ಬೆಂಗಳೂರು: ಬಡವರ ಹಸಿವು ನೀಗಿಸಲೆಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್, ಆಹಾರದ ಗುಣಮಟ್ಟದ ಕುರಿತು ಆಗಾಗ ಸುದ್ದಿಯಾಗುತ್ತಿರುತ್ತದೆ.
ಹೌದು. ಇದೀಗ ಮತ್ತೆ ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟದ ಕುರಿತು ಸುದ್ದಿಯಾಗುತ್ತಿದೆ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ನಡೆಸುತ್ತಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರದ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಿದೆ.
Advertisement
Advertisement
ಬೆಂಗಳೂರಿನ ಬೊಮ್ಮನಹಳ್ಳಿ ವಲಯದಲ್ಲಿರುವ ಇಂದಿರಾ ಕ್ಯಾಂಟೀನ್ ಗೋಡೌನ್‍ನಲ್ಲಿ ಕೊಳೆತು ವಾಸನೆ ಬರುತ್ತಿರುವ ಈರುಳ್ಳಿ, ಕ್ಯಾರೆಟ್, ಹುಳವಿರುವ ಅಕ್ಕಿ, ಕೆಟ್ಟಿರುವ ತೆಂಗಿನಕಾಯಿ ಪತ್ತೆ ಆಗಿದೆ. ಸ್ಥಳೀಯರೇ ಗೋಡೌನ್‍ಗೆ ತೆರಳಿ ಅಸಲಿ ಬಣ್ಣ ಬಯಲು ಮಾಡಿದ್ದಾರೆ.
Advertisement
ಇದರ ನಡುವೆ ಆಗಸ್ಟ್‍ನಿಂದ ಇಂದಿರಾ ಕ್ಯಾಂಟೀನ್ ಊಟ-ತಿಂಡಿ ಮೆನು ಬದಲಾಗಲಿದೆ. ಬೆಳಗ್ಗೆ ಬ್ರೆಡ್‍ಜಾಮ್, ಮಂಗಳೂರು ಬನ್ಸ್, ಮಧ್ಯಾಹ್ನ ಚಪಾತಿ ಮಾತ್ರವಲ್ಲದೆ ಬಿಸಿ ಬಿಸಿ ರಾಗಿ ಮುದ್ದೆ ಸಿಗಲಿದೆ. ಸದ್ಯ ಬೆಳಗ್ಗೆ ಇಡ್ಲಿ, ವಾಂಗಿಬಾತ್, ಪೊಂಗಲ್, ಉಪ್ಪಿಟ್ಟು, ಮಧ್ಯಾಹ್ನ ಅನ್ನ ಸಾಂಬಾರ್ ಮೊಸರನ್ನ ಸಿಗುತ್ತಿದೆ.
Advertisement