ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿ (Mahalakshmi) ಭೀಕರ ಹತ್ಯೆ ಪ್ರಕರಣದ ತನಿಖೆಯನ್ನ ಪೊಲೀಸರು ತೀವ್ರಗೊಳಿಸಿದ್ದಾರೆ. ಸೆಪ್ಟೆಂಬರ್ ಮೂರು ಅಥವಾ ನಾಲ್ಕರಂದು ಮಹಾಲಕ್ಷ್ಮಿಯನ್ನ ಹಂತಕ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಸೆಪ್ಟೆಂಬರ್ ಮೂರು ಅಥವಾ ನಾಲ್ಕುರಂದು ಹತ್ಯೆ ಮಾಡಿರುವ ಬಗ್ಗೆ ಪೊಲೀಸರು ತೀರ್ಮಾನಕ್ಕೆ ಬರಲು ಕೆಲವೊಂದು ಸಾಕ್ಷ್ಯಗಳು ಕಾರಣವಾಗಿದೆ. ಸೆ.1ರ ಭಾನುವಾರ ಹಂತಕನ ಕೃತ್ಯಕ್ಕೆ ಬಲಿಯಾಗಿರುವ ಮಹಾಲಕ್ಷ್ಮಿ ಮಲ್ಲೇಶ್ವರನಲ್ಲಿರುವ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗಿರುತ್ತಾರೆ. ಬಟ್ಟೆ ಅಂಗಡಿಯ ಹಾಜರಾತಿಯಲ್ಲಿ ದಾಖಲೆ ಇದೆ. ಸೆ.2 ಅಂದರೆ ಸೋಮವಾರ ವಾರದ ರಜೆ ಪಡೆದುಕೊಂಡಿದ್ದಾರೆ. ಇದು ಮಲ್ಲೇಶ್ವರಂನಲ್ಲಿರುವ ಫ್ಯಾಷನ್ ಪ್ಯಾಕ್ಟ್ರಿಯ ಹಾಜರಾತಿಯಲ್ಲಿದೆ. ಇದನ್ನೂ ಓದಿ: ಮಹಾಲಕ್ಷ್ಮಿ ಮರ್ಡರ್ ಕೇಸ್‌ಗೆ ಟ್ವಿಸ್ಟ್ – ಫ್ರಿಡ್ಜ್ ಮೇಲೆ ಹಲವು ಕಡೆ ಹಲವು ಬೆರಳಚ್ಚು ಗುರುತು ಪತ್ತೆ!
Advertisement
Advertisement
ಅದೇ ಶಾಪ್‌ನಲ್ಲಿ ಹಂತಕ ಮುಕ್ತಿ ರಂಜನ್ ರಾಯ್ ಕೂಡ ಟೀಂ ಲೀಡರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಕಳೆದ ಎರಡು ವರ್ಷದಿಂದ ಆದೇ ಶಾಪ್‌ನಲ್ಲಿ ಹಂತಕ ಕೆಲಸ ಮಾಡಿಕೊಂಡಿದ್ದ. ಕಳೆದ 9 ತಿಂಗಳಿಂದ ಕೊಲೆಯಾಗಿರುವ ಮಹಾಲಕ್ಷ್ಮಿ ಕೆಲಸ ಮಾಡಿಕೊಂಡಿದ್ದರು.
Advertisement
Advertisement
ಸೆಪ್ಟೆಂಬರ್ ಮೂರರಿಂದ ಇಬ್ಬರು ಕೂಡ ಕೆಲಸಕ್ಕೆ ಬಂದಿಲ್ಲ. ಹಾಗಾಗಿ ಸೆಪ್ಟೆಂಬರ್ ಮೂರು ಅಥವಾ ನಾಲ್ಕರಂದು ಹತ್ಯೆ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಿದೆ ಪೊಲೀಸ್ ಮೂಲಗಳು. ಇದನ್ನೂ ಓದಿ: ಮಹಾಲಕ್ಷ್ಮಿ ಕೊಲೆ ಪ್ರಕರಣ – ವೈದ್ಯರಿಂದ ಇಂದು ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆ