– ದೇವೇಗೌಡ್ರ ಹಳೇ ಹೇಳಿಕೆ ಈಗ ವೈರಲ್
ಬೆಂಗಳೂರು: ಮತ್ತೊಮ್ಮೆ ವಚನ ಭ್ರಷ್ಟತೆ ಆರೋಪಕ್ಕೀಡಾದ್ರಾ ಮುಖ್ಯಮಂತ್ರಿ ಅನ್ನೋ ಪ್ರಶ್ನೆಯೊಂದು ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಮೂಡಿದೆ.
ಜೆಡಿಎಸ್ ಎಂಎಲ್‍ಸಿ ಬಿ.ಎಂ. ಫಾರೂಕ್‍ಗೆ ಸಚಿವ ಸ್ಥಾನ ಸಿಗಲ್ಲ ಎಂದು ಹೇಳಲಾಗುತ್ತಿದ್ದು, ಈ ಮೂಲಕ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಡಲು ಮುಖ್ಯಮಂತ್ರಿಗಳೇ ಅಡ್ಡಿಯಾದ್ರಾ ಅನ್ನೋ ಅನುಮಾನ ಮೂಡಿದೆ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಅಲ್ಪಸಂಖ್ಯಾತರು ಕೈಹಿಡಿಯಲಿಲ್ಲ ಎಂಬ ಸಿಟ್ಟಿದ್ದು, ಸಿಎಂ ಅವರು ಈ ಬಗ್ಗೆ ಹಲವು ಬಾರಿ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಗಳ ಹಠದಿಂದಲೇ ದೇವೇಗೌಡರು ಫಾರೂಕ್‍ಗೆ ಕೈ ಕೊಟ್ರಾ ಅನ್ನೋ ಪ್ರಶ್ನೆ ಕೂಡ ಮೂಡಿದೆ.
ಯಾಕಂದರೆ, ಈ ದೇವೇಗೌಡರು ನಂಬಿದವರನ್ನು ಬಿಡಲ್ಲ, ಫಾರೂಕ್‍ರನ್ನ ಯು.ಟಿ ಖಾದರ್ ನಂತೆ ಮಂತ್ರಿ ಮಾಡಿ ಬೆಳೆಸುತ್ತೇನೆ ಎಂದು ಈ ಹಿಂದೆ ದೇವೇಗೌಡರು ಹೇಳಿದ್ದರು. ಕಳೆದ ವರ್ಷ ಫಾರೂಕ್‍ಗೆ ದೇವೇಗೌಡ್ರು ಕೊಟ್ಟಿದ್ದ ಭರವಸೆ ವೀಡಿಯೋ ಈಗ ವೈರಲ್ ಆಗುತ್ತಿದೆ.
ದೇವೇಗೌಡರು ಹೇಳಿದ್ದೇನು?
“ಈ ಸಭೆಯಲ್ಲಿ ಒಂದು ಮಾತು ಹೇಳ್ತೀನಿ. ಫಾರೂಕ್ ಅವರನ್ನು ಯು ಟಿ ಖಾದರ್ ಇರೋ ಸಚಿವ ಸ್ಥಾನದ ಜಾಗದಲ್ಲಿ ಕೂರಿಸ್ತೀನಿ. ನಾನು ಬದುಕಿರುವಾಗಲೇ ಈ ಕೆಲಸ ಮಾಡ್ತೀನಿ. ಅವರ ಆಸ್ತಿ ಎಷ್ಟಿದೆ, ಅವರ ಶ್ರೀಮಂತಿಕೆ ಎಷ್ಟಿದೆ ಅನ್ನೋದು ನಮಗೆ ಬೇಡ” ಎಂದು ಎಚ್‍ಡಿಡಿ ಹೇಳಿದ್ದರು.