ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿಯನ್ನೇ ನಕಲು ಮಾಡಿ ವಂಚನೆ ಮುಂದಾಗಿದ್ದ ಹಾಗೂ ಆರೋಪಿಗೆ ಸಹಕರಿಸಿದ ಆರೋಪದಡಿ ಇಬ್ಬರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಸಿದ್ದರಾಮಯ್ಯರ ಸಹಿ ಕಾಪಿ ಮಾಡಿದ್ದ ಸಿದ್ಧಾರೂಡ ಸಂಗೊಳ್ಳಿ ಹಾಗೂ ಅಂದಿನ ಸಿಎಂ ಕಚೇರಿಯ ಸ್ಟೆನೊಗ್ರಾಫರ್ ಆಗಿದ್ದ ಗುರುನಾಥ್ ಬಂಧಿತ ಆರೋಪಿಗಳು. ಸಿದ್ಧಾರೂಢ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗೊಳ್ಳಿ ಗ್ರಾಮದವನಾಗಿದ್ದಾನೆ.
Advertisement
ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಹುಟ್ಟೂರಾದ ಗೋಕಾಕ್ ನ ಸಂಗೊಳ್ಳಿಯಲ್ಲಿ ಕುರುಬರ ಭವನ ನಿರ್ಮಾಣಕ್ಕೆ ಸಿದ್ಧಾರೂಢ ಅರ್ಜಿ ಕೊಟ್ಟಿದ್ದನು. ಅಂದಿನ ಸಿಎಂ ಕಚೇರಿಯ ಸ್ಟೆನೊ ಗುರುನಾಥ್ ಜೊತೆ ಸೇರಿ ಸಿದ್ದರಾಮಯ್ಯರ ಸಹಿ ನಕಲು ಮಾಡಿದ್ದನು. ಕುರುಬರ ಸಂಘ ನಿರ್ಮಾಣಕ್ಕೆ 200 ಕೋಟಿ ಹಣ ಮಂಜೂರು ಮಾಡಿರೋದಾಗಿ ಲೆಟರ್ ಮಾಡಿ ಸಿದ್ದರಾಮಯ್ಯರ ಸಹಿ ಮಾಡಿದ್ದನು.
Advertisement
ಈ ಬಗ್ಗೆ ಹಿಂದುಳಿದ ವರ್ಗಗಳ ಡೆಪ್ಯುಟಿ ಸೆಕ್ರೆಟರಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿಗಳಿಬ್ಬರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv