ಬೆಂಗಳೂರು: ದೀಪಾವಳಿ ಬಂತು ಅಂದ್ರೆ ಸಾಕು ಪಟಾಕಿ ಅವಾಂತರಗಳಿಗೆ ಕೊನೆ ಎಂಬುದುರ ಇರಲ್ಲ. ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ಹೋಗಿ 8 ಮಕ್ಕಳು ಸೇರಿ 13ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ.
Advertisement
ನಾಗರಬಾವಿಯ 6 ವರ್ಷದ ಬಾಲಕ, ಚಾಮರಾಜಪೇಟೆಯ 7 ವರ್ಷದ ಬಾಲಕ, ಕನಕಪುರದ 9 ವರ್ಷದ ಬಾಲಕ, ರಾಮನಗರದ 11 ವರ್ಷದ ಬಾಲಕ ಸೇರಿ 10 ಮಕ್ಕಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆ, ಬಾಲಕಿ ಸೇರಿ ಮೂವರು ನಾರಾಯಣ ನೇತ್ರಾಲಯದಲ್ಲಿ ಕಣ್ಣಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪಟಾಕಿ ಸ್ಫೋಟಗೊಂಡು ಅಪ್ಪ, ಮಗನ ದೇಹ ಛಿದ್ರ ಛಿದ್ರ
Advertisement
Advertisement
ಬೇಡ ಅಂದ್ರೂ ಜನ ಪಟಾಕಿ ಹೊಡೆಯುತ್ತಿರುವ ಕಾರಣ ದೆಹಲಿ ಮತ್ತೊಮ್ಮೆ ಗ್ಯಾಸ್ ಚೇಂಬರ್ ಆಗಿ ಬದಲಾಗಿದೆ. ಇತ್ತ ಪಟಾಕಿಯನ್ನು ಬೈಕಲ್ಲಿ ಮನೆಗೆ ಕೊಂಡೋಯ್ತಿದ್ದ ಅಪ್ಪ ಮಗ, ಪಟಾಕಿ ಸ್ಫೋಟಕ್ಕೆ ಬಲಿಯಾದ ಘಟನೆ ತಮಿಳುನಾಡಿನ ಕೊಟ್ಟುಪುರಂ ಎಂಬಲ್ಲಿ ನಡೆದಿದೆ. ಸ್ಫೋಟದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ:ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ