ಶಕ್ತಿ ಯೋಜನೆಯನ್ನು ಪ್ರಶ್ನಿಸಿದವರಿಗೆ ಹೈಕೋರ್ಟ್ ತರಾಟೆ

Public TV
1 Min Read

ಬೆಂಗಳೂರು: ಶಕ್ತಿ ಯೋಜನೆ (Shakti Scheme) ಪ್ರಶ್ನಿಸಿ ಅರ್ಜಿ ಸಲ್ಲಿಸಿದವರಿಗೆ ಹೈಕೋರ್ಟ್ (HighCourt) ತರಾಟೆಗೆ ತೆಗೆದುಕೊಂಡಿದೆ.

ಶಕ್ತಿಯೋಜನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅಲ್ಲದೇ ಆರ್ಥಿಕ ಹೊರೆಯಿಂದ ಇತರರಿಗೆ ತೊಂದರೆ ಆಗುತ್ತೆ ಎಂದು ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ರು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಪೀಠ ಅರ್ಜಿದಾರರಿಗೆ ಬುದ್ಧಿವಾದ ಹೇಳಿದೆ.

ಅರ್ಜಿ ವಿಚಾರಣೆ ವೇಳೆ ಸಾಕಷ್ಟು ಪ್ರಶ್ನೆಗಳನ್ನು ಅರ್ಜಿದಾರರಿಗೆ ಕೇಳಿದೆ. ಶಕ್ತಿ ಯೋಜನೆಯ ಬಗ್ಗೆ ಅಧ್ಯಯನ ಮಾಡಿ ಅರ್ಜಿ ಸಲ್ಲಿಸಿದ್ದೀರಾ…? ಯೋಜನೆ ಆರ್ಥಿಕ ದರ್ಬಲ ವರ್ಗಕ್ಕೆ ಸೌಲಭ್ಯ ನೀಡಿದೆ ಅಲ್ವಾ…? ಶಕ್ತಿ ಯೋಜನೆ ಜಾರಿಗೆ ಮುನ್ನ ಸಂಚಾರ ಸುಗಮವಾಗಿತ್ತಾ? ಈ ಯೋಜನೆ ಬಸ್ ನಲ್ಲಿ ದಟ್ಟಣೆ ಉಂಟಾಗಿದೆಯೇ? ಎಲ್ಲೆಲ್ಲಿ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಭಾರೀ ಮಳೆ; ಧರೆಗುರುಳಿದ ಮರ

ಯಾವ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಇದೆ? ಸಾರ್ವಜನಿಕ ಸಾರಿಗೆಯಲ್ಲಿ ಇಷ್ಟೇ ಜನ ಪ್ರಯಾಣಿಸಬೇಕು ಎಂದು ರೂಲ್ಸ್ ಇದ್ಯಾ? ಮುಂಬೈ ಲೋಕಲ್ ರೈಲುಗಳ ದಟ್ಟಣೆಯ ಬಗ್ಗೆ ನಿಮಗೆ ಅರಿವಿದಿದ್ದಿದ್ರೆ ಅರ್ಜಿ ಸಲ್ಲಿಕೆ ಮಾಡುತ್ತಿರಲಿಲ್ಲ. ಅಧ್ಯಯನ ಮಾಡದೇ ಅರ್ಜಿ ಸಲ್ಲಿಸಿದ್ದೀರಿ ಹೀಗೆ ಹಲವು ಪ್ರಶ್ನೆಗಳನ್ನು ಮಾಡಿ ಅರ್ಜಿಯನ್ನು ಹಿಂಪಡೆಯಲು ನಿಮಗೆ ಅನುಮತಿ ನೀಡ್ತೀನಿ ಅಂತ ಹೈಕೋರ್ಟ್ ಅವಕಾಶವನ್ನು ನೀಡಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article