ಬೆಂಗಳೂರು: ಸಿಲಿಕಾಕ್ ಸಿಟಿಯಲ್ಲಿರುವ ಸರ್ಕಾರಿ ಆಸ್ಪತ್ರೆಯೊಳಗೆ ಹೋಗಬೇಕಾದರೆ ಜೇಬು ತುಂಬ ಹಣವಿರಬೇಕು. ಅಷ್ಟೇ ಅಲ್ಲ ಮೆಡಿಸಿನ್ ರಾಶಿ ಬಿದ್ದಿದ್ದರೂ ಔಷಧ ಬೇಕಾದರೆ ಖಾಸಗಿ ಆಸ್ಪತ್ರೆಗೆ ನೀವು ಹೋಗಬೇಕು. ಆ ಔಷಧ ಎಲ್ಲಿ ತೆಗೆದುಕೊಳ್ಳಬೇಕು ಅನ್ನೋದನ್ನು ಕೂಡ ಲಿಸ್ಟ್ ಸಮೇತ ಹಣ ಮಾಡುವ ಈ ವೈದ್ಯರು ನಿಮ್ಮ ಮುಂದೆ ಇಡುತ್ತಾರೆ. ಬೆಂಗಳೂರಿನ ಈ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆಳೆದಿದೆ.
Advertisement
ಪ್ರ್ರಾಥಮಿಕ ಆರೋಗ್ಯ ಕೇಂದ್ರವು ಬಡವರ ಚಿಕಿತ್ಸೆಗಾಗಿಯೇ ಇರುವ ಆಸ್ಪತ್ರೆಯಾಗಿದೆ. ಆದರೆ ಇಲ್ಲಿ ಬಡವರು ಫ್ರೀ ಚಿಕಿತ್ಸೆ ಅಂತೇನಾದರೂ ಹೋದರೆ ಅಷ್ಟೇ. ಖಾಸಗಿ ಆಸ್ಪತ್ರೆ ರೀತಿಯೇ ಜೇಬು ತುಂಬ ಹಣ ಇಟ್ಟುಕೊಂಡು ಹೋಗಲೇಬೇಕು. ಯಾಕೆಂದರೆ ಈ ಬಹುತೇಕ ಬೆಂಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರೋದು ಬಡವರ ರಕ್ತಹೀರೋ ವೈದ್ಯರ ಮುಖವಾಡ ತೊಟ್ಟ ಕರುಣೆಯಿಲ್ಲದವರು. ಈ ಸರ್ಕಾರಿ ಆಸ್ಪತ್ರೆಗಳ ಹಣೆಬರಹ ಬಟಾಬಯಲು ಮಾಡಲು, ಆರೋಗ್ಯ ಸಚಿವರ ಕಣ್ತೆರೆಸಲು ಪಬ್ಲಿಕ್ ಟಿವಿ ತಂಡ ರಹಸ್ಯ ಕಾರ್ಯಾಚರಣೆಗಿಳೀದಿತ್ತು. ಈ ವೇಳೆ ಅದ್ಯಾವ ರೀತಿಯಲ್ಲಿ ಬಡರೋಗಿಗಳ ಜೀವ ತಿನ್ನುತ್ತಾರೆ ಅಂದರೆ ಊಹೆ ಮಾಡೋದಕ್ಕೂ ಸಾಧ್ಯವಿಲ್ಲದಂತಾಗಿತ್ತು.
Advertisement
Advertisement
ಚಿಕಿತ್ಸೆ ಫ್ರೀ ಆದರೂ ಇಲ್ಲಿ ಟ್ರೀಟ್ ಮೆಂಟ್‍ಗೆ ದುಡ್ಡು ಕೊಡಬೇಕು. ಈ ಮಧ್ಯೆ ಜ್ವರ, ತಲೆನೋವು, ಹೊಟ್ಟೆನೋವು ಹುಷಾರಿಲ್ಲ ಅಂತ ಏನೇ ಕಾಯಿಲೆ ಹೇಳ್ಕೊಂಡು ಈ ಆಸ್ಪತ್ರೆಗೆ ಹೋದರೆ ಸಾಕು, ಇಲ್ಲಿನ ವೈದ್ಯೆ ಮೆಲ್ಲನೆ ಮೇಜಿನಡಿಯಲ್ಲಿ ಖಾಸಗಿ ಡಯಾಗ್ನಾಸ್ಟಿಕ್ ಸೆಂಟರ್‍ನ ಲೆಟರ್ ಹೆಡ್ ತೆಗೆದು ಇಲ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳಿ ಅಂತಾರೆ.
Advertisement
ಸ್ಥಳ – ಎಂ.ಎಸ್ ಪಾಳ್ಯ
ಸರ್ಕಾರಿ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರ
ಪ್ರತಿನಿಧಿ : ಮೇಡಂ ಯಾಕೋ ಮೂರು ದಿನದಿಂದ ಹೊಟ್ಟೆ ನೋವುತ್ತಿದೆ
ಡಾಕ್ಟರ್ : ಎಲ್ಲಿ ಯಾವ ಭಾಗ
ಪ್ರತಿನಿಧಿ: ಬಲ ಭಾಗದ ಕೆಳಗಡೆ ಮೇಡಂ
ಡಾಕ್ಟರ್ : ಎಷ್ಟು ದಿನದಿಂದ ಈ ಸಮಸ್ಯೆ ಇದೆ
ಪ್ರತಿನಿಧಿ: ಮೂರು ದಿನದಿಂದ ಈ ಸಮಸ್ಯೆ ಇದೆ
ಡಾಕ್ಟರ್ : ಡ್ರೀಂಕ್ಸ್ ಮಾಡ್ತೀರಾ
ಪ್ರತಿನಿಧಿ : ಎಂಥದ್ದು ಮಾಡಲ್ಲ ಮೇಡಂ
ಡಾಕ್ಟರ್ : ಗ್ಯಾಸ್ಟಿಕ್ ಆಗಿರುತ್ತೆ
ಪ್ರತಿನಿಧಿ : ರಾತ್ರಿ ನೋವು ತುಂಬಾ ಇರುತ್ತೆ ಮೇಡಂ
ಡಾಕ್ಟರ್ : ಮಾತ್ರೆ ಬರೆದು ಕೊಡ್ತೀನಿ ತಗೋಳಿ
ಪ್ರತಿನಿಧಿ : ಹುಷಾರಾಗುತ್ತಾ
ಡಾಕ್ಟರ್ : ಈ ಮಾತ್ರೆ ನಾಳೆ ನಾಡಿದ್ದು ತಗೋಳಿ
ಪ್ರತಿನಿಧಿ : ಆಯ್ತು ಮೇಡಂ
ಡಾಕ್ಟರ್ : ಎರಡು ದಿನ ಬಿಟ್ಟು ನೋವು ಇದ್ರೆ ಸ್ಕ್ಯಾನಿಂಗ್ ಮಾಡಿಸಿ
ಪ್ರತಿನಿಧಿ : ಇದು ಅಪೆಂಡಿಕ್ಸ್ ಅಂತ
ಡಾಕ್ಟರ್ : ಅಪೆಂಡಿಕ್ಸ್ ಈಗ ವಯಸ್ಸು ಎಷ್ಟು
ಪ್ರತಿನಿಧಿ : 29 ಮೇಡಂ
ಡಾಕ್ಟರ್ : ಬರೋದಕ್ಕೆ ಸಾಧ್ಯವಿಲ್ಲ
ಪ್ರತಿನಿಧಿ : ಹುಂ ಮೇಡಂ
ಡಾಕ್ಟರ್ : ಹುಷರಾಗಲಿಲ್ಲ ಅಂದರೆ 2 ದಿನ ಬಿಟ್ಟು ಬನ್ನಿ
ಪ್ರತಿನಿಧಿ : ಆಯ್ತು ಮೇಡಂ
ಡಾಕ್ಟರ್ : ಜಂತು ಹುಳುವಿಂದು ಒಂದು ಮಾತ್ರೆ ಕೊಡ್ತೀನಿ ಅದನ್ನ ತಗೋಳಿ
ಪ್ರತಿನಿಧಿ : ಓಕೆ ಮೇಡಂ
ಡಾಕ್ಟರ್ : ಮೂರು ಗಂಟೆವರೆಗೂ ನೋಡಿ ನೋವಿದ್ರೆ ಸ್ಕ್ಯಾನಿಂಗ್ ಮಾಡಿಸಿ
ಪ್ರತಿನಿಧಿ : ಓಕೆ ಮೇಡಂ. ಚಾರ್ಜ್ ಕೊಡಬೇಕಾ ಮೇಡಂ
ಡಾಕ್ಟರ್ : ಕೊಟ್ರೆ ಓಕೆ ಕೊಡಲಿಲ್ಲ ಅಂದರೆ
ಪ್ರತಿನಿಧಿ : ತಗೋಳಿ ಮೇಡಂ
ಡಾಕ್ಟರ್ : ಚೇಂಜ್ ಇಲ್ವ
ಪ್ರತಿನಿಧಿ : ಇಲ್ಲ ಮೇಡಂ
ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳಲ್ಲಿ ಸೌಲಭ್ಯ ಇಲ್ಲ ಅಂದರೆ ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಸರ್ಕಾರಿ ಆಸ್ಪತ್ರೆಗಳಿಗೆ ರೆಫರ್ ಮಾಡಬೇಕು. ಸರ್ಕಾರಿ ಆಸ್ಪತ್ರೆ ಬಿಟ್ಟು ಖಾಸಗಿ ಆಸ್ಪತ್ರೆಗೆ ಚೀಟಿ ಬರೆದು ಕೊಟ್ಟರೆ ಅದು ದೊಡ್ಡ ಅಪರಾಧ. ಆದರೆ ಇವರು ಎಂಎಸ್ ಪಾಳ್ಯದಲ್ಲೇ ಇರುವ ಖಾಸಗಿ ಆಸ್ಪತ್ರೆಯ ಬುಕ್‍ಲೆಟ್ ಅನ್ನು ಸರ್ಕಾರಿ ಆಸ್ಪತ್ರೆಯ ಒಳಗಡೆಯೇ ಬರೆದು ಕೊಡುತ್ತಾರೆ.
ಡಾಕ್ಟರ್ : ನಿಮ್ಮದು ಯಾವ ಏರಿಯಾ
ಪ್ರತಿನಿಧಿ : ಇದೇ ಏರಿಯಾ ಮೇಡಂ
ಡಾಕ್ಟರ್ : ಹಾಗಿದ್ರೆ ಇಲ್ಲೆ ಸ್ಕ್ಯಾನಿಂಗ್ ಮಾಡಿಸಿ ಬರೆದು ಕೊಡ್ತೀನಿ
ಪ್ರತಿನಿಧಿ : ಎಲ್ಲಿ ಮೇಡಂ
ಡಾಕ್ಟರ್ : ನಿರ್ಣಯ ಡಯಾಗ್ನಾಸ್ಟಿಕ್ ಸೆಂಟರ್ ಅಂತಾ ಇದೆ
ಪ್ರತಿನಿಧಿ : ಎಷ್ಟು ಆಗುತ್ತೆ ಮೇಡಂ
ಡಾಕ್ಟರ್ : 800 ರೂಪಾಯಿ ಆಗಬಹುದು
ಪ್ರತಿನಿಧಿ : ಅಷ್ಟೋಂದ
ಡಾಕ್ಟರ್ : ಹೇಳಿ ಕಡಿಮೆಗೆ ಮಾಡಿಕೊಡ್ತಾರೆ
ಪ್ರತಿನಿಧಿ : ನಿಮಗೆ ಕಾಲ್ ಮಾಡೋದ
ಡಾಕ್ಟರ್ : ನನ್ನ ಹೆಸರು ಬರೆದಿದ್ದೀನಿ ನೋಡಿ
ಪ್ರತಿನಿಧಿ : ಓಕೆ ಮೇಡಂ
ಡಾಕ್ಟರ್ : ಕಡಿಮೆಗೆ ಮಡ್ತಾರೆ, ಒಂದು ಕಡೆ ಪ್ರಾಬ್ಲಂ ಆಗಿರೋದು ಅಂತ ಹೇಳಿ
ಪ್ರತಿನಿಧಿ : ಓಕೆ ಮೇಡಂ
ಡಾಕ್ಟರ್ : ನಾನು ನಿಮಗೆ ಚೇಂಜ್ ಕೊಟ್ನಾ
ಪ್ರತಿನಿಧಿ : ಇಲ್ಲ ಮೇಡಂ
ಡಾಕ್ಟರ್ : ತಗೋಳಿ
ಸ್ಥಳ: ಅಟ್ಟೂರು
ಸರ್ಕಾರಿ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರ
ಬೆಂಗಳೂರಿನ ಎಂಎಸ್ ಪಾಳ್ಯ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರದ ಬಳಿಕ ಬೆಂಗಳೂರಿನ ಅಟ್ಟೂರು ನಲ್ಲಿರೋ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ಕೊಟ್ಟೆವು. ಅಲ್ಲಿ ಕೂಡ ವೈದ್ಯೆ ಹೇಮಾ ಚಿಕಿತ್ಸೆ ಕೊಟ್ಟರು. ಚಿಕಿತ್ಸೆ ಕೊಟ್ಟ ಬಳಿಕ ಚಾರ್ಜ್ ಎಷ್ಟು ಅಂದರೆ 10 ರೂ. ಕೊಡಿ ಸಾಕು ಅಂತಾರೆ. 10 ರೂಪಾಯಿ ಫಿಕ್ಸ್ ಅಂತ ಕೇಳಿದರೆ ವೈದ್ಯೆ ಮಾತಾಡದೇ ತಲೆ ಬಗ್ಗಿಸ್ತಾರೆ.
ಪ್ರತಿನಿಧಿ : ಮೇಡಂಹೊಟ್ಟೆ ನೋವಿದೆ
ಡಾಕ್ಟರ್ : ಯಾವಾಗಿಂದ
ಪ್ರತಿನಿಧಿ : ಮೂರು ದಿನದಿಂದ
ಡಾಕ್ಟರ್ : ಅಲ್ಲಿ ನೋವಿದ್ರೆ ಸ್ಕ್ಯಾನಿಂಗ್ ಮಾಡಿಸಿ
ಪ್ರತಿನಿಧಿ : ಎಲ್ಲಿ ಮಾಡಿಸಬೇಕು ಮೇಡಂ
ಡಾಕ್ಟರ್ : ಕೆಸಿ ಜನರಲ್ ಅಥವಾ ಯಲಹಂಕ ಮಾಡಿಸಿ
ಪ್ರತಿನಿಧಿ : ಅಲ್ಲಿ ಇದೆಯಾ
ಡಾಕ್ಟರ್ : ಅಲ್ಲಿ ಇದೆ ಮಾಡಿಸಿ. ಈ ಮಾತ್ರೆ ತಗೋಳಿ
ಪ್ರತಿನಿಧಿ : ಓಕೆ ಮೇಡಂ ತಗೋಳ್ತಿನಿ
ಡಾಕ್ಟರ್ : ಸ್ಕ್ಯಾನಿಂಗ್ ಮಾಡಿಸಿ ಚೆಕ್ ಮಾಡಿಸಿ
ಪ್ರತಿನಿಧಿ : ಓಕೆ ಮೇಡಂ ಅಮೌಂಟ್ ಎಷ್ಟು ಕೊಡಬೇಕು ಮೇಡಂ
ಡಾಕ್ಟರ್ : ಹತ್ತು ರೂಪಾಯಿ ಕೊಡಿ ಸಾಕು
ಪ್ರತಿನಿಧಿ : ಹತ್ತು ರೂಪಾಯಿ ಅಷ್ಟೇನಾ ಮೇಡಂ
ಡಾಕ್ಟರ್ : ಹು ಅಷ್ಟೇ
ಪ್ರತಿನಿಧಿ : ಫಿಕ್ಸಾ ಮೇಡಂ ಹತ್ತು ರೂಪಾಯಿ
ಒಟ್ಟಿನಲ್ಲಿ ಅನಾರೋಗ್ಯದಿಂದ ಬಳಲ್ತಾ ಇರುವ, ಹಣದ ಹಿಂದೆ ಬಿದ್ದಿರುವ ಕೆಲ ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಅರ್ಜರಿ ಮಾಡಬೇಕಾದ ಅನಿವಾರ್ಯತೆ ಇದೆ.