ಬೆಂಗಳೂರು: ದಿನದಿಂದ ದಿನಕ್ಕೆ ಉಪಚುನಾವಣಾ ಕಣ ರಂಗೇರುತ್ತಿದ್ದು, ಪಕ್ಷದ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹೀಗೆ ಪ್ರಚಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಪ್ರಸಂಗ ನಡೆದಿದೆ.
Advertisement
ಹೊಸಕೋಟೆ ಹೋಬಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಮತಯಾಚಿಸಲು ಸಿದ್ದರಾಮಯ್ಯ ಅವರು ಇಂದು ತೆರಳಿದ್ದರು. ಈ ವೇಳೆ ಯುವಕರು ಮಾಜಿ ಸಿಎಂ ಜೊತೆ ಸೆಲ್ಫಿ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಅಂತ ಸ್ಫರ್ಧೆಗಿಳಿದರು. ಇಷ್ಟು ಮಾತ್ರವಲ್ಲದೆ ಇತ್ತ ವೇದಿಕೆ ಮೇಲೆಯೂ ಜನ ಸೆಲ್ಫಿಗೆ ಮುಗಿಬಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಮಾಜಿ ಸಿಎಂ ಆದ್ರೂ ಸೆಲ್ಫಿಗೆ ಫುಲ್ ಡಿಮ್ಯಾಂಡ್
Advertisement
ಸಿದ್ದರಾಮಯ್ಯನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಂದಾಗುವುದು ಇದೇ ಮೊದಲಲ್ಲ. ಈ ಹಿಂದೆಯೂ ಮಾಜಿ ಸಿಎಂ ಅವರು ಕೆಲವೊಂದು ಕಾರ್ಯಕ್ರಮಗಳಿಗೆ ತೆರಳಿದಾಗ ಮಹಿಳೆಯರು, ಯುವತಿಯರು ಕೂಡ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟಿದ್ದರು. ತನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದವರಿಗೆ ಸಿದ್ದರಾಮಯ್ಯ ಕೂಡ ಪೋಸು ಕೊಡುವ ಮೂಲಕ ಅವರೊಂದಿಗೆ ಸಂತಸ ಪಡುತ್ತಿದ್ದರು. ಇದನ್ನೂ ಓದಿ:ಸಿದ್ದರಾಮಯ್ಯಗೆ ವಿಶ್ ಮಾಡಲು ಬಂದು ಕಿಸ್ ಕೊಟ್ಟ ಯುವಕ – ವಿಡಿಯೋ ವೈರಲ್