ನಂದಕಿಶೋರ್ ನಿರ್ದೇಶನದ ‘ಪೊಗರು’, ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’, ಸಂತೋಷ್ ಆನಂದ್ ರಾಮ್ ನಿರ್ದೇಶನದ ‘ಯುವರತ್ನ’, ಶಿವ ಕಾರ್ತಿಕ್ ನಿರ್ದೇಶನದ ‘ಕೋಟಿಗೊಬ್ಬ 3’, ದುನಿಯಾ ವಿಜಯ್ ನಿರ್ದೇಶನದ ‘ಸಲಗ’, ರಾಜ್ ಬಿ. ಶೆಟ್ಟಿ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’, ಗುರು ಶಂಕರ್ ನಿರ್ದೇಶನದ ‘ಬಡವ ರಾಸ್ಕಲ್’, ಎ.ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರಗಳು ಆಯ್ಕೆಯಾಗಿವೆ.