– ಕೊಲೆ ಮಾಡಿದ್ದು ಒಂದು ದಿನ, ದೇಹ ಪೀಸ್ ಮಾಡಿದ್ದು ಇನ್ನೊಂದು ದಿನ
ಬೆಂಗಳೂರು: ಮಹಾಲಕ್ಷ್ಮಿ ಕೊಲೆ ಮಾಡಿದ ಹಂತಕ ಆತ್ಮಹತ್ಯೆಯ ಬಳಿಕ ಒಂದೊಂದೇ ವಿಚಾರಗಳು ರಿವೀಲ್ ಆಗುತ್ತಿವೆ. ಕೊಲೆ ಬಳಿಕ ತನ್ನ ಬೈಕ್‌ನಲ್ಲೇ ಮೂರು ರಾಜ್ಯಗಳನ್ನ ಮೂರು ದಿನಗಳ ಕಾಲ ಕ್ರಾಸ್ ಮಾಡಿ ಹುಟ್ಟೂರು ಸೇರಿಕೊಂಡಿದ್ದ.
Advertisement
ವೈಯಾಲಿಕಾವಲ್‌ನ ಮಹಾಲಕ್ಷ್ಮಿ ಹಂತಕ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅರೆಸ್ಟ್ ಮಾಡುವ ಹುಮ್ಮಸ್ಸಿನಲ್ಲಿ ಪೊಲೀಸರು ಹಂತಕ ಮುಕ್ತಿ ರಾಜನ್ ರಾಯ್ ಹುಟ್ಟೂರಾದ ಒಡಿಶಾದ ಭದ್ರಕ್ ಬಳಿಯ ಬೋನಿಪುರ ಗ್ರಾಮ ತಲುಪಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಸಾಯುವ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದ ಹಂತಕ ಮಹಾಲಕ್ಷ್ಮಿ ಕೆಲಸ ಮಾಡುವ ಸ್ಥಳದಲ್ಲಿ ನಾನು ಸ್ಟೋರ್ ಮ್ಯಾನೇಜರ್ ಆಗಿದ್ದೆ. ಇಬ್ಬರೂ ಸ್ನೇಹಿತರಾಗಿದ್ದೆವು. ಬಳಿಕ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದೆವು ಎಂದು ಬರೆದುಕೊಂಡಿದ್ದಾನೆ. ಇದನ್ನೂ ಓದಿ: ಮಹಾಲಕ್ಷ್ಮಿ ಭೀಕರ ಕೊಲೆ ಮಾಡಲು ಹಂತಕನಿಗೆ ಯಾರಾದ್ರು ಸಹಾಯ ಮಾಡಿದ್ರಾ? – ತನಿಖೆಗೆ ಮುಂದಾದ ಪೊಲೀಸರು
Advertisement
Advertisement
ಘಟನೆ ಏನಾಯ್ತು?
ಸೆ.2 ರಂದು ಮಹಾಲಕ್ಷ್ಮಿಯ ಮನೆಗೆ ತೆರಳಿದ್ದ ಹಂತಕ ಹಾಗೂ ಮಹಾಲಕ್ಷ್ಮಿಯ ನಡುವೆ ಜಗಳವಾಗಿದೆ. ಮದುವೆ ಆಗು ಅಂತಾ ಮಹಾಲಕ್ಷ್ಮಿ ಒತ್ತಾಯಿಸಿದ್ದಕ್ಕೆ ನಿನಗೆ ಈಗಾಗಲೇ ಮದುವೆಯಾಗಿ ಮಗುವಿದೆ. ಹೀಗಿದ್ದಂಗೆ ಲೀವಿಂಗ್ ರಿಲೇಶನ್‌ನಲ್ಲೇ ಇರೋಣ ಅಂತಾ ಹಂತಕ ಹೇಳಿದ್ದನಂತೆ. ಈ ನಡುವೆ ಜಗಳವಾಗಿ ಮಹಾಲಕ್ಷ್ಮಿ, ಮುಕ್ತಿ ರಂಜನ್ ರಾಯ್ ಮೇಲೆ ಹಲ್ಲೆ ಮಾಡಿದ್ದಳಂತೆ. ಕೋಪದಿಂದ ಮಹಾಲಕ್ಷ್ಮಿ ಕಪಾಳಕ್ಕೆ ಮುಕ್ತಿ ಹೊಡೆದಾಗ ಪ್ರಜ್ಞೆ ತಪ್ಪಿ ಮಹಾಲಕ್ಷಿ ಬಿದ್ದಿದ್ದಾಳೆ.
Advertisement
ಪ್ರಜ್ಞೆ ತಪ್ಪಿ ಬಿದ್ದ ಮಹಾಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಹಂತಕ ಮಲ್ಲೇಶ್ವರದಲ್ಲಿ ಆ್ಯಕ್ಸೆಲ್ ಬ್ಲೇಡ್ ಮತ್ತು ಚಾಕು ಖರೀದಿಸಿ ಹಾಲ್‌ನಲ್ಲಿದ್ದ ಶವವನ್ನ ಸ್ನಾನದ ಮನೆಗೆ ಎಳೆದೊಯ್ದು 59 ಪೀಸ್‌ಗಳನ್ನಾಗಿ ಕತ್ತರಿಸಿದ್ದ. ಬಳಿಕ ಹೆಬ್ಬಗೋಡಿಯ ಸಹೋದರನ ಮನೆಗೆ ಹೋಗಿ ನಡೆದ ಕೃತ್ಯ ಹೇಳಿದ್ದ. ಅದಾದ ಬಳಿಕ ತನ್ನ ಬೈಕ್‌ನಲ್ಲೇ ಮೂರು ದಿನಗಳ ಕಾಲ 1,550 ಕಿಮೀ ಸಂಚಾರ ಮಾಡಿ ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರ, ಒಡಿಶಾ ಕ್ರಾಸ್ ಮಾಡಿ ತನ್ನೂರಾದ ಬೋನಿಪುರ ತಲುಪಿದ್ದ. ಹಂತಕನನ್ನ ಪೊಲೀಸರು ಹುಡುಕ್ತಿದ್ದಾರೆ ಅಂತಾ ಗೊತ್ತಾದಾಗ ತಾಯಿ ಬಳಿ ಎಲ್ಲವನ್ನೂ ಹೇಳಿದ್ದನಂತೆ. ಬೆಳಗಿನ ಜಾವ ಮನೆಯಿಂದ ಹೊರಗೆ ಬಂದು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನೂ ಓದಿ: ಮಹಿಳೆಯ ಭಯಾನಕ ಹತ್ಯೆ ಕೇಸ್ | ಮಹಾಲಕ್ಷ್ಮಿ ಮಗನನ್ನು ಟ್ರ್ಯಾಪ್ ಮಾಡಿದ್ದಳು: ಆರೋಪಿಯ ತಾಯಿ
ಸದ್ಯ ಹಂತಕ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ವೈಯಾಲಿಕಾವಲ್ ಪೊಲೀಸರು ಒಡಿಸ್ಸಾದಿಂದ ವಾಪಸ್ಸಾಗಿದ್ದಾರೆ. ಯುಡಿಆರ್ ರಿಪೋರ್ಟ್ ಆಧಾರದ ಮೇಲೆ ಅಬೇಟೆಡ್ ಚಾರ್ಜ್‌ಶೀಟ್ ಹಾಕಲು ಪೊಲೀಸರು ತಯಾರಿ ನಡೆಸಿದ್ದಾರೆ.