ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ದೋಖಾ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಜಾರಿ ನಿರ್ದೇಶನಾಲಯ (ಇಡಿ) ಕಣ್ಣು ಸಚಿವ ಜಮೀರ್ ಅಹ್ಮದ್ ಖಾನ್ ಮೇಲೆ ಬಿದ್ದಾಯ್ತು, ಮುಂದೆ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ.
Advertisement
ಸಾವಿರಾರು ಮಂದಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಓಡಿ ಹೋಗಿರೋ ಮನ್ಸೂರ್ ಖಾನ್ ಕಂಬಿ ಎಣಿಸೋ ಕಾಲ ಹತ್ತಿರವಾಗುತ್ತಿದೆ. ಯಾಕೆಂದರೆ ಐಎಂಎ ಕೇಸಲ್ಲಿ ಸೋಮವಾರ ಸಿಬಿಐ ಎಂಟ್ರಿಯಾಗುತ್ತಿದೆ. ಶುಕ್ರವಾರವಷ್ಟೇ ಇಡಿ ಅಧಿಕಾರಿಗಳಿಂದ ಸಿಬಿಐ ಎಲ್ಲ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಜಮೀರ್‍ಗೆ ಇಡಿ ಈಗಾಗಲೇ ನೋಟಿಸ್ ನೀಡಿದ್ದು, ಸಿಬಿಐ ಉರುಳಿಗೆ ಸಿಲುಕಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಐಎಂಎ ಹಗರಣ – ವಿಚಾರಣೆಗೆ ಹಾಜರಾಗುವಂತೆ ಜಮೀರ್‌ಗೆ ಇಡಿ ನೋಟಿಸ್
Advertisement
Advertisement
ಸಿಬಿಐಗೆ ಕೇಸ್ ಕೈಗೆತ್ತಿಕೊಂಡರೆ ಸಚಿವ ಜಮೀರ್, ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್, ಜೆಡಿಎಸ್‍ನ ಎಂಎಲ್‍ಸಿ ಶರವಣ ಸೇರಿದಂತೆ ಸಾಕಷ್ಟು ಜನನಾಯಕರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಕಾಂಗ್ರೆಸ್‍ನ ಉಚ್ಛಾಟಿತ ಮುಖಂಡರಿಗೂ ಸಂಕಷ್ಟ ತಪ್ಪಿದ್ದಲ್ಲ. ಮನ್ಸೂರ್ ವಿಡಿಯೋದಲ್ಲಿ ಯಾರ್ಯಾರ ಹೆಸರು ಹೇಳಿದ್ದಾನೋ ಅವರೆಲ್ಲರನ್ನು ಸಿಬಿಐ ಡ್ರಿಲ್ ಮಾಡಲಿದೆ. ಇದೇ ಅಸ್ತ್ರ ಮುಂದಿಟ್ಟುಕೊಂಡು ದೋಸ್ತಿ ಸರ್ಕಾರ ಉರುಳಿಸಲು ಮೋದಿ ಸರ್ಕಾರ ಪ್ಲಾನ್ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.