– ಡೆಂಟಲ್ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿದ ದಂತವೈದ್ಯೆ
ಬೆಂಗಳೂರು: ಕೊರೊನಾ ಲಾಕ್‍ಡೌನ್ ವೇಳೆ ಏಳು ಕಿ.ಮೀ ನಡೆದುಕೊಂಡು ಬಂದು ಕೊನೆಗೆ ಎಲ್ಲೂ ಆಸ್ಪತ್ರೆ ಸಿಗದೆ ಡೆಂಟಲ್ ಆಸ್ಪತ್ರೆಯಲ್ಲೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಂಗಳೂರಿನ ದೊಡ್ಡ ಬೊಮ್ಮಸಂದ್ರದಲ್ಲಿ ನಡೆದಿದೆ.
ಕೊರೊನಾ ಲಾಕ್‍ಡೌನ್‍ನಿಂದ ದೇಶವೇ ಸ್ತಬ್ಧವಾಗಿದೆ. ಈ ವೇಳೆ ಲೊಟ್ಟೆಗೊಲ್ಲಹಳ್ಳಿಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಆಕೆ ಆಸ್ಪತ್ರೆ ಸಿಗುತ್ತದೆ ಎಂಬ ನಂಬಿಕೆ ಮೇಲೆ ಲೊಟ್ಟೆಗೊಲ್ಲಹಳ್ಳಿಯಿಂದ ದೊಡ್ಡ ಬೊಮ್ಮಸಂದ್ರದವರೆಗೂ ಸುಮಾರು ಏಳು ಕಿ.ಲೋ ಮೀಟರ್ ಹೆರಿಗೆ ನೋವಿನ ನಡುವೆಯೂ ನಡೆದುಕೊಂಡು ಬಂದಿದ್ದಾರೆ.
Advertisement
Karnataka: A pregnant woman delivered a baby at a dentist's clinic in Bengaluru where she had reached, along with her husband, after walking for around 7 km in hopes of reaching a hospital. The mother & baby (in pic with the dentist) were later sent to hospital after the delivery pic.twitter.com/dO9edQ9EsU
— ANI (@ANI) April 19, 2020
Advertisement
ಹೀಗೆ ತನ್ನ ಗಂಡನ ಜೊತೆ ನಡೆದುಕೊಂಡು ಬಂದ ಮಹಿಳೆಗೆ ಲಾಕ್‍ಡೌನ್ ಇರುವುದರಿಂದ ಯಾವುದೇ ಆಸ್ಪತ್ರೆ ಸಿಕ್ಕಿಲ್ಲ. ಜೊತೆಗೆ ಮುಂದೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಈ ನಡುವೆ ಆಕೆಗೆ ಹೆರಿಗೆ ನೋವು ಜಾಸ್ತಿಯಾಗಿದೆ. ಹೀಗಾಗಿ ಆಕೆಯ ಗಂಡ ಅಲ್ಲಿಯೇ ಇದ್ದ ದೊಡ್ಡ ಬೊಮ್ಮಸಂದ್ರದ ಡೆಂಟಲ್ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ದಂತವೈದ್ಯರು ಡೆಂಟಲ್ ಆಸ್ಪತ್ರೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ಹೆರಿಗೆ ಮಾಡಿಸಿದ್ದಾರೆ.
Advertisement
She had walked for 5-7 km expecting some clinic/hospital to be open. She came across this clinic & delivered the baby. The baby wasn't responding initially, so we thought it's dead but we were able to resuscitate it. We sent them to hospital after the delivery: Dr Ramya, dentist pic.twitter.com/b9kluJgaKr
— ANI (@ANI) April 19, 2020
Advertisement
ಈ ವಿಚಾರವಾಗಿ ಮಾತನಾಡಿರುವ ಹೆರಿಗೆ ಮಾಡಿಸಿದ ದಂತವೈದ್ಯೆ ಡಾ. ರಮ್ಯಾ, ಆಕೆ ಹೆರಿಗೆ ನೋವಿನ ನಡುವೆಯೂ ಆಸ್ಪತ್ರೆ ಸಿಗುತ್ತೆ ಎಂಬ ನಂಬಿಕೆ ಮೇಲೆ ಸುಮಾರು 7 ಕಿ.ಮೀ ನಡೆದುಕೊಂಡು ಬಂದಿದ್ದಾರೆ. ಆದರೆ ಅವರಿಗೆ ಯಾವುದೇ ಆಸ್ಪತ್ರೆ ಸಿಕ್ಕಿರಲಿಲ್ಲ. ನಂತರ ನಮ್ಮ ಆಸ್ಪತ್ರೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೆರಿಗೆಯ ನಂತರ ಬ್ಲೀಡಿಂಗ್ ಜಾಸ್ತಿ ಇತ್ತು ಜೊತೆಗೆ ಮಗು ಯಾವುದೇ ಪ್ರತಿಕ್ರಿಯೆ ನೀಡಿಲಿಲ್ಲ. ಆದರೆ ನಂತರ ಮಗು ಪ್ರತಿಕ್ರಿಯೆ ನೀಡಿತು. ಬಳಿಕ ಅವರನ್ನು ಅಂಬುಲೆನ್ಸ್ ನಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು ಎಂದು ಹೇಳಿದ್ದಾರೆ.
ಲಾಕ್‍ಡೌನ್ ರೀತಿಯ ತುರ್ತುಪರಿಸ್ಥಿತಿಯ ಸಮಯದಲ್ಲಿ ದಂತವೈದ್ಯೆ ಯಾದರೂ ಹೆರಿಗೆ ಮಾಡಿಸಿದ ವೈದ್ಯೆ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಮಗು ಮತ್ತು ವೈದ್ಯೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ತುಂಬ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮಗೆ ಧನ್ಯವಾದ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.