ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೆ. 19ರಿಂದ 2 ತಿಂಗಳ ಕಾಲ ತಾತ್ಕಾಲಿಕವಾಗಿ ಬಂದ್ ಆಗಲಿದೆ.
ಬೆಳಗ್ಗೆ 10.30 ರಿಂದ ಸಂಜೆ 5ರವರೆಗೂ ಬಂದ್ ಆಗಲಿದ್ದು, ಇದರಿಂದ ವಿಮಾನ ನಿಲ್ದಾಣವನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದ 4000 ಟ್ಯಾಕ್ಸಿಗಳಿಗೆ ಕೆಲಸ ಇಲ್ಲದಂತಾಗಲಿದೆ.
Advertisement
Advertisement
ಹೋಟೆಲ್ ಉದ್ಯಮ, ವಾಣಿಜ್ಯ ಚಟುವಟಿಕೆಗಳಿಗೂ 2ತಿಂಗಳ ಕಾಲ ಏರ್‍ಪೋರ್ಟ್ ಬಂದ್ ಬಿಸಿ ತಟ್ಟಲಿದೆ. ನಷ್ಟದ ಭಯದಲ್ಲಿ ಬೆಂಗಳೂರು ಪ್ರವಾಸಿ ವಾಹನ ಮಾಲೀಕರು ಹೆಚ್‍ಎಎಲ್ ಏರ್‍ಪೋರ್ಟ್ ಬಳಸಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Advertisement
Advertisement
ನಂಬರ್ 1 ಸ್ಥಾನದಲ್ಲಿರುವ ನಗರವಾಗಿರುವ ಬೆಂಗಳೂರಿನಲ್ಲಿ ಇಮದು ನಮಗೆ ಆಲ್ಟರ್‍ನೇಟಿವ್ ವ್ಯವಸ್ಥೆನೇ ಇಲ್ಲ. ಇದರಂದಾಗಿ ಪ್ರವಾಸಿಗರನ್ನು ನಂಬಿಕೊಂಡು ಟ್ಯಾಕ್ಸಿ ಓಡಿಸುವವರಿಗೆ ಹಾಗೂ ಹೋಟೇಲ್ ಉದ್ಯಮ ನಡೆಸುವವರಿಗೆ ತುಂಬಾನೇ ತೊಂದರೆಯಗುತ್ತಿದೆ. 70 ದಿನಗಳ ಕಾಲ ಹೆಚು ಅಂದ್ರೆ 6 ಗಂಟೆ ವಿಮಾನ ಹಾರಾಟ ವ್ಯವಸ್ಥೆ ಇಲ್ಲ ಅಂದ್ರೆ ನಮ್ಮ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಕಂಟಕ ಎದುರಾಗುವುದರಲ್ಲಿ ಸಂಶಯವಿಲ್ಲ ಅಂತಾ ಟ್ಯಾಕ್ಸಿ ಮಾಲೀಕರ ಸಂಘದ ರಾಧಾಕೃಷ್ಣ ಹೊಳ್ಳ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.
ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯ, ಮತ್ತು ರನ್ ವೇ ಕಾಮಗಾರಿ ನಡೆಯುವುದರಿಂದ ಫೆಬ್ರವರಿ 19ರಿಂದ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಹಗಲು ಸಮಯದಲ್ಲಿ ವಿಮಾನ ಆಗಮನ ಮತ್ತು ನಿರ್ಗಮನ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಬಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ.