ಬೆಂಗಳೂರು: ಹಬ್ಬ ಹರಿದಿನಗಳು ಬಂದರೆ ಪ್ರೈವೇಟ್ ಬಸ್‍ಗಳು ಲೂಟಿ ಮಾಡೋದು ಸಾಮಾನ್ಯವಾಗಿತ್ತು. ಈಗ ಈ ಸಾಲಿಗೆ ಸರ್ಕಾರಿ ಸಾರಿಗೆ ಸಂಸ್ಥೆಯೂ ಸೇರಿಕೊಂಡಿದೆ. ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್ ದರ ದುಪ್ಪಟ್ಟು ಮಾಡಿದರೆ, ಇತ್ತ ಕೆಎಸ್ ಆರ್ ಟಿಸಿ ಅವರು ನಾವೇನ್ ಕಡಿಮೆ ನಾವೂ ಸಹ ಜಾಸ್ತಿ ಮಾಡುತ್ತೇವೆ ಎಂದು ಪ್ರಯಾಣಿಕರ ಮೇಲೆ ಹೊರೆ ಹಾಕಲು ಮುಂದಾಗಿದ್ದಾರೆ. ಈ ವಿಚಾರ ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯ ವೇಳೆ ಬಯಲಾಗಿದೆ.
ಇದೇ ಸೋಮವಾರ ಗಣೇಶನ ಚತುರ್ಥಿ ಹಬ್ಬವಿದೆ. ಹೀಗಾಗಿ ಶುಕ್ರವಾರ, ಶನಿವಾರದಿಂದ ಊರಿಗೆ ಹೋಗುವವರ ಪ್ಲಾನ್ ಶುರುವಾಗುತ್ತದೆ. ಸೋಮವಾರದವರೆಗೆ ಸಾಲು ಸಾಲು ರಜೆ ಇರುವುದರಿಂದ ಊರುಗಳಿಗೆ ಹೋಗಿ ಮನೆಮಂದಿ, ನೆಂಟರೊಂದಿಗೆ ಹಬ್ಬವನ್ನ ಆಚರಿಸುವ ಬಯಕೆ ಎಲ್ಲರಿಗೂ ಇರುತ್ತದೆ. ಆದರೆ ಊರಿಗೆ ಹೋಗುವ ಮೊದಲೇ ಎಲ್ಲ ಆಸೆಗಳಿಗೆ ಬಸ್ ಗಳು ಕೊಳ್ಳಿ ಇಡಲು ಮುಂದಾಗಿವೆ.
Advertisement
ಕೆಎಸ್ಆರ್‌ಟಿಸಿಯಿಂದಲೂ ಹಗಲುದರೋಡೆ:
ಪ್ರತಿನಿಧಿ: ಮೇಡಂ, ಮಂಗಳೂರಿಗೆ.. ದಿನಾಂಕ 30 ನೈಟ್..
ಕೆಎಸ್ಆರ್‌ಟಿಸಿ ಸಿಬ್ಬಂದಿ: ಫಿಲ್ ಮಾಡಿ..
ಪ್ರತಿನಿಧಿ: ಮೇಡಂ ಐರಾವತ..
ಕೆಎಸ್ಆರ್‌ಟಿಸಿ ಸಿಬ್ಬಂದಿ: ಮಾರ್ನಿಂಗಾ..? ನೈಟಾ..?
ಪ್ರತಿನಿಧಿ: ನೈಟ್
ಕೆಎಸ್ಆರ್‌ಟಿಸಿ ಸಿಬ್ಬಂದಿ: ಯಶವಂತಪುರಕ್ಕೆ 10:55ಕ್ಕೆ ಬರುತ್ತೆ ಕೊಡ್ಲಾ..?
ಪ್ರತಿನಿಧಿ: ಮೆಜೆಸ್ಟಿಕ್‍ನಿಂದ ಇಲ್ವಾ..?
ಕೆಎಸ್ಆರ್‌ಟಿಸಿ ಸಿಬ್ಬಂದಿ: ಇಲ್ಲ.. ಎಲ್ಲಾ ಎಕ್ಸ್ಟ್ರಾ ಬಸ್
ಪ್ರತಿನಿಧಿ: ಎಷ್ಟು ಮೇಡಂ ರೇಟ್ ಅದು…?
ಕೆಎಸ್ಆರ್‌ಟಿಸಿ ಸಿಬ್ಬಂದಿ: ಟೋಟಲ್ ನಾಲ್ಕು ಜನಕ್ಕೆ 4,400 ರೂ.
ಪ್ರತಿನಿಧಿ: ಒಬ್ಬೊಬ್ಬರಿಗೆ ಎಷ್ಟಾಗುತ್ತೆ..?
ಕೆಎಸ್ಆರ್‌ಟಿಸಿ ಸಿಬ್ಬಂದಿ: 1,110 ರೂ.
Advertisement
Advertisement
ಪ್ರತಿನಿಧಿ: ನಾರ್ಮಲ್ ಪ್ರೈಸ್ ಜಾಸ್ತಿ ಆಗಿದ್ದೀಯಾ ಮೇಡಂ..?
ಕೆಎಸ್ಆರ್‌ಟಿಸಿ ಸಿಬ್ಬಂದಿ: ಹಾ…. 600 ರೂಪಾಯಿ ಜಾಸ್ತಿ ಆಗಿದೆ
ಪ್ರತಿನಿಧಿ: ಪರ್‍ಹೆಡ್‍ಗೆ 600 ರೂಪಾಯಿ ಜಾಸ್ತಿ ಆಗಿದ್ದೀಯಾ..?
ಕೆಎಸ್ಆರ್‌ಟಿಸಿ ಸಿಬ್ಬಂದಿ: ಇಲ್ಲ ನಾಲ್ಕು ಜನಕ್ಕೆ..
ಪ್ರತಿನಿಧಿ: ಅಂದ್ರೆ 200 ರೂಪಾಯಿ ಜಾಸ್ತಿ ಮಾಡಿದ್ದೀರಾ..?
ಕೆಎಸ್ಆರ್‌ಟಿಸಿ ಸಿಬ್ಬಂದಿ: ಹೂ.. 150 ಜಾಸ್ತಿ ಆಗಿದೆ..
ಪ್ರತಿನಿಧಿ: ಹಬ್ಬಕ್ಕೋಸ್ಕರನಾ..?
ಕೆಎಸ್ಆರ್‌ಟಿಸಿ ಸಿಬ್ಬಂದಿ: ಹೂ..
ಪ್ರತಿನಿಧಿ: ಈಗ ನಾರ್ಮಲ್ ಪ್ರೈಸ್ ಎಷ್ಟು..?
Advertisement
ಕೆಎಸ್ಆರ್‌ಟಿಸಿ ಸಿಬ್ಬಂದಿ: ನಾರ್ಮಲ್ ಡೇಸ್‍ನಲ್ಲಿ 3,800 ಆಗುತ್ತೆ.. ಈಗ 4,440 ಆಗಿದೆ. ಡಿಸ್ಕೌಂಟ್ 4,200 ಆಗಬಹುದು.. 400 ರೂಪಾಯಿ ಜಾಸ್ತಿಯಾಗಿದೆ.. ನೂರು, ನೂರೈವತ್ತು ರೂಪಾಯಿ ಜಾಸ್ತಿ ಆಗುತ್ತೆ..
ಪ್ರತಿನಿಧಿ: ರಿಟರ್ನ್ ರೇಟು ಸೋಮವಾರಕ್ಕೂ ಜಾಸ್ತಿ ಆಗಿದೆಯಾ..?
ಕೆಎಸ್ಆರ್‌ಟಿಸಿ ಸಿಬ್ಬಂದಿ: ಹೂ… ಸೇಮ್ ರೇಟ್..
ಪ್ರತಿನಿಧಿ: ಆರ್ಡಿನರಿ ಬಸ್ ಅಷ್ಟೇ ಇದ್ದೀಯಾ ಮೇಡಂ…? ಆರ್ಡಿನರಿ ಬಸ್‍ನಲ್ಲೂ ಪರ್ಸೆಂಟೇಜ್ ಜಾಸ್ತಿ ಮಾಡಿದ್ದೀರಾ..?
ಕೆಎಸ್ಆರ್‌ಟಿಸಿ ಸಿಬ್ಬಂದಿ: ಹೂ..
ಪ್ರತಿನಿಧಿ: ಯಾವತ್ತು?
ಕೆಎಸ್ಆರ್‌ಟಿಸಿ ಸಿಬ್ಬಂದಿ: ಶುಕ್ರವಾರ, ಸೋಮವಾರ
ಕೆಎಸ್ಆರ್‌ಟಿಸಿ ಸಿಬ್ಬಂದಿ: ಆರ್ಡಿನರಿ ಕೂಡ ಜಾಸ್ತಿ ಮಾಡಿದ್ದಾರೆ. 60, 70 ರೂಪಾಯಿ ಹೆಚ್ಚು ಮಾಡಿದ್ದಾರೆ…
ಸಾಮಾನ್ಯ ದಿನಗಳಲ್ಲಿ 400 ರಿಂದ 1000 ಇದ್ದ ದರಗಳು ಹಬ್ಬದ ಪ್ರಯುಕ್ತ ದುಪ್ಪಟ್ಟು ಮಾಡಿದ್ದಾರೆ. ಸಾರಿಗೆ ಬಸ್‍ಗೆ ನಾರ್ಮಲ್ ಆಗಿ 300 ರೂಪಾಯಿ ಇದೆ. ಆದರೆ ಈಗ ಪ್ರೈವೆಟ್‍ಗಳಂತೆ 100 ರೂಪಾಯಿಗಿಂತ ಹೆಚ್ಚಾಗಿದೆ. ಇದು ಹಬ್ಬದ ಜೊತೆ ಬರೆ ಎಳೆದಂತಾಗಿದೆ.
ಇನ್ನು ಕೆಎಸ್‍ಆರ್‍ಟಿಸಿಯ ದರೋಡೆಯನ್ನು ಬಂಡವಾಳ ಮಾಡಿಕೊಂಡಿರೋ ಪ್ರೈವೇಟ್ ಟ್ರಾನ್ಸ್ ಪೋರ್ಟ್‍ಗಳು ಸುಮ್ನಿರುತ್ತಾ ಹೇಳಿ..? ಸಿಕ್ಕಿದ್ದೇ ಚಾನ್ಸ್ ಎಂದು ಪ್ರಯಾಣಿಕರ ಬಳಿ ಟಿಕೆಟ್ ರೇಟನ್ನ ಓನ್‍ಟು ಡಬ್ಬಲ್ ಪಡೆಯುತ್ತಿದ್ದಾರೆ.
ಪ್ರತಿನಿಧಿ: ಸರ್.. ಧರ್ಮಸ್ಥಳ. ಶುಕ್ರವಾರಕ್ಕೆ 10 ಗಂಟೆ ನಂತ್ರ
ಖಾಸಗಿ ಬಸ್ ಸಿಬ್ಬಂದಿ: 1,400 ಆಗುತ್ತೆ..
ಪ್ರತಿನಿಧಿ: ಸರ್ ಒಂದು ಸೀಟ್‍ಗೆ 1400 ರೂಪಾಯಿನಾ? ಒಂದು ಸೀಟ್‍ಗೆ..?
ಖಾಸಗಿ ಬಸ್ ಸಿಬ್ಬಂದಿ: ಹೂ…
ಪ್ರತಿನಿಧಿ: ಶನಿವಾರ ಸರ್..?
ಖಾಸಗಿ ಬಸ್ ಸಿಬ್ಬಂದಿ: ಸೇಮ್ ರೇಟ್
ಪ್ರತಿನಿಧಿ: ಅಷ್ಟೊಂದ್ ರೇಟ್ ಯಾಕೆ…?
ಖಾಸಗಿ ಬಸ್ ಸಿಬ್ಬಂದಿ: ರಜೆ ಇದೆ. ಅದಕ್ಕೆ
ಪ್ರತಿನಿಧಿ: ಸರ್ 6ನೇ ತಾರೀಕಿಗೆ ಎಷ್ಟ್ ರೂಪಾಯಿ ಇದೆ..?
ಖಾಸಗಿ ಬಸ್ ಸಿಬ್ಬಂದಿ: 800
ಪ್ರತಿನಿಧಿ: ರೆಗ್ಯೂಲರ್ 800 ರೂಪಾಯಿನ ಸರ್…?
ಖಾಸಗಿ ಬಸ್ ಸಿಬ್ಬಂದಿ: ರೆಗ್ಯೂಲರ್ ಅಂತಾ ಅಲ್ಲ ಸರ್… ದಿನಕ್ಕೆ ಒಂದು ರೇಟ್ ಇರುತ್ತೆ..
ಪ್ರತಿನಿಧಿ: ಸರ್ ಹುಬ್ಬಳ್ಳಿಗೆ ಟಿಕೆಟ್ ಎಷ್ಟಣ್ಣಾ..?
ಖಾಸಗಿ ಬಸ್ ಸಿಬ್ಬಂದಿ: ಯಾವತ್ತು…?
ಪ್ರತಿನಿಧಿ: ಶುಕ್ರವಾರ
ಖಾಸಗಿ ಬಸ್ ಸಿಬ್ಬಂದಿ: ರಾತ್ರಿಗಾ…?
ಪ್ರತಿನಿಧಿ: ಹೂ.. ನೈಟ್‍ಗೆ
ಖಾಸಗಿ ಬಸ್ ಸಿಬ್ಬಂದಿ: ಸ್ಲೀಪರ್ 1,600..
ಪ್ರತಿನಿಧಿ: ಇವತ್ತಿಗೆ ಎಷ್ಟು ಅಣ್ಣ..?
ಖಾಸಗಿ ಬಸ್ ಸಿಬ್ಬಂದಿ: 650 ರೂಪಾಯಿ
ಪ್ರತಿನಿಧಿ: ಅವತ್ತಿಗೂ ಇವತ್ತಿಗೂ ಏನ್ ಚೇಂಜ್ ಅಣ್ಣಾ..?
ಖಾಸಗಿ ಬಸ್ ಸಿಬ್ಬಂದಿ: ಗಣೇಶ ಹಬ್ಬ ಇರೋದಕ್ಕೆ ಜಾಸ್ತಿ ಮಾಡಿರೋದು..
ಒಟ್ಟಿನಲ್ಲಿ ದುಪ್ಪಟ್ಟು ಹಣ ಕೊಟ್ಟು ಊರಿಗೆ ಹೋಗಿ ಹಬ್ಬ ಮಾಡಬೇಕಾದ ಸ್ಥಿತಿ ನಮ್ಮ ನಾಡಿನ ಜನತೆಯದ್ದಾಗಿದೆ.