– ತಿಂಗಳಿಗೆ ಒಂದು ಲಕ್ಷ ಡಿಜಿಟಲ್ ಪಾಸ್ ಸೇಲ್
ಬೆಂಗಳೂರು: ಈಗೇನಿದ್ದರೂ ಡಿಜಿಟಲ್ ಜಮಾನ. ಬೆಳಗ್ಗೆ ಎದ್ದಾಗಿನಿಂದ ಮಲಗೋವರೆಗೂ ಎಲ್ಲವೂ ಆನ್‌ಲೈನ್, ಡಿಜಿಟಲ್ ಮಯ. ಯಾವುದೇ ವಸ್ತುಗಳನ್ನು ಕೊಳ್ಳಬೇಕಾದರೂ ಆನ್‌ಲೈನ್ ಪೇಮೆಂಟ್ ಮಾಡುತ್ತೇವೆ. ಹೀಗಾಗಿ ಬಿಎಂಟಿಸಿ ಬಸ್‌ಗಳಲ್ಲಿಯೂ ಡಿಜಿಟಲ್ ಪೇಮೆಂಟ್ (Digital Payment) ವ್ಯವಸ್ಥೆ ಜಾರಿ ಮಾಡಿದ್ದು, ಈ ಆನ್‌ಲೈನ್ ಪೇಮೆಂಟ್‌ಗೆ ಬೆಂಗಳೂರಿಗರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದೆ.
ಬೆಂಗಳೂರಿಗರ (Bengaluru) ಪ್ರಮುಖ ಸಂಚಾರನಾಡಿ ಅಂದರೆ ಅದು ಬಿಎಂಟಿಸಿ (BMTC) ಬಸ್‌ಗಳು. ಪ್ರತಿನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಬಿಎಂಟಿಸಿಯಲ್ಲಿ ಕ್ಯಾಶ್‌ಲೆಸ್ ಪೇಮೆಂಟ್‌ಗೆ ಒತ್ತುಕೊಟ್ಟಿದ್ದು, 2020ರಿಂದ ಡಿಜಿಟಲ್ ಪೇಮೆಂಟ್, ಕ್ಯೂಆರ್ ಕೋಡ್ ಸಿಸ್ಟಮ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ರಾರಂಭಿಕ ಹಂತದಲ್ಲಿ ಅಷ್ಟಾಗಿ ಜನ ಡಿಜಿಟಲ್ ಪೇಮೆಂಟ್ ಅಥವಾ ಯುಪಿಐ ಪೇಮೆಂಟ್ ಅನ್ನು ಬಳಸುತ್ತಿರಲಿಲ್ಲ. ವರ್ಷದಿಂದ ವರ್ಷಕ್ಕೆ ಡಿಜಿಟಲ್ ಪೇಮೆಂಟ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಸೆಪ್ಟೆಂಬರ್ ಒಂದು ತಿಂಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ 16.5 ಲಕ್ಷ ಜನರು ಡಿಜಿಟಲ್ ಪೇಮೆಂಟ್ ಬಳಸಿದ್ದಾರೆ. ಈ 16.5 ಲಕ್ಷ ಜನರಿಂದ ಬರೋಬ್ಬರಿ ಎಂಟು ಕೋಟಿಗಿಂತ ಹೆಚ್ಚು ಆದಾಯವಾಗಿದೆ. ಅದರಲ್ಲೂ ಬಿಎಂಟಿಸಿಯ ಎಸಿ ವಜ್ರ, ವಾಯುವಜ್ರ ಬಸ್‌ಗಳಲ್ಲಿ 40% ಜನರು ಕ್ಯೂಆರ್ ಕೋಡ್ ಬಳಸಿ ಟಿಕೆಟ್ ದುಡ್ಡು ನೀಡುತ್ತಿದ್ದಾರೆ. ಪ್ರಯಾಣಿಕರು ಕಂಡಕ್ಟರ್ ಕೊರಳಿನಲ್ಲಿರುವ ಕ್ಯೂಆರ್ ಕೋಡಿಗೆ ಸ್ಕ್ಯಾನ್ ಮಾಡಿ ಪೇ ಮಾಡುತ್ತಿದ್ದಾರೆ. ಇದನ್ನೂ ಓದಿ: BBMP ವ್ಯಾಪ್ತಿಯ 110 ಹಳ್ಳಿ ಜನರ ಕನಸು ಶೀಘ್ರ ನನಸು – ಮುಂದಿನ ವಾರದಲ್ಲೇ ಮನೆಗಳಿಗೆ ಬರಲಿದೆ ಕಾವೇರಿ!
ಇದರ ಜೊತೆಗೆ ಡಿಜಿಟಲ್ ಪಾಸ್ ಕೊಳ್ಳುವವರ ಸಂಖ್ಯೆ ಸಹ ಹೆಚ್ಚಾಗಿದೆ. ಒಂದು ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ತಿಂಗಳ ಪಾಸ್‌ಗಳು ಸೇಲ್ ಆಗಿವೆ. ಅದರಲ್ಲಿ 25,000 ಪಾಸ್‌ಗಳು ಬಿಎಂಟಿಸಿಯ ಆಪ್ ಮೂಲಕವೇ ಪ್ರಯಾಣಿಕರು ತೆಗೆದುಕೊಳ್ಳುತ್ತಿದ್ದಾರೆ. ಪ್ರತಿ ನಾಲ್ಕರಲ್ಲಿ ಒಬ್ಬರು ಪಾಸ್ ಅನ್ನು ಡಿಜಿಟಲ್ ಮೂಲಕ ತೆಗೆದುಕೊಳ್ಳುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಆನ್‌ಲೈನ್ ಮೂಲಕವೇ ಹೆಚ್ಚು ಪಾಸ್ ಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮತ್ತೆ ಕ್ಯಾಂಪಸ್ ನೇಮಕಾತಿ ಆರಂಭಿಸಿದ ಭಾರತೀಯ ಐಟಿ ಕಂಪನಿಗಳು
ಇನ್ನೂ ಈ ಡಿಜಿಟಲ್ ಪೇಮೆಂಟ್‌ನಿಂದ ಚಿಲ್ಲರೆ ಸಮಸ್ಯೆ ನಿವಾರಣೆಯಾಗಲಿದೆ. ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವಿನ ವಾಗ್ವಾದ ಕೂಡ ತಪ್ಪಲಿದೆ. ಪ್ರಯಾಣಿಕರು ಇದೊಂದು ಒಳ್ಳೆಯ ಕ್ರಮ ಎನ್ನುತ್ತಾರೆ. ಒಟ್ಟಿನಲ್ಲಿ ಬಿಎಂಟಿಸಿಯ ಕ್ಯಾಶ್‌ಲೆಸ್ ಪೇಮೆಂಟ್ ವ್ಯವಸ್ಥೆಯಿಂದ ಬಿಎಂಟಿಸಿಯ ಅದಾಯ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಲೆಬನಾನ್ ಪೇಜರ್ ಸ್ಫೋಟದ ಹಿಂದೆ ಟ್ಯಾಲೆಂಟೆಡ್ ಬ್ಯೂಟಿ!