ಮರ್ಯಾದೆ ಹೋಯ್ತು, ನಾನ್ ಮನೆಗೆ ಬರಲ್ಲ – ಹಲ್ಲೆಗೊಳಗಾಗಿದ್ದ ಸುನೀಲ್ ಫೋನ್ ಸ್ವಿಚ್ ಆಫ್

Public TV
2 Min Read
police 3

– ಸುನೀಲ್ ವಿರುದ್ಧವೇ ಟ್ರಾಫಿಕ್ ಪೊಲೀಸ್ ದೂರು

ಬೆಂಗಳೂರು: ಹಲಸೂರು ಟ್ರಾಫಿಕ್ ಪೊಲೀಸರಿಂದ ಡ್ರೈವರ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಟೆಂಪೋ ಟ್ರಾವೆಲರ್ ಸುನೀಲ್ ಪೋಷಕರು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಹಲ್ಲೆಗೊಳಗಾದ ಬೇಸರದಲ್ಲಿ ಕಳೆದ 3 ದಿನಗಳಿಂದ ಮನೆ ಹೋಗದ ಸುನೀಲ್, ತಾಯಿಗೆ ಕರೆ ಮಾಡಿ ನನ್ನ ಮರ್ಯಾದೆ ಹೋಯ್ತು. ನಾನು ಮನೆಗೆ ಬರಲ್ಲ ಎಂದು ಕಾಲ್ ಕಟ್ ಮಾಡಿದ್ದಾರೆ. ಅಲ್ಲದೆ 3 ದಿನದಿಂದ ಸುನೀಲ್ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಹೆತ್ತವರನ್ನು ಆತಂಕ್ಕೀಡು ಮಾಡಿದೆ.

police 1

ಸುನೀಲ್ ಕಳೆದ ಶುಕ್ರವಾರ ಹಲಸೂರು ಬಳಿ ಟ್ರಾಫಿಕ್ ಎಎಸ್‍ಐ ಮಹಾಸ್ವಾಮಿಯಿಂದ ಹಲ್ಲೆಗೊಳಗಾಗಿದ್ದರು. ಅದೇ ದಿನ ರಾತ್ರಿ ಜೆ.ಪಿ.ನಗರದ ಜರಗನಹಳ್ಳಿಯ ಸುನೀಲ್ ನಿವಾಸಕ್ಕೆ ಬಂದ ಏಳೆಂಟು ಜನರು ಬೆದರಿಕೆ ಹಾಕಿದ್ದಾರೆ. ಮೀಡಿಯಾ ಮುಂದೆ ಹೋದರೆ ನಿಮ್ಮನ್ನು ಸುಮ್ನೆ ಬಿಡಲ್ಲವೆಂದು ಧಮ್ಕಿ ಹಾಕಿದ್ದರು. ಒಂದು ವೇಳೆ ನನ್ನ ಮಗನಿಗೆ ಏನಾದ್ರೂ ಆದರೆ ಪೊಲೀಸರೇ ಕಾರಣ ಎಂದು ಸುನೀಲ್ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ..?
ಟೆಂಪೋ ಟ್ರಾವೆಲರ್ ಚಾಲಕನಾಗಿರುವ ಸುನೀಲ್ ಅವರು ಶುಕ್ರವಾರ ಬಿಬಿಎಂಪಿ ಕಡೆಯಿಂದ ಟೌನ್ ಹಾಲ್ ಬಳಿ ಯೂಟರ್ನ್ ತೆಗೆದುಕೊಂಡರು ಎಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರೊಬ್ಬರು ಥಳಿಸಿದ್ದರು. ಅಲ್ಲದೆ ಅವಾಚ್ಯ ಶಬ್ದಳಿಂದ ನಿಂದಿಸಿದ್ದರು.

police

ಟ್ರಾಫಿಕ್ ಪೊಲೀಸ್ ಹಲ್ಲೆ ಹಾಗೂ ನಿಂದಿಸಿರುವುದನ್ನು ಸುನೀಲ್ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೀಡಾಗಿತ್ತು. ಟ್ರಾಫಿಕ್ ಪೊಲೀಸಪ್ಪನ ದೌರ್ಜನ್ಯವನ್ನು ಕಂಡ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಯೂಟರ್ನ್ ತೆಗೆದುಕೊಂಡ ಎಂಬ ಕಾರಣಕ್ಕೆ ಟೆಂಪೋ ಏರಿ ಚಾಲಕ ಸುನೀಲ್ ಪಕ್ಕ ಕುಳೀತ ಪೇದೆ ಮೊದಲಿಗೆ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಚಾಲಕ ಇಲ್ಲಿ ವಾಹನಗಳಿವೆ ಮುಂದೆ ನಿಲ್ಲಿಸುತ್ತೇನೆ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸ್, ತಾನೇ ವಾಹನದ ಸ್ಟೇರಿಂಗ್ ವ್ಹೀಲ್ ಹಿಡಿದು ಪಕ್ಕಕ್ಕೆ ಎಳೆಯು ಪ್ರಯತ್ನ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ವೈರಲ್ ಆದ ಬೆನ್ನಲ್ಲೇ ಸುನೀಲ್ ವಿರುದ್ಧವೇ ಟ್ರಾಫಿಕ್ ಪೊಲೀಸ್ ಎಫ್‍ಐಆರ್ ದಾಖಲು ಮಾಡಿದ್ದಾರೆ.

police 2

Share This Article
Leave a Comment

Leave a Reply

Your email address will not be published. Required fields are marked *