ಬೆಂಗಳೂರು: ಸಿಲಿಕಾನ್ ಸಿಟಿಯ ಇಂದಿರಾ ಕ್ಯಾಂಟೀನ್‍ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಂದಿರಾ ಕ್ಯಾಂಟೀನ್‍ಗಳಿಗೆ ಸಬರರಾಜು ಮಾಡುವ ಕಾವೇರಿ ನೀರಿನ ಬಿಲ್ ಕಟ್ಟಿಲ್ಲ. ಈ ಸಂಬಂಧ ಗುತ್ತಿಗೆದಾರರಿಗೆ ನೋಟಿಸ್ ಹೊರಡಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದು, ಇಂದಿರಾ ಕ್ಯಾಂಟೀನ್‍ಗಳಿಗೆ ಸರಬರಾಜು ಆಗುತ್ತಿರುವ ಕಾವೇರಿನ ನೀರಿನ ಬಿಲ್ ಬಾಕಿ ಇದೆ. ಮುಂಜಾಗ್ರತವಾಗಿ ಬಾಕಿರುವ ಬಿಲ್ ಕಟ್ಟಿ ಎಂದು ನೋಟಿಸ್ ಹೊರಡಿಸಿದ್ದಾರೆ. ನೋಟಿಸ್ ನಂತರವು ಬಿಲ್ ಕಟ್ಟಿಲ್ಲ ಎಂದರೆ ಕಾವೇರಿ ನೀರು ನಿಲ್ಲಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕಾಗುತ್ತೆ ಎಂದಿದ್ದಾರೆ.
Advertisement
Advertisement
ಸದ್ಯ 146 ಕ್ಯಾಂಟೀನ್‍ಗಳಿಗೆ ಜಲಮಂಡಳಿ ಕಾವೇರಿ ನೀರು ಪೂರೈಕೆ ಮಾಡುತ್ತಿದ್ದು, ಗುತ್ತಿಗೆದಾರರು ಕಾವೇರಿ ನೀರು ಬಿಲ್ ಕಟ್ಟದ ಕಾರಣ ನೀರು ಪೂರೈಕೆ ಬಂದ್ ಮಾಡಲಾಗುತ್ತಿದೆ. ಹಲವು ಬಾರಿ ಮನವಿ ಮಾಡಿದರು ಗುತ್ತಿಗೆದಾರರು ಗಮನ ಕೊಡದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಲ್ಲಿಯವರಿಗೆ ಗುತ್ತಿಗೆದಾರರು ಜಲಮಂಡಳಿಗೆ ಕೋಟ್ಯಂತರ ರೂ. ಬಾಕಿ ಮೊತ್ತ ಪಾವತಿಯನ್ನೆ ಮಾಡಿಲ್ಲ. ಸರಿಸುಮಾರು 4 ಕೋಟಿ ಜಲಮಂಡಳಿಗೆ ಬಾಕಿ ಮೊತ್ತ ಪಾವತಿ ಮಾಡಬೇಕು. ಬಿಬಿಎಂಪಿ ಕಮಿಷನರ್‍ಗೂ ಈ ಬಗ್ಗೆ ಮನವಿ ಮಾಡಲಾಗಿದೆ. ಕಮಿಷನರ್ ಅವರು ಗಮನ ಕೊಡದಿದ್ದರೆ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಜಲಮಂಡಳಿ ಅಧ್ಯಕ್ಷ ತಿಳಿಸಿದ್ದಾರೆ.