– ಕುಲಕರ್ಣಿ ಆಪ್ತ ಐಶ್ವರ್ಯ ಕಾರು ಚಾಲಕ
– 2 ಬೆನ್ಜ್ ಕಾರುಗಳ ಬಗ್ಗೆ ಇನ್ನೂ ಮಾಹಿತಿ ನೀಡದ ಐಶ್ವರ್ಯ
ಬೆಂಗಳೂರು: ಚಂದ್ರಾಲೇಔಟ್ ಠಾಣೆಯಲ್ಲಿ ದಾಖಲಾಗಿರುವ ಐಶ್ವರ್ಯ ಗೌಡ (Aishwarya Gowda) ದಂಪತಿ ವಿರುದ್ಧದ ವಂಚನೆ ಪ್ರಕರಣ ಈಗ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿನಯ್ ಕುಲಕರ್ಣಿ (Vinay Kulkarni) ಬುಡಕ್ಕೆ ಬಂದಿದೆ.
Advertisement
ಹೌದು. ಐಶ್ವರ್ಯ ಗೌಡ ಅವರ ಪತಿ ಹರೀಶ್ (Harish) ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಐಷಾರಾಮಿ ಬೆನ್ಜ್ ಕಾರನ್ನು (Benz Car) ಮಾಜಿ ಸಚಿವ ವಿನಯ್ ಕುಲಕರ್ಣಿ ಬಳಕೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ವಿನಯ್ ಕುಲಕರ್ಣಿ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
Advertisement
Advertisement
ಬೆನ್ಜ್ ಕಾರುಗಳು ಎಲ್ಲಿ?
ಈಗಾಗಲೇ ಒಂದು ಬಿಎಂಡಬ್ಲ್ಯೂ , ಆಡಿ ಹಾಗೂ ಫಾರ್ಚೂನರ್ ಕಾರನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಐಶ್ವರ್ಯ ಬಳಿ ಇನ್ನೂ ಎರಡು ಬೆನ್ಜ್ ಕಾರುಗಳು ಇದ್ದವು. ಈ ಎರಡು ಬೆನ್ಜ್ ಕಾರುಗಳ ಬಗ್ಗೆ ಐಶ್ವರ್ಯ ಇನ್ನೂ ಬಾಯಿಬಿಟ್ಟಿಲ್ಲ. ಇದನ್ನೂ ಓದಿ: “ಕಷ್ಟದಲ್ಲಿದ್ರೂ ತಂದೆ, ತಾಯಿ ಮಾತನಾಡ್ತಿಲ್ಲ, ಕಾಲ್ ಮಾಡಿದ್ರೂ ಕಟ್ ಮಾಡ್ತಿದ್ರು” – ಟೆಕ್ಕಿ ಅನೂಪ್ ಡೆತ್‌ನೋಟ್‌ನಲ್ಲಿ ಏನಿದೆ?
Advertisement
ವಿಚಾರಣೆಯಲ್ಲಿ ನನಗೆ ಗೊತ್ತಿಲ್ಲ ಎಂದು ಐಶ್ವರ್ಯ ಹೇಳಿದ್ದಾಳೆ ಎನ್ನಲಾಗುತ್ತಿದೆ. ಹೀಗಾಗಿಯೇ ಆ ಎರಡು ಬೆನ್ಜ್ ಕಾರುಗಳ ಮೂಲದ ಬಗ್ಗೆ ಪೊಲೀಸರು ಬೆನ್ನುಹತ್ತಿದ್ದಾರೆ. ಈ ಎರಡು ಕಾರುಗಳ ಪೈಕಿ ಒಂದು ಬೆನ್ಜ್ ಕಾರನ್ನು ವಿನಯ್ ಕುಲಕರ್ಣಿ ಬಳಸುತ್ತಿದ್ದರು ಎನ್ನಲಾಗುತ್ತಿದೆ.
ಕೊಲೆ ಆರೋಪಿ ಕಾರು ಚಾಲಕ:
ಅಶ್ವಥ್ ಗೌಡ ಐಶ್ವರ್ಯ ಗೌಡ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ಅಶ್ವಥ್ ಗೌಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿಯಾಗಿದ್ದಾನೆ. ವಿನಯ್ ಕುಲಕರ್ಣಿಯ ಆಪ್ತನಾಗಿದ್ದ ಅಶ್ವಥ್ ಗೌಡ ಐಶ್ವರ್ಯಗೆ ಚಾಲಕನಾಗಿದ್ದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆ. ಇದನ್ನೂ ಓದಿ: ವೈದ್ಯೆಯಿಂದ 2.52 ಕೋಟಿ ರೂ., 2.350 ಕೆಜಿ ಚಿನ್ನ ಪಡೆದು ವಂಚನೆ – ಐಶ್ವರ್ಯಗೌಡ ಮೇಲೆ ಮತ್ತೊಂದು ಎಫ್‌ಐಆರ್
ಈ ಕಾರಣಕ್ಕಾಗಿ ಐಶ್ವರ್ಯ ಗೌಡ ದಂಪತಿಯೊಂದಿಗೆ ಸಂಬಂಧ, ವ್ಯವಹಾರ ಕುರಿತು ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇಬ್ಬರಿಗೂ ಪರಿಚಯ ಇತ್ತು:
ವಂಚನೆ ಪ್ರಕರಣದ ಆರೋಪಿಗಳಾಗಿರುವ ಐಶ್ವರ್ಯ ಗೌಡ ದಂಪತಿ ಹಾಗೂ ದೂರುದಾರೆ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿ ಮಾಲಕಿ ವನಿತಾ ಐತಾಳ್‌ಗೆ ವಿನಯ್ ಕುಲಕರ್ಣಿ ಚಿರಪರಿತರಾಗಿದ್ದಾರೆ. ವಂಚನೆ ಪ್ರಕರಣ ದಾಖಲಾಗುವ ಮುನ್ನ ಐಶ್ವರ್ಯ ಗೌಡ ಮತ್ತು ದೂರುದಾರೆ ವನಿತಾ ಐತಾಳ್ ಅವರನ್ನು ವಿನಯ್ ಕುಲಕರ್ಣಿ ಯಶವಂತಪುರದಲ್ಲಿರುವ ಖಾಸಗಿ ಹೋಟೆಲಿನಲ್ಲಿ ಭೇಟಿ ಮಾಡಿ ಸಂಧಾನ ನಡೆಸಲು ಯತ್ನಿಸಿದ್ದರು.
ಐಶ್ವರ್ಯ ಗೌಡ ಮತ್ತು ವನಿತಾ ಐತಾಳ್ ಸಹ ಮಾಧ್ಯಮಗಳ ಜೊತೆ ಮಾತನಾಡುವಾಗ ವಿನಯ್ ಕುಲಕರ್ಣಿ ನಮಗೆ ಪರಿಚಯ ಇರುವುದಾಗಿ ಹೇಳಿಕೊಂಡಿದ್ದರು. ಯಶವಂತಪುರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಇಬ್ಬರನ್ನೂ ಕೂರಿಸಿ ಬುದ್ದಿವಾದ ಹೇಳಿದ್ದಾಗಿಯೂ ಐಶ್ವರ್ಯ ಗೌಡ ಹಾಗೂ ವನಿತಾ ಐತಾಳ್ ತಿಳಿಸಿದ್ದರು.