ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟಕ್ಕೆ ಪ್ರವಾಹ (Flood) ಪರಿಸ್ಥಿತಿ ನಿರ್ಮಾಣ ಆಗಿದೆ. ಪ್ರವಾಹಕ್ಕೆ ಕಾರಣ ಬರೀ ಒತ್ತುವರಿ ಅಂದುಕೊಂಡಿದ್ವಿ. ಆದರೆ ಬೆಂಗಳೂರು ಪ್ರವಾಹಕ್ಕೆ ಮೆಟ್ರೋ (Metro) ಕಾಮಗಾರಿ ಕೂಡ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
Advertisement
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ವರುಣನ ರಣಾರ್ಭಟ ಹೆಚ್ಚಾಗಿದೆ. ಮಳೆರಾಯನ ಆರ್ಭಟಕ್ಕೆ ಇಡೀ ಬೆಂಗಳೂರು (Bengaluru) ಮುಳುಗಡೆ ಆಗಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಪ್ರವಾಹ ಪರಿಸ್ಥಿತಿಗೆ ಕಾರಣ ಒಂದ್ಕಡೆ ರಾಜಕಾಲುವೆ ಒತ್ತುವರಿ ಮತ್ತು ಕೆರೆ ಒತ್ತುವರಿಯಾದರೆ, ಮತ್ತೊಂದು ಕಾರಣ ಬಿಎಂಆರ್ ಸಿಎಲ್ (BMRCL). ಅರ್ಧಂಬರ್ಧ ಮೆಟ್ರೋ ಕಾಮಗಾರಿಯಿಂದ ರಸ್ತೆಗಳಲ್ಲಿ ನೀರು ನಿಂತು ಕೃತಕ ನದಿ ಸೃಷ್ಟಿಯಾಗ್ತಿದೆ. ಇದನ್ನೂ ಓದಿ: ಮಹಾ ಮಳೆಗೆ ವ್ಯಂಗ್ಯ – #LeaveBengaluru ಅಭಿಯಾನ ಆರಂಭಿಸಿದ ಕನ್ನಡಿಗರು
Advertisement
Advertisement
ನಗರದ ಮಾರತಹಳ್ಳಿ, ಸರ್ಜಾಪುರ, ಹೊಸೂರು ಕಡೆ ಮತ್ತು ಏರ್ ಪೋರ್ಟ್ ಕಡೆಗೆ ಮೆಟ್ರೋ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ಅರೆಬರೆ ಕಾಮಗಾರಿಯಿಂದ ಗುಂಡಿ ಬಿದ್ದು ನೀರು ನಿಂತಿದೆ. ರಸ್ತೆಯ ಅರ್ಧಭಾಗ ತಡೆಗೋಡೆಗಳನ್ನ ನಿರ್ಮಾಣ ಮಾಡಿ ನೀರು ಎಲ್ಲಿಯೂ ಹರಿದು ಜಾಗ ಇಲ್ಲದೇ ಕೃತಕ ನದಿಸೃಷ್ಟಿ ಆಗುತ್ತಿದೆ. ಆಡುಗೋಡಿ ಮುಖ್ಯ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಮುಖ್ಯ ರಸ್ತೆಯನ್ನ ಕಿರಿದಾಗಿ ಮಾಡಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಮಳೆ ನೀರು ರಸ್ತೆಯಲ್ಲೇ ನಿಂತು ಸವಾರರು ಪರದಾಡುವಂತಾಗಿದೆ.
Advertisement
ಅರೆಬರೆ ಮೆಟ್ರೋ ಕಾಮಗಾರಿ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಮಳೆಗಾಲ ಶುರುವಾಗುತ್ತೆ ಕಾಮಗಾರಿ ಪೂರ್ಣ ಮಾಡೋಣ ಅಂತಾ ಸಾಮಾನ್ಯ ಜ್ಞಾನ ಇಲ್ಲ. ಅಲ್ಲಲ್ಲಿ ಗುಂಡಿ ನಿರ್ಮಾಣ ಮಾಡೋದು ನೀರು ಹೋಗೋ ಜಾಗದಲ್ಲಿ ಅಗೆಯೋದು ಇದೆಲ್ಲ ನೀರು ನಿಲ್ಲೋದಕ್ಕೆ ಕಾರಣ ಕೂಡಲೇ ಎಚ್ಚೆತ್ತು ಮೆಟ್ರೋ ಕಾಮಗಾರಿ ಬೇಗ ಮುಗಿಸಲಿ ಅಂತಿದ್ದಾರೆ. ಒಟ್ಟಾರೆ ಬೆಂಗಳೂರು ಪ್ರವಾಹಕ್ಕೆ ಮೆಟ್ರೋ ಕೂಡ ಕಾರಣ ಅಂತಾ ಆಕ್ರೋಶ ಹೊರಹಾಕುತ್ತಾ ಇದ್ದಾರೆ. ಕೂಡಲೇ ಬಿಎಂಆರ್ ಸಿಎಲ್ ಎಚ್ಚೆತ್ತು ನೀರು ನಿಲ್ಲದಂತೆ ಕ್ರಮವಹಿಸಿ ಕಾಮಗಾರಿ ಬೇಗ ಮುಗಿಸುತ್ತಾ ಕಾದು ನೋಡಬೇಕಿದೆ.