ಬೆಂಗಳೂರು: ನನ್ನ ಹೆಂಡತಿ ತುಂಬಾ ಜೋರು, ಅವಳ ಜೊತೆ ನನಗೆ ಬದುಕಲು ಆಗುತ್ತಿಲ್ಲ ಅಂತಾ ನ್ಯಾಯಮೂರ್ತಿಗಳ ಮುಂದೆ ಟೆಕ್ಕಿ ಪತಿ ಕಣ್ಣೀರು ಹಾಕಿದ್ದಾರೆ.
ಕರ್ನಾಟಕ ಹೈಕೋರ್ಟ್ ಇಂತಹದೊಂದು ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಅಮೆರಿಕಾದಲ್ಲಿ ನೆಲೆಸಿರೋ ಬೆಂಗಳೂರಿನ ಟೆಕ್ಕಿಯೊಬ್ಬರು, ನನಗೆ ಹೆಂಡ್ತಿನಾ ಕಂಡ್ರೆ ಭಯ, ಅವಳು ನನಗೆ ಹೊಡೀತಾಳೆ, ಅವಳ ಮುಖ ನೋಡಿದ್ರೆನೆ ನನಗೆ ಭಯ ಆಗುತ್ತದೆ. ಹಾಗಾಗಿ ನನಗೆ ಡೈವೋರ್ಸ್ ಕೊಡಿ ಅಂತ ಜಡ್ಜ್ ಬಳಿ ಬೇಡಿಕೊಂಡಿದ್ದಾರೆ.
Advertisement
ನ್ಯಾಯಾಧೀಶರು ಹೇಳಿದ್ದೇನು?: ಭಾವನೆಗಳು ಬೆರೆತಾಗ ಮಾತ್ರ ಗಂಡ ಹೆಂಡತಿ ಸಂಸಾರ ಮಾಡಲು ಸಾಧ್ಯವಾಗುತ್ತದೆ. ಗಂಡ ಅಮೆರಿಕಾದಲ್ಲಿ ಇದ್ದರೂ ಅಲ್ಲಿಂದಲೇ ಪ್ರೀತಿಯಿಂದ ಇರೋದನ್ನ ನೋಡಿದ್ದೇವೆ. ಆದ್ರೆ ಮಾನಸಿಕ ತೊಂದರೆಗಳು ಆಗುವುದು ಸಾಮಾನ್ಯ, ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರಲು ಸಾಧ್ಯವಿಲ್ಲ.ಮಾನಸಿಕ ತಜ್ಞರಾದ ಶಾಹ ಎಂಬವರು ಬಳಿ ಕೌನ್ಸೆಲಿಂಗ್ ಮಾಡಿಸಿಕೊಳ್ಳಿ.ಪ್ರೀತಿ ಇಲ್ಲದವರ ಬಳಿ ಇರಲೂ ಯಾರಿಗೂ ಸಾಧ್ಯವಿಲ್ಲ. ಹಾಗೇನಾದ್ರು ಇದ್ರೆ ಅವರನ್ನು ನಾಯಿಯಂತೆ ನೋಡಿಕೊಳ್ಳುತ್ತಾರೆ. ಆರೋಪಗಳನ್ನು ಮಾಡುವುದನ್ನು ಬಿಡಬೇಕು, ಹಿಂದೆ ನಡೆದಿದ್ದನ್ನು ಮರೆಯಬೇಕು.. ಗಂಡನಿಗೆ ಇಚ್ಛೆ ಇಲ್ಲ ಅಂದ್ರೆ ನ್ಯಾಯಾಲಯ ಒತ್ತಾಯಪೂರ್ವಕವಾಗಿ ಒಂದೇ ಕಡೆ ಇರಿ ಎಂದು ಹೇಳಲು ಸಾಧ್ಯವಿಲ್ಲ. ಇದು ಒಂದು ದಿನದ ಜೀವನವಲ್ಲ, ಪ್ರೀತಿ ಇಲ್ಲದ ಮೇಲೆ ಭಾವನೆಗಳು ಬೆರೆಯದೇ ಸಂಸಾರ ನಡೆಸಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ.
Advertisement
ಈ ರೀತಿಯಾಗಿ ಬುದ್ದಿವಾದ ಹೇಳಿದ ಜಡ್ಜ್, ಕೊನೆಗೆ ಮಧ್ಯಸ್ಥಿಕಾ ಕೇಂದ್ರಕ್ಕೆ ತೆರಳಿ ಸಮಸ್ಯೆ ಪರಿಹರಿಸಿಕೊಳ್ಳಿ. ಅಲ್ಲಿಯೂ ಪರಿಹಾರ ದೊರೆಯದೆ ಹೋದರೆ ಮತ್ತೆ ಬನ್ನಿ ಅಂತ ಹೇಳಿ ಪ್ರಕರಣವನ್ನ ಮುಂದೂಡಿದ್ದಾರೆ.