ಬೆಂಗಳೂರು: ಕಳೆದ ಎರಡು ತಿಂಗಳುಗಳಿಂದ ಈರುಳ್ಳಿ, ತರಕಾರಿ, ದವಸ-ಧಾನ್ಯಗಳು, ಗ್ಯಾಸ್, ಹಾಲಿನ ದರ ಏರಿಕೆಯಾಗಿತ್ತು. ಆದರೆ ಈಗ ಹೋಟೆಲ್ ಊಟ-ತಿಂಡಿ ದರ ಕೂಡ ಸಹ ದುಬಾರಿಯಾಗಿದ್ದು, ಗ್ರಾಹಕರಿಗೆ ಹೋಟೆಲ್ ಮಾಲೀಕರು ಶಾಕ್ ನೀಡಿದ್ದಾರೆ.
ಕೆಲವೇ ದಿನಗಳಲ್ಲಿ ಹೋಟೆಲ್ ಊಟ-ತಿಂಡಿಗಳ ಬೆಲೆಗಳಲ್ಲಿ ಶೇ. 5 ರಿಂದ 10ರಷ್ಟು ಹೆಚ್ಚಳ ಮಾಡಲು ಬೃಹತ್ ಬೆಂಗಳೂರು ಹೋಟೆಲ್ ಸಂಘ ನಿರ್ಧರಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರುವ ರಾಜ್ಯದ ಜನತೆಗೆ ಇದು ಬರೆಯೆಳೆದಂತಾಗಿದೆ. ಹಾಲು, ಎಣ್ಣೆ, ಮೊಸರು, ಬೆಳೆ ಕಾಳುಗಳ ಬೆಲೆ ಏರಿಕೆಯಾಗಿರುವುದರಿಂದ ಹೋಟೆಲ್ ಊಟ-ತಿಂಡಿಗಳ ಬೆಲೆ ಏರಿಕೆ ಅನಿವಾರ್ಯ ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
Advertisement
Advertisement
ಬೆಂಗಳೂರಿನಲ್ಲಿ 17,000 ಹೋಟೆಲ್‍ಗಳಿವೆ. ಇವುಗಳಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಮಟ್ಟದ ಮೂರು ರೀತಿಯ ಹೋಟೆಲ್‍ಗಳು ಸೇರಿದೆ. ಸಣ್ಣ ಮತ್ತು ಮಾಧ್ಯಮ ಗಾತ್ರದ ಹೋಟೆಲ್‍ಗಳಲ್ಲಿ ಇಂದಿನಿಂದಲೇ ಕಾಫಿ, ಟೀ ದರ ಹೆಚ್ಚಾಗಲಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಈ ಹೆಚ್ಚಳ ಜಾರಿಗೆ ಬರಲಿದೆಯಂತೆ. ಈ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.