– ಪೊಲೀಸರಿಂದ 10 ಬೈಕ್ ವಶ
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹಿಲಿಂಗ್ ಮಾಡ್ತಿದ್ದವರನ್ನ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ವಶಕ್ಕೆ ಪಡೆದು, 10 ಬೈಕ್ ಗಳನ್ನ ಜಪ್ತಿ ಮಾಡಿದ್ದಾರೆ.
Advertisement
ಬೆಂಗಳೂರು – ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವನಹಳ್ಳಿ ಕಡೆಯಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಸಂಚಾರ ಮಾಡ್ತಿದ್ದ 15 ಯುವಕರ ಗುಂಪು ಬೈಕ್ ಗಳಲ್ಲಿ ವ್ಹೀಲಿಂಗ್ ಮಾಡ್ತಾ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡ್ತಿದ್ರು. ಅಪಾಯಕಾರಿ ವ್ಹೀಲಿಂಗ್ ಮಾಡುತ್ತಾ ಕೇಕೆ ಶಿಳ್ಳೆ ಹಾಕ್ತಾ ಮೋಜು ಮಸ್ತಿ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೊಲೀಸರು ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಬರುತ್ತಿದ್ದ ಬೈಕ್ ಗಳನ್ನ ಅಡ್ಡಗಟ್ಟಿದ್ದಾರೆ.
Advertisement
Advertisement
ಕೆಲವರು ಬೈಕ್ ಸಮೇತ ಎಸ್ಕೇಪ್ ಆಗಲು ಯತ್ನಿಸಿದರೆ, ಕೆಲವರು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಈ ವೇಳೆ ಚೇಸ್ ಮಾಡಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ಬೈಕ್ ಗಳನ್ನ ಇರಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ-ಆರೋಗ್ಯ ಇಲಾಖೆಯ ಒಂದೇ ಕಾರ್ನಲ್ಲಿ 10 ಮಂದಿ ಪ್ರಯಾಣ
Advertisement
ದುಬಾರಿ ಬೆಲೆಯ ಡ್ಯುಕ್ ಸೇರಿದಂತೆ ಸೇರಿದಂತೆ ಡಿಯೋ ಬೈಕ್ ಗಳನ್ನ ಸೀಝ್ ಮಾಡಲಾಗಿದೆ. ಇನ್ನೂ ಕಳೆದ ವಾರವಷ್ಟೇ ಇದೇ ಹೆದ್ದಾರಿಯಲ್ಲಿ ಕಾರಿಗೆ ಬೈಕ್ ನಲ್ಲಿ ವ್ಹೀಲಿಂಗ್ ಮಾಡ್ತಾ ಚಮಕ್ ಕೊಟ್ಟ ಬೈಕ್ ನ್ನ ಕಾರು ಚಾಲಕ ಸುಟ್ಟು ಹಾಕಿ ಕೋಪ ಹೊರಹಾಕಿದ್ದ. ಇದಾದ ಬೆನ್ನಲ್ಲೇ ಎಚ್ಚೆತ್ತಿರುವ ಪೊಲೀಸರು ಈಗ ಪುಂಡರಿಗೆ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ- ಕುಗ್ರಾಮದ ನೇಕಾರನಿಗೆ ಒಲಿಯಿತು ರಾಜ್ಯ ಮಟ್ಟದ ಪ್ರಶಸ್ತಿ