– ಒಡಿಶಾದ ಮೊದಲ ಮುಸ್ಲಿಂ ಶಾಸಕಿಯಾಗಿ ಸಾಧನೆ
ಭುವನೇಶ್ವರ: ಬೆಂಗಳೂರಿನಲ್ಲಿ (Bengaluru) ಓದಿದ ಸೋಫಿಯಾ ಫಿರ್ದೌಸ್ (Sofia Firdous) ಒಡಿಶಾ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಈ ಮೂಲಕ ಒಡಿಶಾದಲ್ಲಿ (Odisha) ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕಿ (Muslim MLA) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
- Advertisement -
ಒಡಿಶಾದ ಬಾರಾಬತಿ-ಕಟಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋಫಿಯಾ ಬಿಜೆಪಿಯ ಪೂರ್ಣಚಂದ್ರ ಮಹಾಪಾತ್ರ ಅವರನ್ನು 8,001 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸೋಫಿಯಾ ಅವರಿಗೆ 53,339 ಮತಗಳು ಬಿದ್ದರೆ ಪೂರ್ಣಚಂದ್ರ ಮಹಾಪಾತ್ರ ಅವರಿಗೆ 45,338 ಮತಗಳು ಬಿದ್ದಿವೆ.
- Advertisement -
- Advertisement -
ಸೋಫಿಯಾ ಫಿರ್ದೌಸ್ ಯಾರು?
32 ವರ್ಷದ ಸೋಫಿಯಾ ಫಿರ್ದೌಸ್ ರಾಜಕೀಯ ಕುಟುಂಬದಿಂದ ಬಂದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮೊಹಮ್ಮದ್ ಮೊಕ್ವಿಮ್ ಅವರ ಪುತ್ರಿಯಗಿರುವ ಇವರು ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು 2022 ರಲ್ಲಿ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ (IIMB) ಎಕ್ಸುಕ್ಯೂಟಿವ್ ಜನರಲ್ ಮ್ಯಾನೆಜ್‌ಮೆಂಟ್ ಪ್ರೋಗ್ರಾಂ ಓದಿದ್ದಾರೆ. ಇದನ್ನೂ ಓದಿ: ಮೋದಿ ಜೊತೆ 30 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ!
- Advertisement -
2023 ರಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾದ (CREDAI) ಒಕ್ಕೂಟದ ಭುವನೇಶ್ವರದ ಅಧ್ಯಾಯದ ಅಧ್ಯಕ್ಷರಾಗಿ ಫಿರ್ದೌಸ್ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೇ CREDAI ಮಹಿಳಾ ವಿಭಾಗದ ಪೂರ್ವ ವಲಯ ಸಂಯೋಜಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ (IGBC) ಭುವನೇಶ್ವರ ವಿಭಾಗದ ಸಹ-ಅಧ್ಯಕ್ಷರಾಗಿದ್ದಾರೆ . ಸೋಫಿಯಾ ಫಿರ್ದೌಸ್ ಅವರು ಉದ್ಯಮಿ ಶೇಖ್ ಮೆರಾಜ್ ಉಲ್ ಹಕ್ ಅವರನ್ನು ವಿವಾಹವಾಗಿದ್ದಾರೆ.