ಬೆಂಗಳೂರು: ರಾಮನಗರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಡೆ ಇಂದು ಭರ್ಜರಿ ಮಳೆಯಾಗಿದೆ. ಮಳೆರಾಯನ ಆರ್ಭಟಕ್ಕೆ ಬೆಂಗಳೂರಿನ ರಸ್ತೆಗಳು ತುಂಬಿ ಹರಿದವು.
ಸೌತ ಬೆಂಗಳೂರಿನಲ್ಲಿ ಇಂದು ಸಂಜೆ ಭಾರೀ ಮಳೆಯಾಯಿತು. ಎಂಜಿ ರೋಡ್ ಶಾಂತಿನಗರ, ನೀಲಸಂದ್ರ ಬೊಮ್ಮನಹಳ್ಳಿ, ಆನೇಕಲ್, ನೆಲಮಂಗಲದಲ್ಲಿ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಯಿತು. ಬಿಟಿಎಂ ಲೇಔಟ್ ಹಾಗೂ ಕೊಡಿ ಚಿಕ್ಕನಹಳ್ಳಿಯಲ್ಲಿ ಕೆರೆ ಕೊಡಿ ಒಡೆದು ಮಳೆ ನೀರು ರಸ್ತೆ ಹಾಗೂ ಮನೆಗಳಿಗೆ ನುಗ್ಗಿ ಜನರು ಪರಡಾಡುವಂತಾಗಿದೆ.
Advertisement
Advertisement
ಆನೇಕಲ್ ಭಾಗದ ಜಿಗಣಿ, ಚಂದಾಪುರ, ಹುಳಿಮಾವು, ಅರಕೆರೆ, ಕಾಳೇನ ಅಗ್ರಹಾರ, ಬನ್ನೇರುಘಟ್ಟ ಸೇರಿದಂತೆ ತಾಲೂಕಿನಾದ್ಯಾಂತ ಮಳೆಯಾಗಿ ವಾಹನ ಸವಾರರು ಪರದಾಡಯವಂತಾಯಿತು. ನೆಲಮಂಗಲ ತಾಲೂಕಿನಲ್ಲೂ ಮಳೆಯಾಗಿದ್ದು, ಕೆಂಪಲಿಂಗನಹಳ್ಳಿಯಲ್ಲಿ ದೈತ್ಯ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿತ್ತು. ಇದರಿಂದಾಗಿ ಕೆಲ ಹೊತ್ತು ಸವಾರರು, ಚಾಲಕರು ತೊಂದರೆ ಅನುಭವಿಸಿದರು. ಬಿರುಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಸುತ್ತಮುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ.
Advertisement
ರಾಮನಗರದಲ್ಲಿ ಚೋರು ಗಾಳಿ, ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ. ಇದರಿಂದಾಗಿ ಬೆಂಗಳೂರು- ಮೈಸೂರು ರಸ್ತೆಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದ್ದು, ಸವಾರರು ಪರದಾಡುವಂತಾಗಿದೆ.