ಬೆಂಗಳೂರು: ನಗರ ಅಭಿವೃದ್ಧಿಗಾಗಿ, ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಗಾಗಿ ವಿಷನ್ ಗ್ರೂಪ್ ರಚನೆ ಮಾಡಿದ್ದ ಸರ್ಕಾರ ಈಗ ಉನ್ನತ ಶಿಕ್ಷಣ ಇಲಾಖೆಗೂ ವಿಷನ್ ಗ್ರೂಪ್ ರಚನೆ ಮಾಡಿದೆ. ವಿಷನ್ ಗ್ರೂಪ್ ಮೂಲಕ ಉನ್ನತ ಶಿಕ್ಷಣ ಇಲಾಖೆಯನ್ನ ಅಭಿವೃದ್ಧಿ ಪಡಿಸೋದು ಸರ್ಕಾರದ ಮುಖ್ಯ ಗುರಿಯಾಗಿದೆ. ಅಷ್ಟೇ ಅಲ್ಲ ಗುಣಾತ್ಮಕ ಶಿಕ್ಷಣ, ವಿದ್ಯಾರ್ಥಿ ಸ್ನೇಹಿ ಯೋಜನೆ, ಅನ್ಯ ದೇಶಗಳಿಗೆ ಸ್ವರ್ಧೆ ಒಡ್ಡುವ ತರಬೇತಿ ನಿಡೋದು ಈ ವಿಷನ್ ಗ್ರೂಪ್ ನ ಅಜೆಂಡಾವಾಗಿದೆ.
ಏನಿದು ವಿಷನ್ ಗ್ರೂಪ್?
ವಿಷನ್ ಗ್ರೂಪ್ ಅನ್ನೋದು ಉನ್ನತ ಶಿಕ್ಷಣ ಇಲಾಖೆ ಮುಂದೆ ಯಾವ ದಾರಿಯಲ್ಲಿ ಸಾಗಬೇಕು ಅನ್ನೋ ಕುರಿತು ಮಾರ್ಗದರ್ಶನ ನಿಡೋ ಚಿಂತಕರ ಚಾವಡಿ ಇದ್ದ ಹಾಗೆ. ವಿಷನ್ ಗ್ರೂಪ್ ನಲ್ಲಿ ಶಿಕ್ಷಣ ತಜ್ಞರು, ದೊಡ್ಡ ದೊಡ್ಡ ಇಂಡಸ್ಟ್ರಿ ಐಕಾನ್ಸ್, ಸಮಾಜ ಚಿಂತಕರು, ವಿಷಯಗಳು ತಜ್ಞರು ಇರುತ್ತಾರೆ. ಈ ಗ್ರೂಪ್ ಉನ್ನತ ಶಿಕ್ಷಣ ಇಲಾಖೆ ಯಾವ ಮಾರ್ಗದಲ್ಲಿ ಹೋದರೆ ಅಭಿವೃದ್ಧಿ ಆಗುತ್ತದೆ. ಉನ್ನತ ಶಿಕ್ಷಣ ಬೆಳವಣಿಗೆಗೆ ಯಾವ ಯಾವ ಯೋಜನೆಗಳು ಸೂಕ್ತ ಅನ್ನೋ ಅಂಶಗಳನ್ನ ಸರ್ಕಾರಕ್ಕೆ ನೀಡುತ್ತದೆ.
Advertisement
ಉದಾಹರಣೆಗೆ ಉನ್ನತ ಶಿಕ್ಷಣದ ಪಠ್ಯಗಳು, ಜಾಗತಿಕ ಮಟ್ಟದಲ್ಲಿ ಹೇಗೆ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿ ಮಾಡಬೇಕು. ಕ್ಯಾಂಪಸ್ ಗಳ ಅಭಿವೃದ್ಧಿ, ಕೋರ್ಸ್ ಗಳ ಬದಲಾವಣೆ ಹೀಗೆ ಶೈಕ್ಷಣಿಕ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ವಿಕಾಸಕ್ಕೆ ಅಗತ್ಯವಾದ ಮಾಹಿತಿಯನ್ನ ಆಗಾಗ ಸರ್ಕಾರಕ್ಕೆ ನೀಡುತ್ತದೆ. ವಿಷನ್ ಗ್ರೂಪ್ ನಿಡುವ ಸಲಹೆಗಳನ್ನ ಸರ್ಕಾರ ಅನುಷ್ಠಾನ ಮಾಡಿ, ಉನ್ನತ ಶಿಕ್ಷಣ ಇಲಾಖೆಗೆ ಹೊಸ ಕಾಯಕಲ್ಪ ಕೊಡೋದು ಈ ವಿಷನ್ ಗ್ರೂಪ್ ಉದ್ದೇಶವಾಗಿದೆ.
Advertisement