ಬೆಂಗಳೂರು: ಶನಿವಾರದಿಂದ ಸಾಲು ಸಾಲು ರಜೆ ಮತ್ತು ದಸರಾ ಹಬ್ಬ ಪ್ರಯುಕ್ತ ಬೆಂಗಳೂರು ಜನತೆ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿರುವ ಹಿನ್ನೆಲೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ಮುಖಾಂತರ ಹಾದುಹೋಗಿರುವ ಬೆಂಗಳೂರು-ತುಮಕೂರು ಮತ್ತು ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ 5 ಗಂಟೆಯಿಂದ 10 ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರಿನಿಂದ ದೂರದ ಊರುಗಳಿಗೆ ತೆರಳುತ್ತಿರುವ ಜನರು ಟ್ರಾಫಿಕ್ ನಿಂದ ಸಮಸ್ಯೆ ಎದುರಿಸಿದ್ದಾರೆ.
Advertisement
Advertisement
ಪ್ರಮುಖವಾಗಿ ನೆಲಮಂಗಲದ ನವಯುಗ ಮತ್ತು ಜಾಸ್ ಟೋಲ್ ಬಳಿ ಹೆಚ್ಚಿನ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿ ವಾಹನ ಸವಾರರ ಪರದಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದು, ಟ್ರಾಫಿಕ್ ನಲ್ಲಿ ಸಿಲುಕಿರುವ ಅಂಬ್ಯುಲೆನ್ಸ್ ಗಳ ಸ್ಥಿತಿ ಯಾರು ಕೇಳದಂತಾಗಿದೆ. ಇತ್ತ ವಾಹನ ದಟ್ಟಣೆ ನಿಯಂತ್ರಿಸಲು ನೆಲಮಂಗಲ ಸಂಚಾರಿ ಪೊಲೀಸ್ ಹಾಗೂ ಟೋಲ್ ಸಿಬ್ಬಂದಿಗಳ ಪರದಾಟ ನಡೆಸುತ್ತಿದ್ದಾರೆ.