ಬೆಂಗಳೂರು: ಅದು ಒಂದೇ ಕುಟುಂಬದ ಐವರು ನೇಣಿಗೆ ಶರಣಾಗಿದ್ದ ಪ್ರಕರಣ ಸಂಬಂಧ ಆ ಘಟನೆಯ ನಂತರ ಆ ಮನೆಯಲ್ಲಿ ದೆವ್ವಗಳ ಕಾಟ ಶುರುವಾಗಿದೆ. ಅಮಾವಾಸ್ಯೆ ದಿನಗಳಲ್ಲಿ ಯಾರ್ಯಾರೋ ಓಡಾಡ್ತಾರೆ, ವಿಚಿತ್ರ ಶಬ್ದಗಳು ಕೇಳ್ತಾವೆ ಅನ್ನೋ ಗುಸುಗುಸು ಶುರುವಾಗಿತ್ತು. ಇದೇ ಟೈಂನಲ್ಲಿ ಅದೊಂದು ರೋಚಕ ಘಟನೆ ವರದಿಯಾಗಿದೆ.
Advertisement
ಹೌದು, ಕಳೆದ ಆರು ತಿಂಗಳ ಹಿಂದೆ ಬೆಂಗಳೂರಿನ ಮಾಗಡಿ ರೋಡ್‍ನ ಬ್ಯಾಡರಹಳ್ಳಿ ಬಳಿಯ ತಿಗಳಪಾಳ್ಯದಲ್ಲಿ ಅದೊಂದು ಭೀಕರ ಘಟನೆ ನಡೆದಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಒಂದೇ ಮನೆಯ ಐವರು ಆತ್ಮಹತ್ಯೆಗೆ ಶರಣಾಗಿದ್ರು. ಆತ್ಮಹತ್ಯೆ ಮಾಡ್ಕೊಂಡು ಐದು ದಿನಗಳ ನಂತರ ವಿಚಾರ ಬೆಳಕಿಗೆ ಬಂದಿತ್ತು. ಇದಾದ ನಂತರ ಆ ಬಂಗಲೆಯಲ್ಲಿ ಯಾರು ಕೂಡ ವಾಸವಾಗಿಲ್ಲ. ಅವತ್ತಿನಿಂದ ಕರೆಂಟ್ ಕೂಡ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಿರೋವಾಗಲೇ ಅಲ್ಲೊಂದು ರೋಚಕ ಘಟನೆ ನಡೆದೋಗಿದೆ.
Advertisement
Advertisement
ಮನೆಯಲ್ಲಿ ಕರೆಂಟ್ ಕಟ್ ಮಾಡಿದರು ಕೂಡ ಒಂದು ಊಹಾಪೋಹ ಹಬ್ಬಿತ್ತು. ಆ ಮನೆಯಲ್ಲಿ ಅಮಾವಾಸ್ಯೆ ದಿನಗಳಲ್ಲಿ ಲೈಟ್ ಆನ್ ಇರುತ್ತೆ, ವಿಚಿತ್ರ ರೀತಿಯ ಶಬ್ದಗಳು ಕೇಳ್ತಾವೆ, ಮನೆ ತುಂಬಾ ಯಾರ್ಯಾರೋ ಓಡಾಟ ನಡೆಸ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಅದರಂತೆ ಆ ಬಂಗಲೆಯ ಅಕ್ಕಪಕ್ಕದ ನಿವಾಸಿಗಳು ರಾತ್ರಿಯಾದ್ರೆ ಸಾಕು, ಆ ಮನೆ ಕಡೆಗೆ ತಿರುಗಿ ಕೂಡ ನೋಡ್ತಾ ಇರಲಿಲ್ಲ. ಆ ಬಂಗಲೆ ಬಗ್ಗೆ ಇಷ್ಟೇಲ್ಲಾ ಊಹಾಪೋಹಾಗಳು, ಮಾತುಗಳು ಕೇಳಿ ಬರ್ತಿರೋ ಬೆನ್ನಲ್ಲೆ ರಹಸ್ಯ ಬಯಲಾಗಿದೆ. ಇದನ್ನೂ ಓದಿ: ಶೀಘ್ರವೇ ಬೆಂಗಳೂರು-ನೆಲಮಂಗಲ ಫ್ಲೈಓವರ್ ಓಪನ್..!
Advertisement
ಮನೆಯಲ್ಲಿ ಯಾರೂ ಇಲ್ಲ ಅಂತಾ ಗೊತ್ತಿದ್ರು ಸ್ಥಳೀಯರಿಗೆ ಕಳೆದ ಅಮಾವಾಸ್ಯೆ ದಿನ ರಾತ್ರಿ ಮನೆಯಲ್ಲಿ ಆಗಾಗ ಲೈಟ್ ಆನ್ ಆಗೋದು ಆಪ್ ಆಗೋದು ದೃಶ್ಯ ಕಾಣಿಸಿತ್ತು. ಇದನ್ನು ನೋಡಿದ ಸ್ಥಳೀಯರು ಮಾಲೀಕರ ಸಂಬಂಧಿಕರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ರು. ಇದೇ ವೇಳೆ ಸ್ಥಳಕ್ಕೆ ಬಂದ ಸಂಬಂಧಿಕರು ಆ ದೃಶ್ಯ ನೋಡಿ ಒಂದು ಕ್ಷಣ ಶಾಕ್ ಆದರು. ಆದರು ಕೂಡ ಧೈರ್ಯ ಮಾಡಿ ಮನೆಯೊಳಗೆ ಹೋಗುವ ತೀರ್ಮಾನ ಮಾಡಿದ್ರು. ಅದರಂತೆ ಬಾಗಿಲು ತೆಗೆದು ಭಯದಲ್ಲೇ ಒಳಗೆ ಹೋಗಿದ್ರು. ಆ ಅಮಾವಾಸ್ಯೆ ಕತ್ತಲಲ್ಲಿ ಮೆತ್ತಗೆ ಒಂದೊಂದೆ ಹೆಜ್ಜೆ ಹಾಕುತ್ತಿದ್ದಾಗಲೇ ವ್ಯಕ್ತಿಯೊಬ್ಬ ದೆವ್ವ ದೆವ್ವ ಅಂತಾ ಎದ್ನೋ ಬಿದ್ನೋ ಅಂತಾ ಹೊರಗೆ ಓಡಿದ್ದ. ಆ ಮಾತು ಕೇಳಿದ ಇತರರು ಕೂಡ ಅದೇ ವ್ಯಕ್ತಿಯ ಜೊತೆಗೆ ಹೊರಗೆ ಓಡಿದ್ರು.
ಶಾಕಿಂಗ್ ಅಂದ್ರೆ ಹಾಗೇ ಮನೆಯಿಂದ ಕೂಗಿಕೊಂಡು ಹೊರಗೆ ಬಂದ ವ್ಯಕ್ತಿ ಕಳ್ಳನಾಗಿದ್ದ. ಭರತ್ ಅನ್ನೋ ಕಳ್ಳ ಅಮಾವಾಸ್ಯೆ ದಿನ ಆ ಮನೆಗೆ ಯಾರು ಬರೋಲ್ಲ ಅಂತಾ ತಿಳಿದು ಅವತ್ತು ಕಳ್ಳತನಕ್ಕೆ ಹೋಗಿದ್ದ. ಮನೆಯೊಳಗೆ ಟಾರ್ಚ್ ಹಾಕಿಕೊಂಡು ಕಳ್ಳತನ ಮಾಡ್ತಿದ್ದಾಗಲೇ, ಜನರು ಮನೆಯ ಒಳಗೆ ಎಂಟ್ರಿಯಾಗಿದ್ರು. ಈ ವೇಳೆ ಬೆದರಿದ ಕಳ್ಳ ದೇವರ ಮನೆಗೆ ಹೋಗಿ ಸೇರಿಕೊಂಡು ಇನ್ನೇನು ಸಿಕ್ಕಿಬೀಳುವ ವೇಳೆ ದೆವ್ವ ದೆವ್ವ ಅಂತಾ ಕೂಗಿಕೊಂಡು ಹೊರಗೆ ಬಂದಿದ್ದಾನೆ. ಅಷ್ಟರಲ್ಲಿ ಹೊರಗೆ ನಿಂತಿದ್ದ ಮತ್ತಷ್ಟು ಜನ ಆತನನ್ನು ಗುರುತಿಸಿ ಹಿಗ್ಗಾಮುಗ್ಗ ಥಳಿಸಿ ಬ್ಯಾಡರಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಕಳ್ಳನನ್ನು ಬಂಧಿಸಿದ ಪೊಲೀಸರು ಜೈಲಿಗೆ ಬಿಟ್ಟು ಬಂದಿದ್ದಾರೆ. ಆದರೆ ದೆವ್ವದ ಮನೆ ಅಂತಾ ಭಾವಿಸಿ ಒಳಗೆ ಹೋದ ಜನರಿಗೆ ಕಳ್ಳನನ್ನು ನೋಡಿ ಫುಲ್ ಶಾಕ್ ಆಗಿದ್ದಾರೆ. ಇದನ್ನೂ ಓದಿ: 8 ವರ್ಷದ ಹಿಂದೆ ಪ್ರೀತಿಸಿ ಮದ್ವೆಯಾದ- ಇದೀಗ ಕಾಣೆಯಾಗಿದ್ದಾಳೆಂದು ದೂರು ಕೊಟ್ಟು ಸಿಕ್ಕಿಬಿದ್ದ!