Bengaluru City

ಹೊಸ ವರ್ಷಾಚರಣೆ ಹಿನ್ನೆಲೆ ಸಿಲಿಕಾನ್ ಸಿಟಿಯ 32 ಮೇಲ್ಸೆತುವೆಗಳು ಬಂದ್

Published

on

Share this

ಬೆಂಗಳೂರು: ವ್ಹೀಲಿಂಗ್ ಹಾಗೂ ಅಪಘಾತಗಳಿಗೆ ಕಡಿವಾಣ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ನಗರದ ಪ್ರಮುಖ ಮೇಲ್ಸೆತುವೆಗಳನ್ನು ಮಂಗಳವಾರ ರಾತ್ರಿ ಬಂದ್ ಮಾಡಲಿದ್ದಾರೆ.

ರಾತ್ರಿ 10ರಿಂದ ಬೆಳಗಿನ ಜಾವ 4 ಗಂಟೆಯ ವರೆಗೆ ಒಟ್ಟು 32 ಮೇಲ್ಸೆತುವೆಗಳನ್ನು ಬಂದ್ ಮಾಡಲಾಗುತ್ತದೆ. ಪ್ರಮುಖವಾಗಿ ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ವೈಟ್ ಫೀಲ್ಡ್, ಹೆಚ್‍ಎಸ್‍ಆರ್ ಲೇಔಟ್, ಪುಲಿಕೇಶಿ ನಗರ, ರಿಚ್ಮಂಡ್ ರಸ್ತೆಯ ಮೇಲ್ಸೆತುವೆ, ಡೈರಿ ಸರ್ಜಕಲ್, ಕೆ.ಆರ್.ಮಾರ್ಕೆಟ್, ಆನಂದರಾವ್ ಸರ್ಕಲ್, ಬನಶಂಕರಿ ಮೇಲ್ಸೆತುವೆಗಳನ್ನು ಬಂದ್ ಮಾಡಲಾಗುತ್ತದೆ.

ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗದಂತೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ. 2018 ಹಾಗೂ 2019ರಲ್ಲಿ ಪ್ರತಿ ದಿನ ನೂರಾರು ಅಪಘಾತಗಳು 50 ಸಾವಿರಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಅಪಘಾತಗಳನ್ನು ತಡೆಯಲು ಹಾಗೂ ಕುಡಿದು ವಾಹನ ಚಾಲನೆ ಮಾಡುವ ಸವಾರರಿಗೆ ಬಿಸಿ ಮುಟ್ಟಿಸಲು ಪೊಲೀಸಲು ಪ್ರಮುಖ ಮೇಲ್ಸೆತುವೆಗಳನ್ನು ಬಂದ್ ಮಾಡಲು ಚಿಂತಿಸಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ನಂತರ ಬಹುತೇಕ ವಾಹನ ಸವಾರರು ಮೇಲ್ಸೆತುವೆಗಳ ಮೇಲೆ ಸಂಚರಿಸುವಾಗ ವ್ಹೀಲಿಂಗ್ ಮಾಡಿ ಅಪಘಾತಗಳಿಗೆ ಕಾರಣರಾಗುತ್ತಾರೆ. ಇಂತಹ ಅವಘಡಗಳನ್ನು ತಪ್ಪಿಸಲು ಪೊಲೀಸರು ಪ್ರಮುಖ ಮೇಲ್ಸೆತುವೆಗಳ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement